• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರತಿದಿನ 24 ಕಿ.ಮೀ ಸೈಕಲ್‌ ಸಂಚಾರ: 10ನೇ ಕ್ಲಾಸ್‌ನಲ್ಲಿ 98.5% ಅಂಕ ಪಡೆದ ವಿದ್ಯಾರ್ಥಿನಿ

|

ಭೋಪಾಲ್, ಜುಲೈ 6: ಪ್ರತಿದಿನ ಸೈಕಲ್‌ನಲ್ಲಿ 24 ಕಿ.ಮೀ ಸೈಕಲ್‌ ಪ್ರಯಾಣ ಮಾಡುತ್ತಿದ್ದ 15 ವರ್ಷದ ರೋಶ್ನಿ ಭಡೌರಿಯಾ ಎಂಬ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಂಟನೇ ಸ್ಥಾನ ಪಡೆದುಕೊಂಡಿದ್ದಾರೆ.

   Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

   ಮಧ್ಯ ಪ್ರದೇಶದ ಬಿಂದ್ ಜಿಲ್ಲೆಯ ಅಜ್ನೌಲ್ ಗ್ರಾಮದ ರೋಶ್ನಿ ಭಡೌರಿಯಾ ಪ್ರಸಕ್ತ ಸಾಲಿನಲ್ಲಿ ನಡೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 98.5 ರಷ್ಟು ಅಂಕ ಗಳಿಸಿ ಪಾಸ್ ಆಗಿದ್ದಾರೆ.

   ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಸುರೇಶ್ ಕುಮಾರ್ ಗೆ ಕಂಗ್ರಾಟ್ಸ್: ಇನ್ನೇನಿದ್ದರೂ ಫಲಿತಾಂಶ

   ರೋಶ್ನಿ ಭಡೌರಿಯಾ ನಿವಾಸದಿಂದ ಶಾಲೆಗೆ 12 ಕಿ.ಮೀ ದೂರವಿದೆ. ಪ್ರತಿದಿನ 24 ಕಿ.ಮೀ ಸೈಕಲ್‌ನಲ್ಲಿ ಶಾಲೆಗೆ ಹೋಗುತ್ತಿದ್ದಳು. ಕೆಲವೊಮ್ಮೆ ತಡವಾಗುವ ಕಾರಣ ಶಾಲೆಯ ಪಕ್ಕದಲ್ಲೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ವಿದ್ಯಾರ್ಥಿನಿಯ ಈ ಸಾಧನೆಗೆ ಕುಟುಂಬಸ್ಥರು ಹಾಗೂ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

   ''ನಾನು ಸರ್ಕಾರ ನೀಡಿರುವ ಸೈಕಲ್‌ ಬಳಸುತ್ತಿದ್ದೇನೆ. ಪ್ರತಿದಿನ ನಾಲ್ಕುವರೆ ಗಂಟೆ ನಾನು ಶಾಲೆಗೆ ಹೋಗಲು ಮತ್ತು ವಾಪಸ್ ಬರಲು ಸಮಯ ತೆಗೆದುಕೊಳ್ಳುತ್ತಿದ್ದೆ. ನಾನು ಭವಿಷ್ಯದಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕು ಎಂದುಕೊಂಡಿದ್ದೇನೆ'' ಎಂದು ರೋಶ್ನಿ ಭಡೌರಿಯಾ ಎಎನ್ಐಗೆ ತಿಳಿಸಿದ್ದಾರೆ.

   'ನಾನು ಇಷ್ಟು ಉತ್ತಮವಾದ ಅಂಕ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ' ಎಂದು ಹೇಳಿರುವ ರೋಶ್ನಿ, ''ಪರೀಕ್ಷೆಗೆ ಚೆನ್ನಾಗಿ ಪೂರ್ವ ಸಿದ್ದತೆ ಮಾಡಿಕೊಂಡಿದ್ದು, ನನ್ನ ತಂದೇ ಸಂಪೂರ್ಣ ಬೆಂಬಲದಿಂದ ನಾನು ಓದಿನ ಕಡೆ ಹೆಚ್ಚು ಗಮನ ಕೊಡಲು ಸಾಧ್ಯವಾಯಿತು'' ಎಂದಿದ್ದಾರೆ.

   ಗಣಿತ ಹಾಗೂ ವಿಜ್ಞಾನದಲ್ಲಿ 100 ಅಂಕ ಪಡೆದಿರುವ ರೋಶ್ನಿ ಭಡೌರಿಯಾ ಇಂಗ್ಲೀಷ್‌ನಲ್ಲಿ 96 ಅಂಕ ತೆಗೆದುಕೊಂಡಿದ್ದಾರೆ. ಇನ್ನು ವೃತ್ತಿಯಲ್ಲಿ ರೈತರಾಗಿರುವ ರೋಶ್ನಿ ಅವರ ತಂದೆ ''ನನ್ನ ಮಗಳು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಳೆ. ನನ್ನ ಕುಟುಂಬಕ್ಕೆ ಹೆಮ್ಮೆ ತಂದಿದ್ದಾಳೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

   ಮಧ್ಯ ಪ್ರದೇಶ ಸರ್ಕಾರವೂ ಶನಿವಾರ 10ನೇ ತರಗತಿಯ ಫಲಿತಾಂಶ ಪ್ರಕಟ ಮಾಡಿತ್ತು.

   English summary
   15-year-old Roshni Bhadauria, who used to cycle for 24 kilometres on a daily basis just to attend school, has secured eighth rank by scoring 98.5 per cent in the Class 10 board exams conducted by Madhya Pradesh state board.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more