SSLC Exam 2024: ಸಿಬ್ಬಂದಿಗಳ ಸಂಭಾವನೆ ಶೇ 5ರಷ್ಟು ಏರಿಕೆ

ಬೆಂಗಳೂರು, ಮಾರ್ಚ್ 23: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 ಸೋಮವಾರದಿಂದ ಆರಂಭವಾಗಲಿದೆ. ಮಾರ್ಚ್ 25ರಿಂದ ಏಪ್ರಿಲ್ 6ರ ತನಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಸಂಭಾವನೆ ಶೇ 5ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಮಾರ್ಚ್/ ಏಪ್ರಿಲ್-2024ರ ಎಸ್‌ಎಸ್ಎಲ್‌ಸಿ ಪರೀಕ್ಷೆ-1 ರ ಪರೀಕ್ಷಾ ಕೇಂದ್ರಗಳಿಗೆ ಸಾದಿಲ್ವಾರು ಮತ್ತು ಸಂಭಾವನೆ ಪೂರ್ಣ ಹಣವನ್ನು ನೆಫ್ಟ್ ಮುಖಾಂತರ ಬಿಡುಗಡೆ ಮಾಡಿರುವ ಬಗ್ಗೆ ಎಂದು ವಿಷಯ ಪ್ರಸ್ತಾಪಿಸಲಾಗಿದೆ.

SSLC Exam 2024 Remuneration Hiked By 5 Per Cent

ಮಾರ್ಚ್/ ಏಪ್ರಿಲ್-2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ದನ್ನು ನಡೆಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಾದಿಲ್ವಾರು ಹಾಗೂ ಸಂಭಾವನೆಯ ಪೂರ್ಣ ಹಣದ ಮೊತ್ತವನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಉಳಿತಾಯ ಖಾತೆಗೆ ನೆಫ್ಟ್ ಮೂಲಕ ಜಮಾ ಮಡಲಾಗಿದೆ.

ಅನಿವಾರ್ಯ ಸಂದರ್ಭದಲ್ಲಿ ನಮೂದಿಸಿರುವ ಹೆಸರಿನ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಬದಲಾವಣೆಯಾಗಿದ್ದಲ್ಲಿ, ಬದಲಿ ನಿಯೋಜಿತ ಮುಖ್ಯ ಅಧೀಕ್ಷಕರು ಮಂಡಳಿಯಿಂದ ನೆಫ್ಟ್ ಮುಖಾಂತರ ರವಾನಿಸಿದ ಹಣವನ್ನು ಬದಲಾದ ಮುಖ್ಯ ಅಧಿಕ್ಷಕರಿಗೆ ಹಸ್ತಾಂತರಿಸುವುದು ಹಾಗೂ ಮಂಡಳಿಗೆ ವರದಿ ಮಾಡುವುದು.

ಸಾದಿಲ್ವಾರು ಹಣ ಸ್ವೀಕೃತಿ ವ್ಯತ್ಯಯಾವಾಗಿರುವ ಬಗ್ಗೆ ಮನವಿಗಳನ್ನು ಪರೀಕ್ಷೆ ಮುಗಿದ ಒಂದು ತಿಂಗಳೊಳಗೆ ಮಂಡಲಿಗೆ ಪತ್ರ ಮುಖೇನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಬಗೆಹರಿಸಿ ಕೊಳ್ಳಬೇಕು. ಪರೀಕ್ಷೆ ಮುಗಿದ 30 ದಿನಗಳ ನಂತರ ಬರುವ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಾದಿಲ್ವಾರು ಸಾಮಗ್ರಿ ಖರೀದಿಸಿದ ರಸೀದಿ ಹಾಗೂ ಸಾದಿಲ್ವಾರು ವೆಚ್ಚದ ಮೂಲ ರಶೀದಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅನಗತ್ಯ ವೆಚ್ಚ ಕಂಡು ಬಂದಲ್ಲಿ ಸಂಬಂಧಿಸಿದವರಿಂದ ಹಣ ವಸೂಲಿ ಮಾಡಲಾಗುವುದು. ಸಾದಿಲ್ವಾರು ಬಿಲ್ಲುಗಳ ಸಹಿತ ಲಗತ್ತಿಸಿರುವ ಎಲ್ಲಾ ಮೂಲ ರಶೀದಿಗಳ ಮೇಲೆ ಮುಖ್ಯ ಅಧೀಕ್ಷಕರು ಹಣ ಸಂದಾಯಗೊಳಿಸಿ ರದ್ದುಗೊಳಿಸಿದೆ ಎಂದು ದೃಢೀಕರಿಸುವುದು. ಖರ್ಚಾದ ಒಟ್ಟು ಹಣ ಬಗ್ಗೆ ಕ್ರೋಢೀಕೃತ ವಿವರಗಳನ್ನು ಸಾದಿಲ್ವಾರು ಬಿಲ್ಲಿನಲ್ಲಿ ನಮೂದಿಸಬೇಕು.

ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಾಚಾರಕರನ್ನು ಹಾಗೂ 10 ಕೊಠಡಿ ಮೇಲ್ವಾಚಾರಕರಿಗೆ ಒಬ್ಬರಂತೆ ಮಾತ್ರ ರಿಲೀವರ್ ಅನ್ನು ನೇಮಿಸಿಕೊಳ್ಳವುದು. ಕಳೆದ ಬಾರಿ ಪರಿಷ್ಕಣೆ ಮಾಡಿದ ದರಗಳಿಗೆ ಈ ಬಾರಿಗೆ ಶೇ. 5ರಷ್ಟು ದರಗಳನ್ನು ಪರಿಷ್ಕರಿಸಿ ಹಣ ಬಿಡುಗಡೆ ಮಾಡಲಾಗಿರುತ್ತದೆ. ಅದರಂತೆ ಸೂಕ್ತ ಕ್ರಮವಹಿಸಲು ಸೂಚಿಸಿದೆ. ಸಂಭಾವನೆಯನ್ನು ಈ ಕೆಳಗಿನ ದರದಲ್ಲಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಯಾರಿಗೆ ಎಷ್ಟು ಸಂಭಾವನೆ?

* ಮುಖ್ಯ ಅಧೀಕ್ಷಕರು. ಕಳೆದ ವರ್ಷ 220 ರೂ. ಇತ್ತು. ಈ ಬಾರಿ 230 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 230ರಂತೆ 7 ಅಧಿವೇಶನಕ್ಕೆ ಒಟ್ಟು 1,610 ರೂ. ಸಂಭಾವನೆ ನಿಗದಿ ಮಾಡಲಾಗಿದೆ.

* ಉಪ ಅಧೀಕ್ಷಕರು. ಕಳೆದ ವರ್ಷ 209 ರೂ. ಇತ್ತು. ಈ ಬಾರಿ 219 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 219ರಂತೆ 7 ಅಧಿವೇಶನಕ್ಕೆ ಒಟ್ಟು 1,533 ರೂ. ಸಂಭಾವನೆ ನಿಗದಿ ಮಾಡಲಾಗಿದೆ.

* ಕಸ್ಟೋಡಿಯನ್. ಕಳೆದ ವರ್ಷ 198 ರೂ. ಇತ್ತು. ಈ ಬಾರಿ 207 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 207ರಂತೆ 7 ಅಧಿವೇಶನಕ್ಕೆ ಒಟ್ಟು 1,449 ರೂ. ಸಂಭಾವನೆ ನಿಗದಿ ಮಾಡಲಾಗಿದೆ.

* ಕೊಠಡಿ ಮೇಲ್ವಿಚಾರಕ. ಕಳೆದ ವರ್ಷ 165 ರೂ. ಇತ್ತು. ಈ ಬಾರಿ 173 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 173ರಂತೆ 7 ಅಧಿವೇಶನಕ್ಕೆ ಒಟ್ಟು 1,038 ರೂ. ಸಂಭಾವನೆ ನಿಗದಿ ಮಾಡಲಾಗಿದೆ.

* ಸ್ಥಾನಿಕ ಜಾಗೃತ ದಳದವರಿಗೆ. ಕಳೆದ ವರ್ಷ 909 ರೂ. ಇತ್ತು. ಈ ಬಾರಿ 950 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಒಟ್ಟು ಅಧಿವೇಶನಕ್ಕೆ 950 ರೂ. ನಿಗದಿ ಮಾಡಲಾಗಿದೆ.

* ಮೊಬೈಲ್ ಸ್ವಾಧೀನಧಿಕಾರಿಗಳಿಗೆ. ಕಳೆದ ವರ್ಷ 110 ರೂ. ಇತ್ತು. ಈ ಬಾರಿ 116 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 116ರಂತೆ 6 ಅಧಿವೇಶನಕ್ಕೆ ಒಟ್ಟು 696 ರೂ.ಗಳು.

* ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಪೊಲೀಸ್ ಸಿಬ್ಬಂದಿಗೆ. ಕಳೆದ ವರ್ಷ 145*6=870 ರೂ. ಇತ್ತು. ಈ ಬಾರಿ 152*6=912ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 152ರಂತೆ 6 ಅಧಿವೇಶನಕ್ಕೆ ಒಟ್ಟು 912 ರೂ.ಗಳು.

* ಪರೀಕ್ಷಾ ಕೇಂದ್ರಗಳ ಸಹಾಯಕರು (ಪ್ರದಸ/ ದ್ವಿದಸ). ಕಳೆದ ವರ್ಷ 110 ರೂ. ಇತ್ತು. ಈ ಬಾರಿ 115 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 115ರಂತೆ 7 ಅಧಿವೇಶನಕ್ಕೆ ಒಟ್ಟು 805 ರೂ. ಗಳು.

* ಡಿ- ದರ್ಜೆ ನೌಕರ. ಕಳೆದ ವರ್ಷ 83 ರೂ. ಇತ್ತು. ಈ ಬಾರಿ 87 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪ್ರತಿ ಅಧಿವೇಶನಕ್ಕೆ ರೂ. 87ರಂತೆ 7 ಅಧಿವೇಶನಕ್ಕೆ ಒಟ್ಟು 609 ರೂ. (ವಿದ್ಯಾರ್ಥಿ ಸಂಖ್ಯೆ 400 ರ ವರೆಗೆ ಇಬ್ಬರು, 401ಕ್ಕಿಂತ ಮೇಲ್ಪಟ್ಟು 3 ಜನ).

* ಪರೀಕ್ಷಾ ಸಾದಿಲ್ವಾರು. ಕಳೆದ ವರ್ಷ 11 ರೂ. ಇತ್ತು. ಈ ಬಾರಿ 12 ರೂ.ಗಳಗೆ ಏರಿಕೆ ಮಾಡಲಾಗಿದ್ದು. ಪೂರ್ಣ ಪರೀಕ್ಷಾ ಅವಧಿಗೆ ಒಬ್ಬ ವಿದ್ಯಾರ್ಥಿಗೆ ರೂ. 12ರಂತೆ ಸಾದಿಲ್ವಾರು ಮೊತ್ತವನ್ನು ಪರೀಕ್ಷಾ ಕೇಂದ್ರದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ.

ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಕಛೇರಿ ಸಹಾಯಕರು ಹಾಗೂ ಗ್ರೂಪ್ - ಡಿ ಸಿಬ್ಬಂದಿರವರಿಗೆ ಪರೀಕ್ಷಾ ಪ್ರಾರಂಭದ ಹಿಂದಿನ ದಿನ ಅರ್ಧ ದಿನ ಹಾಗೂ ಪರೀಕ್ಷಾ ನಂತರದ ಅರ್ಧ ದಿನವನ್ನು ಪರಿಗಣಿಸಿ ಒಟ್ಟು ಏಳು (7) ದಿನಗಳಿಗೆ ಮಾತ್ರ ಸಂಭಾವನೆ ಬಿಡುಗಡೆ ಮಾಡಲಾಗಿರುತ್ತದೆ.

ಇಲಾಖೆಯಿಂದ ನೇಮಕವಾದ ಸ್ಥಾನಿಕ ಜಾಗೃಕ ದಳದ ಸಿಬ್ಬಂದಿಗೆ ಒಬ್ಬರಿಗೆ ಪರೀಕ್ಷೆ ಕೊನೆಯ ದಿನ ನಿಗದಿ ಪಡಿಸಿರುವ ಸಂಭಾವನೆಯನ್ನು ಪಾವತಿ ಮಾಡಿ ಸ್ವೀಕೃತಿ ಕಳುಹಿಸತಕ್ಕದ್ದು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 351 ರಿಂದ 550 ರವರೆಗೆ ಒಬ್ಬರು ಉಪ ಮುಖ್ಯ ಅಧೀಕ್ಷಕರು ಮತ್ತು 551 ರಿಂದ 750 ರವರೆಗೆ ಇಬ್ಬರು ಉಪ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+