SSLC & 2nd PU Exams 2024: ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಮಾಹಿತಿ, ವಿವರ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 01: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ . ಹಾಗಾದರೆ 2024ನೇ ಸಾಲಿನ SSLC ಮತ್ತು ದ್ವಿತೀಯ PUC ಪರೀಕ್ಷೆ-1ರ ತಾತ್ಕಲಿಕ ವೇಳಾಪಟ್ಟಿಯನ್ನು ಇಲ್ಲಿ ಗಮನಿಸಿ.
ಶುಕ್ರವಾರ (ಡಿಸೆಂಬರ್ 01) ಪರೀಕ್ಷಾ ಮಂಡಳಿಯ ಜಾಲತಾಣದಲ್ಲಿ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಇನ್ನು ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 1ರಿಂದ ಅಂದರೆ ಇಂದಿನಿಂದ 15ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಇನ್ನು ಇಲ್ಲಿ ಯಾವ್ಯಾವ ದಿನ ಯಾವ ಪರೀಕ್ಷಗಳು ನಡೆಯಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎರಡೂ ಪರೀಕ್ಷೆಗಳಿಗೆ 15 ನಿಮಿಷಗಳ ಓದುವ ಸಮಯದೊಂದಿಗೆ ಪ್ರಥಮ ಭಾಷೆ ಮತ್ತು ಇತರ ಐಚ್ಛಿಕ ವಿಷಯಗಳನ್ನು ಬರೆಯಲು ಒಟ್ಟು 3 ಗಂಟೆಗಳ ಕಾಲ ನಿಗದಿಪಡಿಸಲಾಗಿದೆ. ಹಾಗೆಯೇ ದ್ವಿತೀಯ ಮತ್ತು ತೃತೀಯ ಭಾಷೆಯ ವಿಷಯಗಳ ಪರೀಕ್ಷೆ ಬರೆಯಲು ಬರೆಯಲು 2 ಗಂಟೆ 45 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯು 2024ರ ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ನಡೆಯಲಿದೆ. ಅದೇ ರೀತಿ SSLC ಪರೀಕ್ಷೆ ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ.
ದ್ವಿತೀಯ ಪಿಯುಸಿ ವೇಳಾಪಟ್ಟಿ
ಮಾರ್ಚ್ 2 ಕನ್ನಡ, ಅರೇಬಿಕ್, ಮಾರ್ಚ್ 4 ಇತಿಹಾಸ, ಭೌತಶಾಸ್ತ್ರ, ಮಾರ್ಚ್ 5 ಮಾಹಿತಿ ತಂತ್ರಜ್ಞಾನ, ರಿಟೈಲ್, ಅಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಮಾರ್ಚ್ 6 ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಇನ್ನು ಮಾರ್ಚ್ 7 ಹಿಂದಿ, ಮಾರ್ಚ್ 9 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 11 ಇಂಗ್ಲೀಷ್, ಮಾರ್ಚ್ 12 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾರ್ಚ್ 13 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ (Business Studies) ಮಾರ್ಚ್ 14ಕ್ಕೆ ಗಣಿತ, ಶಿಕ್ಷಣ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಮಾರ್ಚ್ 16 ಭೌಗೋಳ ಶಾಸ್ತ್ರ, ಜೀವ ಶಾಸ್ತ್ರ, ಮಾರ್ಚ್ 18 ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ಕೆಮಿಸ್ಟ್ರಿ, ಮೂಲ ಗಣಿತ, ಮಾರ್ಚ್ 20 ಐಚ್ಛಿಕ ಕನ್ನಡ, ಅಕೌಂಟನ್ಸಿ, ಭೂವಿಜ್ಞಾನ (Geology), ಗೃಹ ವಿಜ್ಞಾನ, ಮಾರ್ಚ್ 22ಕ್ಕೆ ಅರ್ಥಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
SSLC ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 25 ಪ್ರಥಮ ಭಾಷೆ ಕನ್ನಡ, ಮಾರ್ಚ್ 27 ಸಮಾಜ ವಿಜ್ಞಾನ, ಮಾರ್ಚ್ 30 ವಿಜ್ಞಾನ, ಏಪ್ರಿಲ್ 2 ಗಣಿತ, ಏಪ್ರಿಲ್ 4 ತೃತೀಯ ಭಾಷೆ ಹಿಂದಿ, ಏಪ್ರಿಲ್ 6ಕ್ಕೆ ದ್ವಿತೀಯ ಭಾಷೆ ಇಂಗ್ಲೀಷ್ ಪರೀಕ್ಷೆ ನಡೆಯಲಿದೆ.












Click it and Unblock the Notifications