ತಾಯಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರೂ ಮಗು ಬುವಿ ಕಂಡಿತು!

ಭೋಪಾಲ್, ಡಿಸೆಂಬರ್ 20: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಗುರುವಾರ ಅಚ್ಚರಿಯ ಹಾಗೂ ಅಪರೂಪದ ಘಟನೆಯೊಂದು ವರದಿಯಾಗಿದೆ. ಗರ್ಭ ಧರಿಸಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆಕೆಯ ಮಗುವನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಎಸ್ ಪಿ ವಿವೇಕ್ ಲಾಲ್ ಗೆ ಬೆಳಗ್ಗೆ ಸಂದೇಶ ಬಂದಿತ್ತು. ಸಂತೋಷ್ ಸಿಂಗ್ ಎಂಬುವರ ಪತ್ನಿ ಲಕ್ಷ್ಮಿ ಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಯಿತು. ಅಲ್ಲಿಗೆ ಎಸ್ ಐ ಕವಿತಾ ಸಹಾನಿ ಅವರು ತಲುಪುವುದರೊಳಗೆ ಹಸುವಿನ ಹಗ್ಗದಲ್ಲಿ ಲಕ್ಷ್ಮಿ ಬಾಯಿ ನೇಣು ಹಾಕಿಕೊಂಡಿರುವುದು ಕಂಡುಬಂದಿತ್ತು.

ಅಚ್ಚರಿಯ ಸಂಗತಿ ಏನೆಂದರೆ, ಹೊಕ್ಕುಳ ಬಳ್ಳಿಯ ಜತೆಗೆ ಜೋತಾಡುತ್ತಿದ್ದ ಮಗು ಲಕ್ಷ್ಮಿ ಬಾಯಿ ಶವದ ಕಾಲಿನ ಬಳಿ ಕಂಡುಬಂತು. ಕೂಡಲೇ ಎಸ್ಸೈ ಕವಿತಾ ಅವರು ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿದೆ.

Pregnant mom commits suicide, woman cop saves her baby in MP village

ಮಗುವಿನ ಸ್ಥಿತಿ ಸ್ಥಿರವಾಗಿದೆ. "ನೇಣು ಹಾಕಿಕೊಂಡ ಪ್ರಕರಣಗಳನ್ನು ಹಲವು ನೋಡಿದ್ದೇನೆ. ಆದರೆ ಇದು ವಿಭಿನ್ನ. ಮಗು ಅಳುತ್ತಿತ್ತು ಕಾಲಿನ ಬಳಿ ಹೊಕ್ಕುಳ ಬಳಿ ಸಮೇತ ನೇತಾಡುತ್ತಿತ್ತು. ಬಹಳ ಚಳಿಯ ವಾತಾವರಣ ಇದ್ದುದರಿಂದ ಬಟ್ಟೆಯಲ್ಲಿ ಸುತ್ತಿ, ಕೂಡಲೇ ಆಸ್ಪತ್ರೆಗೆ ಕರೆತಂದೆ" ಎಂದು ಸಹಾನಿ ಹೇಳಿದ್ದಾರೆ.

ಆ ಮಗುವಿಗೆ ಎಂಟು ತಿಂಗಳು ಪೂರ್ತಿಯಾದಂತೆ ಅನಿಸುತ್ತಿದೆ. ಅದು ಬದುಕುವ ಅವಕಾಶ ಚೆನ್ನಾಗಿದೆ. ಸದ್ಯಕ್ಕೆ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಲಕ್ಷ್ಮೀಬಾಯಿ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆಕೆಯ ಅಂತ್ಯಸಂಸ್ಕಾರವನ್ನು ಮಾಡುವುದರಲ್ಲಿ ಆಕೆಯ ಕುಟುಂಬ ತೊಡಗಿದೆ. ಆ ಕಾರ್ಯ ಮುಗಿದ ಮೇಲೆ ಹೇಳಿಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀಬಾಯಿಯ ಪತಿ ಕೃಷಿಕರು. ಈ ದಂಪತಿಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ಆಕೆ ಜತೆಗೆ ಯಾವುದೇ ಜಗಳ ಇರಲಿಲ್ಲ ಎಂದು ಪತಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+