'15 ದೊಡ್ಡ ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ಕೇಂದ್ರದಿಂದ ಮನ್ನಾ'

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಡಿದ್ದು, ಕೇಂದ್ರ ಸರಕಾರವು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರುಪಾಯಿ ಬೆಂಬಲ ಘೋಷಣೆ ಮಾಡುತ್ತಾರೆ. ಆದರೆ 15 ದೊಡ್ಡ ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ರುಪಾಯಿ ಮನ್ನಾ ಮಾಡಿದೆ ಎಂದು ಅವರು ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯವು ಫ್ರಾನ್ಸ್ ಸರಕಾರದ ಜತೆಗೆ ಮಾತುಕತೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದ್ಯ ಖಾತ್ರಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

Modi led central government wrote off 3.5 lakh crore debt of industrialists, said Rahul Gandhi

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಿಸಾನ್ ಆಧಾರ್ ಸಮ್ಮೇಳನ್ ನಲ್ಲಿ ಮಾತನಾಡಿದ ಅವರು, ರೈತರಿಗೆ ನಗದು ವರ್ಗಾವಣೆ ಮಾಡುವ ವಿಚಾರವನ್ನು ಬಿಜೆಪಿಯವರು ಹೊಗಳಿಕೊಳ್ಳುತ್ತಿದ್ದಾರೆ. ಒಂದು ಕಡೆ ದಿನಕ್ಕೆ ಹದಿನೇಳು ರುಪಾಯಿಯಂತೆ ರೈತರಿಗೆ ನೀಡುತ್ತಾರೆ. ಇನ್ನೊಂದು ಕಡೆ ಹದಿನೈದು ದೊಡ್ಡ ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ಮನ್ನಾ ಮಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಕೂಡ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+