ಮಧ್ಯಪ್ರದೇಶದಲ್ಲಿ ನ.28ರಂದು 230ಕ್ಷೇತ್ರಗಳಲ್ಲಿ ಮತದಾನ

ಭೋಪಾಲ್, ನವೆಂಬರ್ 27: ಭಾರತದ ಮಧ್ಯ ಭಾಗದಲ್ಲಿರುವ ರಾಜ್ಯ ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 230 ವಿಧಾನಸಭಾ ಕ್ಷೇತ್ರಗಳಲ್ಲಿ 2,907 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಡಿಸೆಂಬರ್ 11ರಂದು ಇವೆರಲ್ಲರ ಭವಿಷ್ಯ ನಿರ್ಧಾರವಾಗಲಿದೆ.

ಪಂಚರಾಜ್ಯಗಳ ಚುನಾವಣೆ ಪೈಕಿ ಮಿಜೋರಾಂ ಹಾಗೂ ಮಧ್ಯಪ್ರದೇಶಗಳಲ್ಲಿ ಏಕಕಾಲಕ್ಕೆ ಒಂದೇ ಹಂತದಲ್ಲಿ ನವೆಂಬರ್ 28ರಂದು ಮತದಾನ ನಡೆಯಲಿದೆ. ಡಿಸೆಂಬರ್ 11ರಂದು ಈ ಎರಡು ರಾಜ್ಯಗಳಲ್ಲದೆ ಛತ್ತೀಸ್ ಗಢ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ ಕೂಡ ಹೊರಬೀಳಲಿದೆ.

ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ 15 ವರ್ಷಗಳಿಂದ ಇಲ್ಲಿ ಬಿಜೆಪಿ ರಾಜ್ಯಭಾರ ಮಾಡುತ್ತಿದ್ದು, ಈ ಬಾರಿ ಕೂಡಾ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಸ್ಥಾಪನೆಯಾಗಬಹುದು ಬಹುತೇಕ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮುಂಬರುವ ಸಾರ್ವತ್ರಿಕ ಚುನಾವಣೆ 2019ಕ್ಕೆ ಈ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ.

Madhya Pradesh Assembly Polls 2018 goes for Polling on Nov 28

230 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 1,102 ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ.ಮಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದಿಂದ 227 ಅಭ್ಯರ್ಥಿಗಳು ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ(ಎಸ್ ಪಿ)ದಿಂದ 51 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಭಿಂಡ್ ಜಿಲ್ಲೆಯ ಮೆಹ್ ಗಾಂವ್ ಕ್ಷೇತ್ರದಲ್ಲಿ ಸುಮಾರು 34 ಮಂದಿ ಅಭ್ಯರ್ಥಿಗಳಿದ್ದು, ಗರಿಷ್ಠ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವೆನಿಸಿದೆ. ಪನ್ನಾ ಜಿಲ್ಲೆಯ ಗುನ್ನೋರ್ ಕ್ಷೇತ್ರದಲ್ಲಿ ಅತಿ ಕಡಿಮೆ(4) ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+