10ನೇ ತರಗತಿ ಪಾಸ್ ಮಾಡಿದ ಬಡ ವಿದ್ಯಾರ್ಥಿನಿಗೆ ದುಬಾರಿ ಗಿಫ್ಟ್
ಭೋಪಾಲ್, ಜುಲೈ 9: ವಾಸಿಸಲು ಸೂರಿಲ್ಲದಿದ್ದರೂ ಛಲ ಬಿಡದೆ ಓದಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಭಾರತಿಗೆ ಇಂದೋರ್ ಸ್ಥಳೀಯ ಆಡಳಿತ ಫ್ಲಾಟ್ ಒಂದನ್ನು ಉಡುಗೊರೆಯಾಗಿ ನೀಡಿದೆ.
ಆಕೆಯ ತಂದೆ-ತಾಯಿ ಕೂಲಿ ಮಾಡಿ ಜೀವನ ಸಾಗಿಸುವವರಾಗಿದ್ದಾರೆ. ಆದರೂ ಮಗಳನ್ನು ಓದಿಸಿದ್ದಾರೆ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದಂತಹ ಪರಿಸ್ಥಿತಿ ಅವರದ್ದು. ಆಕೆ ಸರ್ಕಾರಿ ಶಾಲೆಯನ್ನು ಸೇರಿಕೊಂಡು ಓದಿ ಉತ್ತೀರ್ಣಳಾಗಿದ್ದಾಳೆ.
ಕೂಡಲೇ ವಿಷಯ ತಿಳಿದ ನಗರಸಭೆ ಆಕೆಯನ್ನು ಪತ್ತೆ ಮಾಡಿ ಆಕೆಯ ಪೋಷಕರು ಹಾಗೂ ಆಕೆಗೆ ತನ್ನ ವ್ಯಾಪ್ತಿಯಲ್ಲಿರುವ ಪ್ಲಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಭಾರತಿ, ನನ್ನನ್ನು ಪ್ರೋತ್ಸಾಹಿಸಿ ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾಳೆ. ಹಾಗೆಯೇ ಉಳಿದುಕೊಳ್ಳಲು ಸೂರಿಲ್ಲದಿರುವ ಕುಟುಬಕ್ಕೆ ಫ್ಲಾಟ್ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾಳೆ.
ಕೊರೊನಾ ನಡುವೆಯೂ ಪರೀಕ್ಷೆ ಬರೆದು ಪ್ರಥಮ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ. ಕೂಡಲೇ ವಿಷಯ ತಿಳಿದ ಸ್ಥಳೀಯ ನಗರಸಭೆ ಆಕೆಯನ್ನು ಪತ್ತೆ ಮಾಡಿದ್ದಾರೆ.
ಭಾರತಿ ಇಂದೋರ್‌ನ ಕೂಲಿಕಾರ್ಮಿಕರ ಪುತ್ರಿಯಾಗಿದ್ದಾಳೆ. ಆಕೆಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು, ಮುಂದೆಯೂ ಕೂಡ ಆಕೆಗೆ ಶಿಕ್ಷಣವನ್ನು ಉಚಿತವಾಗಿ ನೀಡುವ ಭರವಸೆಯನ್ನು ಆಕೆಗೆ ನೀಡಲಾಗಿದೆ. ನಗರಸಭೆಯ ಈ ಕಾರ್ಯವನ್ನು ಸಾರ್ವಜನಿಕರು ಕೊಂಡಾಡಿದ್ದಾರೆ.












Click it and Unblock the Notifications