ಮಧ್ಯಪ್ರದೇಶದಲ್ಲಿ 16 ಕಡೆ GST ಗುಪ್ತಚರ ನಿರ್ದೇಶನಾಲಯ ದಾಳಿ: 225 ಕೋಟಿ ಮೌಲ್ಯದ ತಂಬಾಕು ಉತ್ಪನ್ನ ಪತ್ತೆ

ಮಧ್ಯಪ್ರದೇಶ, ಜೂನ್ 13: ಕೇಂದ್ರ ಸರ್ಕಾರ ನಿನ್ನೆಯಷ್ಟೇ (ಜೂನ್ 13)ರಂದು ಜಿಎಸ್‌ಟಿ ಮಂಡಳಿಯ 37ನೇ ಸಭೆಯನ್ನು ನಡೆಸಿತು. ಜಿಎಸ್‌ಟಿ ಆದಾಯ ಕುಸಿತದ ಕುರಿತು ಚರ್ಚೆಯನ್ನು ನಡೆಸಲಾಯಿತು. ಆದಾಯ ಹೆಚ್ಚಿಸಲು ನಾನಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಇಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮಧ್ಯಪ್ರದೇಶದಲ್ಲಿ ದಾಳಿ ನಡೆಸಿದ್ದು ಭಾರೀ ಪ್ರಮಾಣದ ಜಿಎಸ್‌ಟಿ ವಂಚನೆಯ ಉತ್ಪನ್ನಗಳು ವಶಪಡಿಸಿಕೊಂಡಿದೆ.

Recommended Video

      ಅಮೂಲ್ಯ ಲಿಯೊನಾ ಸಿಕ್ಕಿದೆ ಬೇಲ್..! | Amulya Leone gets bail | Oneindia Kannada

      ಮಧ್ಯಪ್ರದೇಶದ 3 ಪಾನ್ ಮಸಾಲ ಮತ್ತು ತಂಬಾಕು ಕಂಪನಿಗಳ 16 ಸ್ಥಳಗಳಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ ಜಂಟಿ ದಾಳಿ ನಡೆಸಿದೆ. ಈ ವೇಳೆ ಜಿಎಸ್‌ಟಿ ವಂಚನೆಯ 225 ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ ಎಂದು ಜಿಎಸ್‌ಟಿ ನಿರ್ದೇಶನಾಲಯ ಜನರಲ್ ತಿಳಿಸಿದ್ದಾರೆ.

      GST Evasion Amounting To Rs 225 Crore Was Detected In Madhya Pradesh

      ಇದರ ಜೊತೆಗೆ ಪಾನ್ ಮಸಾಲ ಅಥವಾ ತಂಬಾಕಿನ ಉತ್ಪಾದನೆಗೆ ಬಳಸಲಾಗುವ 1.74 ಕೋಟಿ ಮೌಲ್ಯದ ಕಚ್ಚಾ ಸಾಮಗ್ರಿಗಳು, 15 ಯಂತ್ರಗಳು ಮತ್ತು 10 ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಮುಖ್ಯಸ್ಥರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+