ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಸಿಕ್ತು ನವಾಬ್ ಕುಟುಂಬ ಬೆಂಬಲ
ಜೈಪುರ,ನವೆಂಬರ್ 23: ರಾಜಸ್ಥಾನ ಪ್ರದೇಶ ಕಾಂಗೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಅವರಿಗೆ ಹಿತವಾದ ಸುದ್ದಿಯೊಂದು ಸಿಕ್ಕಿದೆ. ಟೊಂಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಚಿನ್ ಅವರಿಗೆ ವಸುಂಧರಾ ರಾಜೇ ಸರಕಾರದ ಪ್ರಮುಖ ಸಮುಖ ಯೂನಸ್ ಖಾನ್ ಅವರು ಸ್ಪರ್ಧಿಯಾಗಿದ್ದಾರೆ.
ಸಚಿನ್ ಪೈಲಟ್ ಅವರಿಗೆ ಸರಿಯಾದ ಪ್ರತಿಸ್ಪರ್ಧಿ ನೀಡುವ ಕಾರಣದಿಂದ ಈ ಹಿಂದೆ ಘೋಷಿಸಿದ್ದ ಅಭ್ಯರ್ಥಿಯ ಬದಲಿಗೆ ಯೂನಸ್ ಖಾನ್ ಗೆ ಟಿಕೆಟ್ ನೀಡಲಾಗಿದೆ.
ಮುಸ್ಲಿಮರ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಿಲಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿರೀಕ್ಷಿತವಾಗಿದೆ.

ಆದರೆ, ಇನ್ನೊಂದೆಡೆ ಟೊಂಕ್ ಕ್ಷೇತ್ರದ ನವಾಬ್ ಕುಟುಂಬಸ್ಥರು, ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ನವಾಬ್ ಕುಟುಂಬದ ಮುಖಸ್ಥ ಅಫ್ತಾಬ್ ಅಲಿ ಖಾನ್ ಅವರು ಸಚಿನ್ ಪೈಲಟ್ ಗೆ ಮತ ಹಾಕುವಂತೆ ತಮ್ಮ ಪರಿವಾರ, ನಂಬಿಕಸ್ಥರಿಗೆ ಕರೆ ನೀಡಿದ್ದಾರೆ.
ಸರಿ ಸುಮಾರು 8,500 ಕ್ಕೂ ಅಧಿಕ ಮಂದಿ ಮತದಾರರನ್ನು ನವಾಬ್ ಕುಟುಂಬ ಹೊಂದಿದೆ. ರಾಜಕೀಯದಿಂದ ದೂರ ಉಳಿದಿದ್ದ ಟೊಂಕ್ ನ ನವಾಬರು ಈ ಬಾರಿ ಸಚಿನ್ ಪೈಲಟ್ ಪರ ನಿಂತಿದ್ದಾರೆ.












Click it and Unblock the Notifications