ದಿಗ್ವಿಜಯ್ ಯಶಸ್ಸಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಮಹಾ ಯಜ್ಞ

ಭೋಪಾಲ್, ಮೇ 07: ಸಾವಿರಾರು ಸಾಧು ಸಂತರ ಸಮ್ಮುಖದಲ್ಲಿ ಕಂಪ್ಯೂಟರ್ ಬಾಬಾ ಅವರ ನೇತೃತ್ವದಲ್ಲಿ 'ಹಠ ಯೋಗ' ಪ್ರದರ್ಶನ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕ್ಕೊಳಲಾಗಿತ್ತು.

ಬಿಜೆಪಿಯ ಖಾವಿಧಾರಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಅವರು ಲೋಕಸಭೆ ಚುನಾವಣೆಯಲ್ಲಿ ಜಯಶೀಲರಾಗಲು ವಿಶೇಷ ಹೋಮ ಹವನ ನಡೆಸಲಾಗಿದೆ.

Computer Baba Runs Maha Yagna Hat Yoga For Digvijaya Singhs Success

ಶಿವರಾಜ್ ಸಿಂಗ್ ಅವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನರ್ಮದಾ ನದಿ ಜೋಡಣೆ ಯೋಜನೆಯ ನೇತೃತ್ವ ವಹಿಸಿ, ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿದ್ದ ಕಂಪ್ಯೂಟರ್ ಬಾಬಾ ಅಲಿಯಾಸ್ ನಾಮದಾಸ್ ತ್ಯಾಗಿ ಅವರೇ ಈಗ ದಿಗ್ವಿಜಯ್ ಪರ ಪ್ರಾರ್ಥನೆ ಸಲ್ಲಿಸಿದ ಖಾವಿಧಾರರ ನೇತೃತ್ವವಹಿಸಿದ್ದು ವಿಶೇಷವಾಗಿತ್ತು.

ಬಿಜೆಪಿ ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್ ಬಣದಲ್ಲಿ ಕಾಣಿಸಿಕೊಂಡ ಕಂಪ್ಯೂಟರ್ ಬಾಬಾ ಅವರು ಮಾತನಾಡಿ, ಸಾಧು ಸಂತರ ಸಮುದಾಯಕ್ಕೆ ಬಿಜೆಪಿಯಿಂದ ಭಾರಿ ಅನ್ಯಾಯವಾಗಿದೆ. ಸಾರ್ವಜನಿಕರಲ್ಲದೆ, ಸಾಧುಗಳನ್ನು ಬಿಜೆಪಿ ಮೋಸ ಮಾಡಿದೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ದಿಗ್ವಿಜಯ್ ಅವರ ಗೆಲುವಿಗಾಗಿ ಯಜ್ಞದಲ್ಲಿ ತೊಡಗಿದ್ದಾರೆ. ರಾಮ ಮಂದಿರ ಇಲ್ಲದಿದ್ದರೆ ಮೋದಿ ಸರ್ಕಾರವೂ ಇಲ್ಲ ಎಂಬುದು ಇಲ್ಲಿರುವವರ ಒಕ್ಕೊರಲ ಮಂತ್ರವಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+