ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?

ಇಂಧೋರ್, ನವೆಂಬರ್ 19: ಮಧ್ಯಪ್ರದೇಶದಲ್ಲಿ ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾರ್ಯಕರ್ತರ ಬದಲಾಗಿ ಆರೆಸ್ಸೆಸ್ ಕಾರ್ಯಕರ್ತರ ಬಳಿ ಜನಾಭಿಪ್ರಾಯ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಬೇರೆ ರಾಜ್ಯಗಳಿಂದಲೂ ಆರೆಸ್ಸೆಸ್ ಕಾರ್ಯಕರ್ತರ ನೆರವನ್ನೂ ಬಿಜೆಪಿ ಬೇಡಿದೆ.

ಪಕ್ಷದ ಕಾರ್ಯಕರ್ತರಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಆರೆಸ್ಸೆಸ್ ಕಾರ್ಯಕರ್ತರ ಬಳಿ ಪ್ರತಿಕ್ರಿಯೆ ಸಂಗ್ರಹಿಸಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹೆಚ್ಚಾಗಿ ಜನರೊಂದಿಗೆ ಸಂಪರ್ಕ ಹೊಂದಿರುವ ಕಾರಣ ಅವರಿಗೆ ಜನರ ಮನಸ್ಥಿತಿ ಮತ್ತು ಯಾವ ಪಕ್ಷದ ಬಗ್ಗೆ ಜನರಿಗೆ ಒಲವಿದೆ ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಆ ಕಾರಣದಿಂದ ಅವರ ಪ್ರತಿಕ್ರಿಯೆ ಹೆಚ್ಚು ನಿಖರವಾಗಿರುತ್ತದೆ ಎಂಬುದು ಬಿಜೆಪಿಯ ಅಭಿಪ್ರಾಯ.

ಈ ಕಾರಣದಿಂದಲೇ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಆರೆಸ್ಸೆಸ್ ಕಾರ್ಯಕರ್ತರನ್ನು ಆಯಾ ಕ್ಷೇತ್ರಗಳ ಜನಾಭಿಪ್ರಾಯದ ಅಧ್ಯಯನಕ್ಕೂ ಕಳಿಸುತ್ತದೆ. ಎಷ್ಟೋ ಬಾರಿ ಈ ಅಭಿಪ್ರಾಯದ ಆಧಾರದ ಮೇಲೆಯೇ ಚುನಾವಣೆಗೆ ಟಿಕೆಟ್ ಅನ್ನೂ ನೀಡಲಾಗುತ್ತದೆ.

BJP asks feedback from RSS for Madhya Pradesh assembly elections

ಭೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸಿ, 2019 ರ ಲೋಕಸಭಾ ಚುನಾವಣೆಯಲ್ಲೂ ಭರ್ಜರಿ ಜಯಗಳಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಆರೆಸ್ಸೆಸ್ ನೆರವು ಅತ್ಯಗತ್ಯವಾಗಿದೆ.

230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+