13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಭೋಪಾಲ್, ಜನವರಿ 17: ಮಧ್ಯಪ್ರದೇಶದಲ್ಲಿ 13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ 15 ದಿನಗಳ ಸಮ್ಮಾನ್ ಅಭಿಯಾನದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಐದು ದಿನಗಳ ಅಂತರದಲ್ಲಿ 13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದ 9 ಮಂದಿ ಪೈಕಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರವು ರಾಜ್ಯಾದ್ಯಂತ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಹದಿನೈದು ದಿನಗಳ ಕಾಲ ಸಾರ್ವಜನಿಕ ಜಾಗೃತಿಮೂಡಿಸಲಾಗುತ್ತಿತ್ತು.

 13-Year-Old Raped Twice By 9 In Five Days In Madhya Pradesh

ಮೊದಲು ಜನವರಿ 4ರಂದು ಬಾಲಕಿಯನ್ನು ಪರಿಚಿತ ಯುವಕನೇ ಅಪಹರಿಸಿ ನಂತರ ಆತನ ಆರು ಸ್ನೇಹಿತರೊಂದಿಗೆ ಸೇರಿ ಎರಡು ದಿನಗಳವರೆಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜನವರಿ 5ರಂದು ಬಾಲಕಿಯನ್ನು ಹೊರಗೆ ಬಿಟ್ಟು ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಮತ್ತೆ ಜನವರಿ 11ರಂದು ಈ ಹಿಂದೆ ಗ್ಯಾಂಗ್ ರೇಪ್ ಮಾಡಿದ್ದ ವ್ಯಕ್ತಿಯೋರ್ವ ಮತ್ತೆ ಬಾಲಕಿಯನ್ನು ಅಪಹರಿಸಿ ಡಾಬಾದಲ್ಲಿಟ್ಟು ಸ್ನೇಹಿತರೊಂದಿಗೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಇದಾದ ನಂತರ ಅಲ್ಲಿಂದ ತಪ್ಪಿಸಿಕೊಂಡ ಬಾಲಕಿ ಮನೆಗೆ ಬಂದು ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾಳೆ.

ಕೂಡಲೇ ಪೋಷಕರು ಕಂಠಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಈ ದೂರಿನನ್ವಯ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ರಾಡ್ ಇಟ್ಟು ಹತ್ಯೆ ಮಾಡಿದ್ದರು.ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+