ಮಹಿಳೆಯರ ಸುರಕ್ಷತೆ: ಬಿಎಂಟಿಸಿ ಹಾಗೂ ಬಿ-ಪ್ಯಾಕ್ ಜಂಟಿ ಸಮೀಕ್ಷೆ
ಬೆಂಗಳೂರು, ಡಿಸೆಂಬರ್ 04 : ಮಹಿಳೆಯರಿಗೆ ಸಮಾಜದಲ್ಲಿ ಸುರಕ್ಷತೆ ಇಲ್ಲದಂತಾಗಿದೆ, ನಿರಂತರ ಕಿರುಕುಳಗಳು ನಡೆಯುತ್ತಲೇ ಇದೆ. ಇದಕ್ಕೊಂದು ಅಂತ್ಯ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಅನೇಕ ಸಂಘ ಸಂಸ್ಥೆಗಳು ಮಹಿಳೆಯರ ಭದ್ರತೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.
ಬಿ-ಪ್ಯಾಕ್ ಸಂಸ್ಥೆ ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ನೀಡುವ ಸಲುವಾಗಿ ಬಿಎಂಟಿಸಿ ಜಂಟಿ ಸಮೀಕ್ಷೆ ನಡೆಸುತ್ತಿದೆ. ಸುರಕ್ಷತೆ ಹಾಗೂ ಭದ್ರತೆಯ ವಾತಾವರಣ ಸೃಷ್ಟಿಸದೇ ಮಹಿಳಾ ಸಬಲೀಕರಣ ಪೂರ್ಣಗೊಳ್ಳದು.

ಹೀಗಾಗಿ ಬಿಎಂಟಿಸಿ ಸಮುದಾಯ ಸಾರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ವಾತಾವರಣ ಸೃಷ್ಟಿಸಲು ಉಪ ಕ್ರಮಗಳನ್ನು ಕೈಗೊಂಡಿದೆ. ಬಿ-ಪ್ಯಾಕ್ ಇದಕ್ಕಾಗಿ ನಿರಂತರ ಬೆಂಬಲವಾಗಿ ನಿಂತಿದೆ.

ನೀವು ಬೆಂಗಳೂರಿನ ಪ್ರಜೆಯಾಗಿ ಬಿಎಂಟಿಸಿ, ಬಿ-ಪ್ಯಾಕ್ ಹಮ್ಮಿಕೊಳ್ಳುತ್ತಿರುವ ಜಂಟಿ ಸಮೀಕ್ಷೆಯಲ್ಲಿ ಪಾಲ್ಗೊಂಡು ಮತ್ತಷ್ಟು ಸಲಹೆಗಳನ್ನು ನೀಡಿ, ಸುರಕ್ಷಿತ ಬೆಂಗಳೂರಿಗಾಗಿ ಸಲಹೆ ನೀಡಲು ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications