ಸೋನಿಯಾ ಗಾಂಧಿ ಹುಟ್ಟುಹಬ್ಬ: ಕೆಪಿಸಿಸಿ ಮಹಿಳಾ ಘಟಕ ಬೈಕ್ ಜಾಥಾ

ಬೆಂಗಳೂರು, ಡಿಸೆಂಬರ್ 09 : ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಕೆಪಿಸಿಸಿ ರಾಜ್ಯ ಮಹಿಳಾ ಘಟಕದಿಂದ ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಶನಿವಾರ ಬೈಕ್ ಜಾಥಾ ನಡೆಸಿದರು.

ಸೋನಿಯಾ ಗಾಂಧಿ ಅವರಿಗೆ 71 ನೇ ಹುಟ್ಟುಹಬ್ಬದ ಪ್ರಯುಕ್ತ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಜಾಥಾ ನಡೆಯಿತು. ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಚಾಲನೆ ನೀಡಿದರು.

Women Bike rally to celebrate Sonia Gandhi Birthday

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮಾತನಾಡಿ, ಪಕ್ಷವನ್ನು ಇನ್ನು ಹೆಚ್ಚು ಬಲಗೊಳಿಸಲು ಮಹಿಳಾ ಘಟಕ ಮುಂದಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಸೋನಿಯಾಗಾಂಧಿ ದುಡಿದಿದ್ದಾರೆ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸೋನಿಯಾ ಗಾಂಧಿ 71ನೇ ಜನ್ಮ ದಿನದ ಪ್ರಯುಕ್ತ ಬೈಕ್ ಜಾಥಾ ನಡೆಸಿದ್ದೇವೆ. ಮಹಿಳೆಯರಿಗಾಘಿ ಹಲವು ಉಪಯೋಗಿ ಕಾರ್ಯಕ್ರಮಗಳನ್ನು ಸೋನಿಯಾ ಗಾಂಧಿ ನೀಡಿದ್ದಾರೆ. ಮಹಿಳೆಯರಪ್ರಗತಿಗಾಗಿ ರಾಜ್ಯ ಮಹಿಳಾ ಘಟಕ ಸಹ ದುಡಿಯುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+