ಬೆಂಗಳೂರು: ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ 13,000 ನಗ್ನ ಫೋಟೋಗಳು, ಪ್ರಿಯತಮೆಗೆ ಫುಲ್‌ ಶಾಕ್‌

ಬೆಂಗಳೂರು, ನವೆಂಬರ್‌ 29: ಬೆಂಗಳೂರು ನಗರದ ಖಾಸಗಿ ಬಿಪಿಓ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ತನ್ನ ಬಾಯ್‌ಫ್ರೆಂಡ್‌ ಮೊಬೈಲ್‌ ನೋಡಿ ಶಾಕ್‌ ಆಗಿದ್ದಾಳೆ. ಪ್ರಿಯತಮನ ಮೊಬೈಲ್‌ ಲಾಕ್ ತೆಗೆದು ಗ್ಯಾಲರಿ ವೀಕ್ಷಿಸಿದ ಆಕೆಗೆ ಆಘಾತವಾಗಿದೆ. ಅಲ್ಲದೇ ಆತನ ಮನಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾಳೆ.

22 ವರ್ಷದ ಕಮಲಿ( ಹೆಸರು ಬದಲಿಸಲಾಗಿದೆ) ಆಕೆಯ ಬಾಯ್‌ಫ್ರೆಂಡ್‌ ಮೊಬೈಲ್‌ನ ಗ್ಯಾಲರಿ ತೆರೆದಾಗ ಕೆಲವು ಸಹೋದ್ಯೋಗಿಗಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13,000 ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಕಂಡುಬಂದಿದೆ. ಕಮಲಿಯ ಬಾಯ್‌ಫ್ರೆಂಡ್‌ ಆಕೆಯ ಸಹೋದ್ಯೋಗಿ ಆಗಿದ್ದು, ತಾನು ಸೇರಿದಂತೆ ತನ್ನ ಕಚೇರಿಯ ಇತರ ಸಹೋದ್ಯೋಗಿಗಳ ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಕಂಡು ಶಾಕ್‌ ಆಗಿದ್ದಾರೆ.

Woman Stunned By Discovery Of 13,000 Revealing Photos On Boyfriends Phone

ಕೂಡಲೇ ಕಮಲಿ ಈ ವಿಚಾರವನ್ನು ತನ್ನ ಕಚೇರಿಯ ಮುಖ್ಯಸ್ಥರಿಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ಬರದಂತೆ, ಸಂಸ್ಥೆಯಲ್ಲಿರುವ ಇತರ ಮಹಿಳೆಯರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

ಕಮಲಿ ಆರೋಪದ ಮೇಲೆ ಬೆಳ್ಳಂದೂರಿನಲ್ಲಿರುವ ಬಿಪಿಒ ಕಂಪನಿಯ ಮುಖ್ಯಸ್ಥೆ ಆರೋಪಿ ಆದಿತ್ಯ ಸಂತೋಷ್ (25) ವಿರುದ್ಧ ನವೆಂಬರ್ 23ರಂದು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಸಂತೋಷ್ ಹಾಗೂ ಕಮಲಿ ಕಳೆದ ನಾಲ್ಕೈದು ತಿಂಗಳಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆರೋಪಿ ಆಕೆಯೊಂದಿಗಿನ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಅವನ್ನೆಲ್ಲಾ ಡಿಲೀಟ್ ಮಾಡಬೇಕೆಂದುಕೊಂಡು ಕಮಲಿ ಸಂತೋಷ್‌ಗೆ ತಿಳಿಯದಂತೆ ಆತನ ಫೋನ್ ತೆಗೆದುಕೊಂಡು ಗ್ಯಾಲರಿ ತೆರೆದಿದ್ದಾಳೆ. ಈ ವೇಳೆ 13,000 ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಕಂಡುಬಂದಿದೆ. ಅಲ್ಲದೇ ಆತ ಕೆಲವು ಸಹೋದ್ಯೋಗಿಯ ಫೋಟೋವನ್ನು ಮಾರ್ಫ್ ಮಾಡಿರಬಹುದು ಎಂದು ಕಮಲಿ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಆರೋಪಿತನ ಈ ಕೆಲಸವು ಕಚೇರಿಯ ಇತರ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಬಹುದು. ಅವನ ಉದ್ದೇಶ ಯಾರಿಗೂ ಗೊತ್ತಿರಲಿಲ್ಲ. ಒಂದು ವೇಳೆ ಫೋಟೋಗಳು ಲೀಕ್ ಆಗಿದ್ದರೆ ಅದು ಮಹಿಳೆಯರಿಗೆ ಆಘಾತವನ್ನುಂಟು ಮಾಡುತ್ತಿತ್ತು. ಸಂತೋಷ್ ಕಳೆದ ಐದು ತಿಂಗಳಿನಿಂದ ಗ್ರಾಹಕ ಸೇವಾ ಏಜೆಂಟ್ ಆಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ತನ್ನ ಸಹೋದ್ಯೋಗಿಗಳ ಫೋಟೋಗಳನ್ನು ಮಾರ್ಫ್ ಮಾಡಲು ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸಂತೋಷ್ ವಿರುದ್ಧದ ಪ್ರಕರಣವನ್ನು ಕೈಗೆತ್ತಿಕೊಂಡು ಆತನನ್ನು ಕಚೇರಿಯಿಂದಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಆತ ಇಷ್ಟೊಂದು ಫೋಟೋಗಳನ್ನು ಏಕೆ ಇಟ್ಟುಕೊಂಡಿದ್ದ ಎನ್ನುವುದನ್ನು ತನಿಖೆ ನಡೆಸಬೇಕಿದೆ. ಫೋಟೋಗಳು ಕೆಲವು ಮಾರ್ಫ್ ಆಗಿವೆ. ಕೆಲವು ನೈಜವಾಗಿವೆ. ಆತನ ಚಾಟ್ ಹಾಗೂ ಫೋನ್‌ ಕರೆಗಳನ್ನು ಸಹ ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+