Zomatoದಲ್ಲಿನ 50 ಸಾವಿರ ರೂ. ಸಂಬಳದ ಕೆಲಸ ಬಿಟ್ಟು ಈಗ ತಿಂಗಳಿಗೆ 2.28 ಲಕ್ಷ ರೂ. ಗಳಿಸುತ್ತಿರುವ ಯುವತಿ

ಇತ್ತೀಚಿನ ದಿನಗಳಲ್ಲಿ ಯುವಜನತೆ ಕೇವಲ ಒಂದು ನಿರ್ದಿಷ್ಟ ಉದ್ಯೋಗಕ್ಕೆ ಅಂಟಿಕೊಂಡು ಕೂರದೆ, ಹೊಸ ಹೊಸ ಅವಕಾಶಗಳನ್ನ ಹುಡುಕಿಕೊಂಡು ಹೋಗುತ್ತಿದ್ದಾರೆ. ತಿಂಗಳಿಗೆ ಕೈತುಂಬಾ ಸಂಬಳ ಬರುತ್ತಿದ್ದರೂ, ತಮ್ಮದೇ ಆದ ದಾರಿಯಲ್ಲಿ ಸಾಗಲು ಇಚ್ಛಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ವರ್ಷಾ ಎಂಬ ಯುವತಿಯ ಯಶೋಗಾಥೆ. ಹೌದು, ಝೊಮಾಟೊದಲ್ಲಿ ತಿಂಗಳಿಗೆ 50,000 ರೂ. ಸಂಬಳ ತರುತ್ತಿದ್ದ ಪರ್ಫೆಕ್ಟ್ ಎನಿಸುವ ಉದ್ಯೋಗವನ್ನ ಬಿಟ್ಟು, ಆನ್‌ಲೈನ್ ಮೂಲಕ ಕೇವಲ ಐದು ತಿಂಗಳಲ್ಲಿ ಭಾರಿ ಮೊತ್ತದ ಹಣ ಗಳಿಸುವ ಮೂಲಕ ವರ್ಷಾ ಎಲ್ಲರ ಹುಬ್ಬೇರಿಸಿದ್ದಾರೆ.

Woman Quits Zomato Job To Build 4 Income Streams Earns Rs 2 28 892 In A Month Success Story

ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸೆಪ್ಟೆಂಬರ್ ತಿಂಗಳ ಆದಾಯದ ವಿವರಗಳನ್ನ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

5 ತಿಂಗಳಲ್ಲಿ 4 ಆನ್‌ಲೈನ್ ಆದಾಯ ಮೂಲಗಳ ಸೃಷ್ಟಿ

ವರ್ಷಾ ಅವರು ಐದು ತಿಂಗಳ ಹಿಂದೆ ಝೊಮಾಟೊ ಕೆಲಸ ಬಿಟ್ಟ ಯುವತಿ. ಆ ಬಳಿಕ ಅವರು ಕಂಟೆಂಟ್ ಕ್ರಿಯೇಷನ್, ಬ್ರ್ಯಾಂಡ್ ಡೀಲ್‌ಗಳು, ಆನ್‌ಲೈನ್ ತರಬೇತಿ ಹಾಗೂ ರಿಮೋಟ್ ಸೇಲ್ಸ್ ಎಂಬ ನಾಲ್ಕು ವಿಭಿನ್ನ ಆದಾಯದ ಮೂಲಗಳನ್ನ ಕಂಡುಕೊಂಡಿದ್ದಾರೆ.

ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಿಳಿಸಿರುವಂತೆ, ಈ ನಾಲ್ಕು ಮೂಲಗಳಿಂದ ಸೆಪ್ಟೆಂಬರ್ ತಿಂಗಳೊಂದರಲ್ಲೇ ಒಟ್ಟು 2,28,892 ರೂಪಾಯಿಗಳನ್ನ ಗಳಿಸಿದ್ದಾರೆ.

ವರ್ಷಾ ಮೊದಲ ಆದಾಯದ ಮೂಲ TechUGC (ಟೆಕ್ನಾಲಜಿ ಯೂಸರ್-ಜನರೇಟೆಡ್ ಕಂಟೆಂಟ್). ತಂತ್ರಜ್ಞಾನ ಆಧಾರಿತ ಬ್ರ್ಯಾಂಡ್‌ಗಳ ಉತ್ಪನ್ನವನ್ನ ಡೆಮೊ, ರಿವ್ಯೂ ಮತ್ತು ಪ್ರಮೋಷನಲ್ ವಿಡಿಯೋಗಳನ್ನು ಮಾಡುವ ಮೂಲಕ ಅವರು ಹಣ ಗಳಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಮೂಲದಿಂದ 1,900 ರೂ. ಗಳಿಸಿದ್ದು, ಇದು ಜುಲೈ ಮತ್ತು ಆಗಸ್ಟ್‌ಗಿಂತ ಕಡಿಮೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಬ್ರ್ಯಾಂಡ್ ಪಾರ್ಟ್ನರ್‌ಶಿಪ್

ಅವರ ಆದಾಯದ ಎರಡನೇ ಮತ್ತು ಅತಿದೊಡ್ಡ ಮೂಲವೆಂದರೆ ಅವರ ಸ್ವಂತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಾಕುವ ಬ್ರ್ಯಾಂಡ್ ಪಾರ್ಟ್ನರ್‌ಶಿಪ್‌ಗಳು. ಈ ಬ್ರ್ಯಾಂಡ್ ಡೀಲ್‌ಗಳ ಮೂಲಕ ಅವರು ಬರೋಬ್ಬರಿ 86,000 ರೂಪಾಯಿ ಗಳಿಸಿದ್ದಾರೆ. ಇದರಲ್ಲಿ 66,000 ರೂಪಾಯಿ ಪಾವತಿ ಇನ್ನೂ ಬಾಕಿ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೂರನೇ ಆದಾಯದ ಮೂಲವಾಗಿ, ವರ್ಷಾ ಅವರು TechUGC ಮೂಲಕ ಲಕ್ಷಾಂತರ ರೂಪಾಯಿ ಗಳಿಸುವುದು ಹೇಗೆ ಎಂಬುದರ ಬಗ್ಗೆ ಜನರಿಗೆ ಒನ್-ಟು-ಒನ್ ತರಬೇತಿ ನೀಡುತ್ತಿದ್ದಾರೆ. ಈ ತರಬೇತಿ ತರಗತಿಗಳ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಅಂದಾಜು 36,242 ರೂಪಾಯಿ ಗಳಿಸಿದ್ದಾರೆ. ತಾವು ಕಲಿತ ವಿದ್ಯೆಯನ್ನ ಇತರರಿಗೆ ಕಲಿಸುವ ಮೂಲಕವೂ ಅವರು ಉತ್ತಮ ಆದಾಯ ಕಂಡುಕೊಂಡಿದ್ದಾರೆ.

ರಿಮೋಟ್ ಸೇಲ್ಸ್ ಮತ್ತು ನೆಟ್ಟಿಗರ ಪ್ರತಿಕ್ರಿಯೆ

ಅವರ ನಾಲ್ಕನೇ ಆದಾಯದ ಮೂಲ ರಿಮೋಟ್ ಸೇಲ್ಸ್ ಆಗಿದ್ದು, ಈ ಮೂಲಕ ಸೆಪ್ಟೆಂಬರ್‌ನಲ್ಲಿ 5,744 ರೂಪಾಯಿ ಆದಾಯ ಬಂದಿದೆ. ಇತರ ಆದಾಯದ ಮೂಲಗಳಿಗೆ ಹೋಲಿಸಿದರೆ ಇದು ಚಿಕ್ಕ ಮೊತ್ತವಾದರೂ, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರ್ಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ತಿಂಗಳು ಹಿಂದಿನ ಎರಡು ತಿಂಗಳುಗಳಿಗಿಂತ ಕೊಂಚ ಕಡಿಮೆಯಾಗಿದ್ದರು, ಅಕ್ಟೋಬರ್‌ನಲ್ಲಿ ಆದಾಯ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ವರ್ಷಾ ಅವರ ಈ ಯಶೋಗಾಥೆ ಸೋಶಿಯಲ್‌ ಮಿಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವು ನೆಟ್ಟಿಗರು ಅವರ ಈ ಸಾಧನೆಯನ್ನ ಪ್ರಶಂಸಿಸಿದ್ದು, "ನಿಮ್ಮ ಈ ಪಯಣ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ, ನಾವು ಕೂಡ ನಿಮ್ಮಿಂದ ಕಲಿಯಲು ಬಯಸುತ್ತೇವೆ" ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಆನ್‌ಲೈನ್ ಮೂಲಕ ಇಷ್ಟು ಬೇಗ ಇಷ್ಟೊಂದು ಹಣ ಗಳಿಸಲು ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಧೈರ್ಯ ಮಾಡಿ ಹೊಸ ದಾರಿ ತುಳಿದ ವರ್ಷಾ ಅವರ ಕಥೆ ಅನೇಕರಿಗೆ ಸ್ಫೂರ್ತಿಯಾಗಿದ್ದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+