ಬೆಂಗಳೂರಿನಲ್ಲಿ ವರ್ಕ್ ಫ್ರಂ ಕಾರ್ ವಿಡಿಯೋ ವೈರಲ್: ಮುದೇನಾಯ್ತು ನೀವೇ ನೋಡಿ
ಬೆಂಗಳೂರು, ಫೆಬ್ರವರಿ, 13: ಸಾಮಾನ್ಯವಾಗಿ ವಾಹನ ಚಾಲನೆ ಮಾಡುವಾಗ ಟ್ರಾಫಿಕ್ ನಿಯಮದ ಪ್ರಕಾರ, ಫೋನ್, ಲ್ಯಾಪ್‌ಟಾಪ್ ಬಳಕೆ ಮಾಡುವಂತಿಲ್ಲ. ಆದರೆ ಇದೀಗ ಮಹಿಳೆಯೊಬ್ಬರು ಕಾರು ಚಲಾಯಿಸುವುದಲ್ಲದೆ, ನಿಯಮ ಉಲ್ಲಂಘಿಸಿ ಲ್ಯಾಪ್ ಟಾಪ್ ಬಳಕೆ ಮಾಡಿ ಪೇಚಿಗೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾಗಾದ್ರೆ ಏನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಲ್ಯಾಪ್‌ಟಾಪ್ ಬಳಸುತ್ತಾ ಕಾರು ಚಲಾಯಿಸಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಬೆಂಗಳೂರು ಸಂಚಾರ ಪೊಲೀಸರು ದಂಡ ವಿಧಿಸಿದ ಘಟನೆ ಆರ್‌ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಆ ಮಹಿಳೆಯು ತನ್ನ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುತ್ತಾ, ಕಾರು ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಚಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ನಗರದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆ ಮಹಿಳೆಯನ್ನು ಪತ್ತೆಹಚ್ಚಿ ದಂಡ ವಿಧಿಸುವ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ.

ಕಾರನ್ನು ಅತೀ ವೇಗ ಅದರಲ್ಲೂ ಲ್ಯಾಪ್‌ಟಾಲ್ ಬಳಕೆ ಮಾಡುವ ಮೂಲಕ ನಿಯಮ ಉಲ್ಲಂಘನೆ ಚಾಲನೆ ಮಾಡಿದ ಮಹಿಳೆಗೆ ಪೊಲೀಸರು 1,000 ರೂಪಾಯಿ ದಂಡ ವಿಧಿಸಿದ್ದಾರೆ. ಇನ್ನು ಈ ಸಂಬಂಧ ಉಪ ಪೊಲೀಸ್ ಆಯುಕ್ತರು ತಮ್ಮ ಟ್ವೀಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, ಚಾಲನೆ ಮಾಡುವಾಗ ಕೆಸಲ ಅಲ್ಲ, ಮನೆಯಿಂದಲೇ ಕೆಲಸ ಮಾಡಿ ಎಂದು ಬರೆದುಕೊಂಡಿದ್ದಾರೆ.
ಮೊದಲೇ ಬೆಂಗಳೂರು ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಟ್ರಾಫಿಕ್ ನಗರ ಎಂದು. ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಿದಂತೆಲ್ಲಾ ಅಷ್ಟೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಲೇ ಇದೆ. ಇದರಿಂದ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರದಾಡುತ್ತಿರುಗ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ.
ಅದರಲ್ಲೀ ಕಚೇರಿಗೆ ಹೋಗುವವರು ಮನೆಯಿಂದ 2-3 ಗಂಟೆ ಮೊದಲೇ ಬಿಡಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಸಂಭವಿಸುತ್ತಿರುತ್ತಲೇ ಇರುತ್ತದೆ. ಅಲ್ಲದೆ, ವಾಹನ ಸವಾರರು ಬೇಸತ್ತು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಕಚೇರಿಗೆ ಬರುವುದು ಸ್ವಲ್ಪ ತಡವಾದರೂ ಸಿಗ್ನಲ್ ಬಿದ್ದ ಕಡೆ ವಾಹನ ನಿಲ್ಲಿಸಿ ಲ್ಯಾಪ್ ಟಾಪ್‌ನ ಅಲ್ಲಿ ಕೆಲಸ ಮಾಡಿರುವ ಉದಾಹರಣೆಗಳು ಇವೆ. ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ನಿಯಮದ ಪ್ರಕಾರ, ವಾಹನ ಚಾಲನೆ ಮಾಡುವಾಗ ಯಾವುದೇ ಫೋನ್, ಲ್ಯಾಪ್ ಟಾಪ್ ಬಳಕೆ ಮಾಡುವಂತಿಲ್ಲ. ಆದರೆ, ಕೆಲ ಉದ್ಯೋಗಿಗಳಲು ಬೇರೆ ಯಾವುದೇ ದಾರಿಯಿಲ್ಲದೆ, ಕಚೇರಿ ಕೆಲಸವನ್ನು ಟ್ರಾಫಿಕ್ ಸಗ್ನಲ್ ಅಲ್ಲಿಯೆ ಮಾಡಿಕೊಂಡ ಘಟನೆಗಳು ನಡದಿವೆ. ಹಾಗೆಯೇ ಇದೀಗ ಮಹಿಳೆಯೊಬ್ಬರು ಟ್ರಾಫಿಕ್ ಅಲ್ಲ, ಬದಲಾಗಿ ವಾಹನ ಚಾಲನೆ ಮಾಡುವಾಗಲೇ ಲ್ಯಾಪ್ ಟಾಪ್ ಬಳಕೆ ಮಾಡಿ ಪೊಲೀಸರಿಗೆ ದಂಡ ತೆತ್ತ ಘಟನೆ ನಡೆದಿದೆ.












Click it and Unblock the Notifications