ಯಶವಂತಪುರ ನಿಲ್ದಾಣದಲ್ಲಿ ರೈಲಿನಡಿ ಸಿಲುಕಿ ಮಹಿಳೆ ಸಾವು

ಬೆಂಗಳೂರು, ಜನವರಿ 18: ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲು ಇಳಿಯುವಾಗ ಆಯತಪ್ಪಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ಗುರುವಾರ ನಡೆದಿದೆ.

ಹುಬ್ಬಳ್ಳಿಯಿಂದ ಬಂದಿದ್ದ ಮಹಿಳೆ ರೈಲಿನಿಂದ ಇಳಿಯುವಾಗ ಘಟನೆ ಸಂಭವಿಸಿದೆ. ರೈಲು ಇನ್ನೂ ಪೂರ್ಣವಾಗಿ ನಿಂತಿರಲಿಲ್ಲ ಎನ್ನಲಾಗಿದೆ. ಬಿದ್ದ ರಭಸಕ್ಕೆ ತಲೆ ಹಾಗೂ ಮುಖಕ್ಕೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ.

ಆದರೆ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಯಾರೂ ಮುಂದೆ ಬರಲಿಲ್ಲ, ಸುತ್ತುವರೆದ ಮಂದಿ ಮಾನವೀಯತೆ ಬಿಟ್ಟು ಫೋಟೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಸ್ಥಳದಲ್ಲಿ ರೈಲ್ವೆ ಪೊಲೀಸರು ಇದ್ದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಉತ್ತರಿಸುತ್ತಾ ತಟಸ್ಥರಾಗಿದ್ದರು ಅಷ್ಟರೊಳಗೆ ಮಹಿಳೆಯ ಪ್ರಾಣಪಪಕ್ಷಿ ಹಾರಿಹೋಗಿತ್ತು.

Woman died after slipping in gap between Train and Platform

ಮಹಿಳೆ ಕೆಳಗೆ ಬಿದ್ದ 20 ನಿಮಿಷಗಳ ಕಾಲ ನರಳಿ ಮೃತಪಟ್ಟಿದ್ದಾರೆ, ಮಹಿಳೆ ನರಳುತ್ತಿದ್ದರೂ ಅವರನ್ನು ಆಸ್ಪತ್ರೆಗೆ ತುರ್ತು ರವಾನಿಸುವುದಕ್ಕೆ ಪೊಲೀಸರೂ ಕೂಡ ಮುಂದಾಗಲಿಲ್. ಸಾರ್ವಜನಿಕರು ಮುಂದಾಗಲಿಲ್ಲ, ಮೃತರು ಯಾರು ಎನ್ನುವುದರ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ಹೆತ್ತವರನ್ನು ಊರಿಗೆ ಕಳುಹಿಸಲು ಬಂದಿದ್ದ ಟೆಕ್ಕಿಯೊಬ್ಬರು ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಇನ್ನು ಒಂದು ಘಟನೆ ನಡೆದಿದ್ದು ವಿದೇಶದಿಂದ ತನ್ನ ಮಗುವನ್ನು ನೋಡಲು ಬಂದಿದ್ದ ಟೆಕ್ಕಿಯೊಬ್ಬರು ರೈಲಿನಿಂದ ಇಳಿಉವಾಗ ಕಾಲು ಜಾರಿ ರೈಲಿನಡಿ ಸಿಲುಕಿ ಮೃತಪಟ್ಟಿರುವ ಘಟನೆಯೂ ವರದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+