ಈ ಕಾರಣಕ್ಕೆ ಬೆಂಗಳೂರು ವಿಶ್ವದ 3ನೇ ಕೆಟ್ಟ ನಗರ !

ಬೆಂಗಳೂರು ಅವಕಾಶಗಳ ಸಾಗರ. ಎಲ್ಲೆಲ್ಲಿಂದಲೂ ಬಂದವರು ಇಲ್ಲಿ ಬದುಕು ಕಟ್ಟಿಕೊಂಡಿರುವುದು ಇದೆ. ಆದರೆ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ವಿಚಾರಗಳೆ ಹೆಚ್ಚು ಚರ್ಚೆ ಆಗುತ್ತಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಕಡಿಮೆಯಾಗುತ್ತಿದ್ದು, ಇದರಿಂದ ಕೆಲವು ಪ್ರಮುಖ ಐಟಿ - ಬಿಟಿ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುವುದಾಗಿ ಹೇಳುತ್ತಿವೆ. ಇದರೊಂದಿಗೆ ಬೆಂಗಳೂರು ವಿಶ್ವದ ಮೂರನೇ ಕೆಟ್ಟ ನಗರವಾಗಿ ಬಿಂಬಿತವಾಗಿದೆ ಎಂದು ವರದಿಯಾಗಿದೆ.

ಹೌದು ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಹೊಸ ಭಾಷ್ಯ ಬರೆದಿದೆ. ಅಲ್ಲದೇ ಬೆಂಗಳೂರಿಗೆ ವರ್ಷದಿಂದ ವರ್ಷಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಿಲಿಕಾನ್‌ ಸಿಟಿ - ಐಟಿ ಹಬ್ ಎನ್ನುವುದು ಸೇರಿದಂತೆ ಹಲವು ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಬೆಂಗಳೂರು ಎಐ ವಿಚಾರದಲ್ಲೂ ಮುಂಚೂಣಿಯಲ್ಲಿದೆ. ಇಂದಿಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಅಗ್ರಗಣ್ಯ ನಗರವಾಗಿದೆ.

Why Bengaluru Ranked as the World s 3rd Worst City to Live In

ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆ ಕಾರಣಕ್ಕೆ ವಿಶ್ವದ ಅತ್ಯಂತ ಟ್ರಾಫಿಕ್ ಜಾಮ್‌ ನಗರಗಳಲ್ಲಿ ಮೂರನೇ ಕೆಟ್ಟ ನಗರ ಎನ್ನುವ ಕುಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಹಾಗೂ ಮೂಲಸೌಕರ್ಯ ಕೊರತೆ ವಿಚಾರವೂ ಹೆಚ್ಚು ಚರ್ಚೆ ಆಗುತ್ತಿದೆ. ಬೆಂಗಳೂರಿನಲ್ಲಿ ಅಪಾರ ಅವಕಾಶಗಳ ಹೊರತಾಗಿಯೂ ಕೆಲವು ಅನ್ಯಭಾಷಿಕರು ಸೃಷ್ಟಿ ಮಾಡುತ್ತಿರುವ ಭಾಷಾ ಹಾವಳಿಯೂ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಒಂದಿಲ್ಲೊಂದು ವಿಷಯದಿಂದ ಚರ್ಚೆಯಲ್ಲಿದೆ. ಅದರಲ್ಲೂ ಮಳೆಗಾಲದ ಸಮಸ್ಯೆಗಳು ಈ ಬಾರಿಯ ರಸ್ತೆಗುಂಡಿಯ ಸಮಸ್ಯೆಯಂತೂ ಇತ್ತೀಚಿನ ವರ್ಷಗಳಲ್ಲೇ ಹೆಚ್ಚು ಚರ್ಚೆಯಾಗಿರುವ ವಿಷಯವಾಗಿ ಬದಲಾಗಿದೆ.

ಈ ಎಲ್ಲಾ ವಿಚಾರಗಳ ನಡುವೆ ಬೆಂಗಳೂರಿನ ಟ್ರಾಫಿಕ್‌ ಜಾಮ್ ಸಮಸ್ಯೆಯು ವಿಶ್ವದಲ್ಲೇ ಕೆಟ್ಟ ಸಂಖ್ಯೆಯನ್ನು ಪಡೆದಿದೆ. ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿಯ ನಡುವೆ ಇದೀಗ ಮತ್ತೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಬೆಂಗಳೂರು ಈಗ ವಿಶ್ವದ 3 ನೇ ಕೆಟ್ಟ ನಗರವಾಗಿದ್ದು, ಟ್ರಾಫಿಕ್ ಜಾಮ್‌ಗಳಿಗೆ ಜನರು ವರ್ಷಕ್ಕೆ ಸರಾಸರಿ 134 ಗಂಟೆಗಳ ಕಾಲ ದಟ್ಟಣೆಯಲ್ಲಿ ಸಿಲುಕಿ ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.

ವಿವಿಧ ನಗರಗಳಲ್ಲೂ ಟ್ರಾಫಿಕ್ ಜಾಮ್ ಹೆಚ್ಚಳ: ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ವಿವಿಧ ಪ್ರಮುಖ ನಗರಗಳ ಭಾಗದಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಆದರೆ ಬೆಂಗಳೂರು ಮಾತ್ರ ಟ್ರಾಫಿಕ್ ಜಾಮ್ ಸಮಸ್ಯೆ ವಿಚಾರದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಕೆಲವರು ಉದ್ದೇಶಪೂರ್ವಕವಾಗಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹಾಗೂ ಟ್ರೋಲ್ ಮಾಡುವುದನ್ನೂ ಮಾಡುತ್ತಿದ್ದಾರೆ. ಒಟ್ಟಾರೆ ಬೆಂಗಳೂರು ಹೆಚ್ಚು ಟ್ರಾಫಿಕ್ ಜಾಮ್ ಆಗುವ ವಿಶ್ವದ ಮೂರನೇ ಪ್ರಮುಖ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+