ಬಿಬಿಎಂಪಿ ವೈಟ್ ಟಾಪಿಂಗ್ : ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ
ಬೆಂಗಳೂರು, ಡಿಸೆಂಬರ್ 07 : ನಗರದ ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ವತಿಯಿಂದ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ, ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.
ಗುಂಡಿ ಸಮಸ್ಯೆ ನಿವಾರಣೆಗೆ ನಗರದ ಆಯ್ದ ಭಾಗಗಳಲ್ಲಿ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಕಾಮಗಾರಿ ಆರಂಭಿಸಿದ ರಸ್ತೆಗಳಲ್ಲಿ ಮಾಮೂಲಿಯಾಗಿ ವಾಹನ ಸಂಚರಿಸುತ್ತಿತ್ತು. ಹೀಗಿದ್ದರೂ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಕಾಮಗಾರಿ ಆರಂಭಿಸಿರುವುದು ವಾಹನ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲೂ ಮೈಸೂರು ರಸ್ತೆ, ಹೆಣ್ಣೂರು ಜಂಕ್ಷನ್ ನಲ್ಲಿ3-4 ಕಿ.ಮೀ ವರೆಗೆ ವಾಹನ ಸಾಲುಗಟ್ಟಿ ನಿಲ್ಲುವಂತಾಗಿದೆ.

ಮೈಸೂರು ರಸ್ತೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಕೆಳಗಿನ ರಸ್ತೆಯಿಂದ ಕೆ.ಆರ್. ಮಾರುಕಟ್ಟೆವರೆಗಿನ ರಸ್ತೆಯಲ್ಲಿ ಕಾಮಗಾರಿ ಚಾಲ್ತಿಯಲ್ಲಿದ್ದು, ಒಂದು ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಹೀಗಾಗಿ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚುವಂತಾಗಿದೆ. ಉಳಿದಂತೆ ಹೆಣ್ಣೂರು ಜಂಕ್ಷನ್ ಬಳಿ ಮುಖ್ಯರಸ್ತೆ, ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಹಾಗೂ ಶೇಷಾದ್ರಿಪುರ ನಟರಾಜ ಚಿತ್ರಮಂದಿರ ಬಳಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಈ ರಸ್ತೆಗಳಲ್ಲಿ ಮಾಮೂಲಿಗಿಂತ ಹಚ್ಚಿನ ಸಂಚಾರ ದಟಟ್ಣೆ ಉಂಟಾಗುತ್ತಿದೆ.
ಕಾಮಗಾರಿ ಪೂರ್ಣ ಗಡುವು
ಹೆಣ್ಣೂರು ಜಂಕ್ಷನ್ ಇಂದ ಬಯ್ಯಪ್ಪನಹಳ್ಳಿ ಮಾರ್ಗ- ಅ.17 ರಿಂದ ಡಿ.6
ದೀಪಾಂಜಲಿ ನಗರದಿಂದ ಟೋಲ್ ಗೇಟ್ ಜಂಕ್ಷನ್-ಅ.30 ರಿಂದ ಜ.5
ಹೆಬ್ಬಾಳದಿಂದ ಹೆಣ್ಣೂರು ಜಂಕ್ಷನ್-ಡಿ.15 ರಿಂದ ಫೆ.28












Click it and Unblock the Notifications