Real Estate: ಬಿಬಿಎಂಪಿ ನಿರ್ಧಾರದಿಂದ ರಿಯಲ್‌ ಎಸ್ಟೇಟ್‌ಗೆ ರಿಲ್ಯಾಕ್ಸ್‌, ಏನದು ?

Real Estate: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ನಿರ್ಧಾರದಿಂದಾಗಿ ಕೊನೆಗೂ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಬಂಪರ್ ಬರುವ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಏರಿಕೆಯಿಂದಾಗಿ ರಿಯಲ್‌ ಎಸ್ಟೇಟ್‌ಗೆ ಹಿನ್ನಡೆ ಆಗುವ ಆತಂಕ ಎದುರಾಗಿತ್ತು. ಅಲ್ಲದೇ ರಿಯಲ್‌ ಎಸ್ಟೇಟ್‌ ಪರಿಣಾಮ ಬೀರುವ ಸಾಧ್ಯತೆ ಇತ್ತು. ಇದೀಗ ಬೆಂಗಳೂರಿನ ಜನರ ವಿರೋಧಕ್ಕೆ ಮಣಿದ ಸರ್ಕಾರ ಹಾಗೂ ಬಿಬಿಎಂಪಿಯು ಪರಿಷ್ಕರಣೆಗೆ ಮುಂದಾಗಿದೆ. ಇದರಿಂದ ಆಸ್ತಿದಾರರಿಗೆ ತುಸು ನಿರಾಳತೆ ಮೂಡಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಗುಡ್‌ನ್ಯೂಸ್‌ ಎನ್ನುವುದಕ್ಕಿಂತ ತುಸು ನಿರಾಳತೆ ಕೊಟ್ಟಿದೆ ಎಂದೇ ಹೇಳಬಹುದಾಗಿದೆ. ಜನರ ವಿರೋಧಕ್ಕೆ ಮಣಿದಿರುವ ಬಿಬಿಎಂಪಿಯು ವಸತಿ ಆಸ್ತಿಗಳ ಪಾರ್ಕಿಂಗ್ ತೆರಿಗೆ ಶುಲ್ಕವನ್ನು ಕಡಿಮೆ ಮಾಡಿದೆ. ಇದರಿಂದ ಆಸ್ತಿದಾರರು ತುಸು ನಿಟ್ಟುಸಿರು ಬಿಡುವಂತೆ ಆಗಿದ್ದು. ರಿಯಲ್‌ ಎಸ್ಟೇಟ್‌ಗೂ ಲಾಭವಾಗುವ ನಿರೀಕ್ಷೆ ಇದೆ. ನಗರದಾದ್ಯಂತ ಪಾರ್ಕಿಂಗ್ ಸ್ಥಳಗಳಿಗೆ ತೆರಿಗೆ ವ್ಯವಸ್ಥೆಯನ್ನು ಬಿಬಿಎಂಪಿ ಕೊನೆಗೂ ಪರಿಷ್ಕರಣೆ ಮಾಡಿದೆ.

What is Relaxation for Real Estate Due to BBMPs Decision

ಪಾರ್ಕಿಂಗ್ ಶುಲ್ಕದ ಬಗ್ಗೆ ಬಿಬಿಎಂಪಿಯು ಕರಡು ಅಧಿಸೂಚನೆಯನ್ನು ಹೊರಡಿಸಿತ್ತಾದರೂ ಅದನ್ನು ಜಾರಿ ಮಾಡಿರಲಿಲ್ಲ. ಇದೀಗ ಪಾರ್ಕಿಂಗ್‌ ಶುಲ್ಕವನ್ನು ಪರಿಷ್ಕರಣೆ ಮಾಡುವುದಾಗಿ ಹೇಳಿದೆ. ಅಲ್ಲದೇ ಬೆಂಗಳೂರಿನಲ್ಲಿ ವಸತಿ ಪ್ರದೇಶದ ಆಸ್ತಿಗಳಿಗೆ ಪಾರ್ಕಿಂಗ್ ತೆರಿಗೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಶೀಲನೆ ಮಾಡುತ್ತಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಹೇಳಿದೆ.

ಬಿಬಿಎಂಪಿಯು ವಲಯಗಳನ್ನು ವರ್ಗೀಕರಣ ಮಾಡಿ ಪಾರ್ಕಿಂಗ್ ತೆರಿಗೆಯ ಲೆಕ್ಕಾಚಾರವನ್ನು ಹಾಕಿತ್ತು. ಇದು ಕೆಲವು ಪ್ರದೇಶಗಳಲ್ಲಿ ಅಸಮರ್ಪಕ ಹಾಗೂ ಹೆಚ್ಚಿನ ಟ್ಯಾಕ್ಸ್‌ ವಿಧಿಸುವುದಕ್ಕೆ ಕಾರಣವಾಗಿತ್ತು. ಇದೀಗ ಬಿಬಿಎಂಪಿಯು, ಈಗಾಗಲೇ ಅಧಿಸೂಚಿಸಲಾದ ಕರಡು UAV ದರಗಳ ಅಡಿಯಲ್ಲಿಯೂ ಸಹ, ಕಳೆದ ವರ್ಷ (2024-25) ವಾಹನ ನಿಲ್ದಾಣದ ಪ್ರದೇಶಗಳಿಂದ ಸಂಗ್ರಹಿಸಲಾದ 211 ಕೋಟಿ ರೂ. ಆಸ್ತಿ ತೆರಿಗೆಯಲ್ಲಿ ಸುಮಾರು 40 ಕೋಟಿ ರೂ. ಗಳನ್ನು ಕಳೆದುಕೊಳ್ಳುವುದು ಎಂದು ಹೇಳಿದೆ. ಆದುದರಿಂದ ಬಿಬಿಎಂಪಿಯು ವಾಹನ ನಿಲ್ದಾಣದ ತೆರಿಗೆಯನ್ನು ಕಡಿಮೆ ಮಾಡಲು ಮತ್ತು ತರ್ಕಬದ್ಧಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

Take a Poll

ರಿಯಲ್‌ ಎಸ್ಟೇಟ್‌ಗೆ ಹೇಗೆ ಲಾಭ: ಬಿಬಿಎಂಪಿಯು ವಿಸ್ತೀರ್ಣದ ಆಧಾರದ ಮೇಲೆ ಪಾರ್ಕಿಂಗ್‌ ಟ್ಯಾಕ್ಸ್‌ ವಿಧಿಸಲಿದೆ. ಇದರಿಂದ ಜಾಗ ಹೊಂದಿರುವವರಿಗೆ ಹೊಸ ಟ್ಯಾಕ್ಸ್‌ ಸಂಕಷ್ಟವೇ ಎಂದು ಹೇಳಲಾಗುತ್ತಿದೆ. ಪಾರ್ಕಿಂಗ್ ಟ್ಯಾಕ್ಸ್‌ ಹಾಗೂ ಪಾರ್ಕಿಂಗ್‌ ಶುಲ್ಕ ಇರುವುದರಿಂದ ಬೆಂಗಳೂರಿನಲ್ಲಿ ಭೂಮಿ ಮತ್ತು ಕಟ್ಟಡಗಳನ್ನು ಖರೀದಿಸಬೇಕು ಎನ್ನುವವರು ಯೋಚನೆ ಮಾಡುವಂತೆ ಆಗಿತ್ತು. ಇದೀಗ ಬಿಬಿಎಂಪಿಯ ಪಾರ್ಕಿಂಗ್‌ ಟ್ಯಾಕ್ಸ್‌ ಪರಿಶೀಲನೆ ಮಾಡುವುದಾಗಿ ಹೇಳಿದೆ.

ಇದರಿಂದ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಮೇಲೆ ಪೆಟ್ಟು ಬೀಳುವುದು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ಆಸ್ತಿದಾರರಿಗೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಆದರೆ, ಇದರ ಬದಲಾಗಿ ಬಿಬಿಎಂಪಿಯು ಪಾರ್ಕಿಂಗ್‌ ಟ್ಯಾಕ್ಸ್‌ ಹಾಗೂ ಕಸ ಸಂಗ್ರಹಕ್ಕೂ ಟ್ಯಾಕ್ಸ್‌ನಂತಹ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಸಂಕಷ್ಟ ಎದುರಾಗಿದೆ. ಆಸ್ತಿದಾರರಿಗೆ ಮಾತ್ರವಲ್ಲದೇ ಬೆಂಗಳೂರಿನ ಬಾಡಿಗೆದಾರರಿಗೂ ಸಂಕಷ್ಟ ಎದುರಾಗಿವೆ. ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಮನೆ ಬಾಡಿಗೆ ಹೆಚ್ಚಳವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+