ಉತ್ತರ ಭಾರತದಲ್ಲಿ ಉಷ್ಣ ಹವೆ: ದಕ್ಷಿಣದಲ್ಲೂ ರಣಬಿಸಿಲು

ಬೆಂಗಳೂರು, ಮಾರ್ಚ್ 2 : ಈ ಬಾರಿ ಬೇಸಿಗೆಗೂ ಮುನ್ನವೇ ದೇಶದ ಏಳು ರಾಜ್ಯಗಳಲ್ಲಿ ಉಷ್ಣ ಹವೆ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವರ್ಷದ ಮಾನ್ಸೂನ್ ಗೂ ಮುನ್ನ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ದೇಶದ 16 ರಾಜ್ಯಗಳಲ್ಲಿ ನಾನಾ ಕಾರಣಗಳಿಂದ ಉಷ್ಣ ಹವೆ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಇರುವ ತಾಪಮಾನಕ್ಕಿಂತ 1 ಡಿಗ್ರಿ ಸೆಲ್ಸಿಯಸ್ ನಷ್ಟು ಸರಾಸರಿ ತಾಪಮಾನ ಹೆಚ್ಚಲಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ 0.5 ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಲಿದೆ.

ಇನ್ನು ದಕ್ಷಿಣದ ರಾಜ್ಯಗಳಾದ, ಕೇರಳ, ತಮಿಳುನಾಡು,ರಾಯಲ್ ಸೀಮಾ, ಕರಾವಳಿ, ಆಂಧ್ರಪ್ರದೇಶ, ಒಡಿಶಾ, ನ್ಯಾಗಾಲ್ಯಾಂಡ, ಮಣಿಪುರ, ಮತ್ತು ತ್ರಿಪುಯರ ರಾಜ್ಯಗಳಲ್ಲಿ ಪ್ರತಿ ವರ್ಷದ ಬೇಸಿಗೆಗಿಂತ ಇ ಬಾರಿ 0.5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

warm than normal, but cooler than north: South India braces itself for a hot summer

ಹವಾಮಾನ ಇಲಾಖೆ ಪ್ರಕಾರ ಈ ಬಾರಿ ತಾಪಮಾನ ಹೆಚ್ಚಳವನ್ನು ಪ್ರದೇಶವಾರು ನಿರೀಕ್ಷಿಸಲಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಉತ್ತರ ಒಳನಾಡು, ತಮಿಳುನಾಡು, ಪಾಂಡಿಚೇರಿ, ಹೀಗೆ ವಿಭಾಗಗಳನ್ನಾಗಿ ವಿಂಗಡಿಸಿ ತಾಪಮಾನದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಾಖದ ಪ್ರಖರತೆ ತುಸು ತಗ್ಗಲಿದೆ, ಆದರೆ ದಕ್ಷಿಣದ ಕರಾವಳಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚು ಉಷ್ಣ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ತಮಿಳುನಾಡಿನ ಚೆನ್ನೈ 2018 ರ ಬೇಸಿಗೆಯಲ್ಲಿ ಅತಿ ಹೆಚ್ಚು ತಾಪಮಾನವನ್ನು ದಾಖಲಿಸಲಿದೆ ಎಂಬ ಆತಂಕ ಎದುರಾಗಿದೆ. ಈ ಹಿಂದಿನ35 ವರ್ಷಗಳ ದಾಖಲೆಗಳನ್ನು ಅವಲೋಕಿಸಿದರೆ ಈ ಬಾರಿ ಚೆನ್ನೈ ಅತಿ ಹೆಚ್ಚು ತಾಪಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಮಾರ್ಚ್, ಏಪ್ರಿಲ್, ಜೂನ್ ವೇಳೆ 32 ರಿಂ 37 ಡಿಗ್ರಿಯಷ್ಟು ತಾಪಮಾನ ಕಾಣುತ್ತಿದ್ದ ಚೆನ್ನೈ ಈ ಬಾರಿ ಅದಕ್ಕಿಂತ ಹೆಚ್ಚು ಕನಿಷ್ಠ 1 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗಲಿದೆ ಭಾರತೀಯ ಹವಾಮಾನ ಇಲಾಖೆಯ ಬಾಲಚಂದರ್ ಅಭಿಪಾಯ ಪಟ್ಟಿದ್ದಾರೆ.
ಇನ್ನು ದಕ್ಷೀನ ಭಾರತದ ಮತ್ತೊಂದು ಪ್ರಮುಖ ನಗರವಾದ ಹೈದರಾಬಾದ್ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ತಾಪಮಾನವನ್ನು ದಾಖಲಿಸಲಿದ್ದು,45 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ತಲುಪಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಈಗಾಗಲೇ 30 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಿಸಿದ್ದು ಇದಕ್ಷಿಣದ ಇತರೆ ರಾಜ್ಯಗಳಿಗಿಂತ ಇದ್ದುದರಲ್ಲಿಯೇ ತುಸು ಭಿನ್ನ ಪರಿಸ್ಥಿತಿ ಇದೆ. ಈ ಬಾರಿ ಬೇಸಿಗೆ ವೇಳೆ 35 ರಿಂದ39 ಡಿಗ್ರಿ ಸೆಲ್ಸಿಯಸ್ ನಷ್ಟು ಬೆಂಗಳೂರಿನ ತಾಪಮಾನ ತಲುಪಬಹುದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+