ಆರ್‌ಆರ್ ನಗರದ ಮತದಾರರಿಗೆ ವೋಟರ್ ಐಡಿ ವಾಪಸ್:ಆಯೋಗ ಕ್ರಮ
ಬೆಂಗಳೂರು, ಮೇ 18: ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದ 9,746 ಮತದಾರರ ಗುರುತಿನ ಚೀಟಿಗಳನ್ನು ವಾಪಸ್ ನೀಡಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
ಗುರುವಾರದಿಂದ ವೋಟರ್ ಐಡಿ ಹಿಂದಿರುಗಿಸಲಾಗುತ್ತಿದ್ದು ಬಿಬಿಎಂಪಿಯ 60 ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇನ್ನೆರೆಡು ಮೂರು ದಿನಗಳೊಳಗಾಗಿ ಎಲ್ಲ ಗುರುತಿನ ಚೀಟಿಯನ್ನು ಮತದಾರರಿಗೆ ನೀಡುವ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಗುರುತಿನ ಚೀಟಿಯನ್ನು ಮತದಾರರಿಗೆ ಖುದ್ದಾಗಿ ನೀಡಬೇಕು. ಅವರ ಮನೆಯವರಿಗಾಗಲಿ, ಸಂಬಂಧಿಕರಿಗಾಗಿ ಕೊಡುವಂತಿಲ್ಲ. ಆದ್ದರಿಂದ ಅಧಿಕಾರಿಗಳು ಮೂಲ ಮತದಾರರನ್ನು ಹುಡುಕಿ ಗುರುತಿನ ಚೀಟಿ ವಿತರಿಸಿ ದೃಢಪಡಿಸಬೇಕಾಗುತ್ತದೆ.

28ಕ್ಕೆ ಚುನಾವಣೆ: ಫ್ಲ್ಯಾಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಅಸಲಿ ಗುರುತಿನ ಚೀಟಿ ಪತ್ತೆಯಾದ ನಂತರ ಪ್ರಕಟರಣ ಸಾಖಲಿಸಿಕೊಂಡಿದ್ದ ಚುನಾವಣಾ ಆಯೋಗ ಮೇ 12ಕ್ಕೆ ನಡೆಯಬೇಕಿದ್ದ ಮತದಾನ ಪ್ರಕ್ರಿಯೆಯನ್ನು 28ಕ್ಕೆ ಮುಂದೂಡಿದೆ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.











Click it and Unblock the Notifications