Viral Photos: ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ಮಕ್ಕಳ ಸವಾರಿ, ಪೋಷಕರನ್ನು ಜೈಲಿಗೆ ಹಾಕಲು ನೆಟ್ಟಿಗರ ಆಗ್ರಹ

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ರಾಜಧಾನಿಯ ರಸ್ತೆಯಲ್ಲಿ ಒಂದೇ ಸ್ಕೂಟರ್‌ನಲ್ಲಿ ಆರು ಮಂದಿ ಅಪ್ರಾಪ್ತ ಮಕ್ಕಳು ಹೆಲ್ಮೆಟ್ ಇಲ್ಲದೆ ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಮಕ್ಕಳ ಈ ದುಸ್ಸಾಹಸವನ್ನು ಖಂಡಿಸಿರುವ ನೆಟ್ಟಿಗರು, ಇಂತಹ ನಿರ್ಲಕ್ಷ್ಯ ತೋರಿದ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಘಟನೆಯ ವಿವರ

ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಶ್ರೇಯಸ್ ಎಂಬುವವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಇಂದು 26/04/2026 ರಂದು ಬೆಳಿಗ್ಗೆ 10:45 ರ ಸುಮಾರಿಗೆ ಈ ಘಟನೆ ನಡೆದಿದೆ. KA05JZ9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಅಪ್ರಾಪ್ತ ಮಕ್ಕಳು ಸಂಚರಿಸುತ್ತಿದ್ದಾರೆ. ಈ ಘಟನೆಯು ಪಾದರಾಯನಪುರ ಮುಖ್ಯ ರಸ್ತೆ, ಗೋರಿಪಾಳ್ಯದ ಬಳಿ, ಟೋಟಲ್ ಇಂಜಿನಿಯರ್ ಆಟೋ ಗ್ಯಾಸ್ ಎದುರು, ಹೊಸ ಸೇತುವೆ ಬಳಿ ನಡೆದಿದೆ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

Viral

ಫೋಟೋಗಳಲ್ಲಿ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟರ್ ಓಡಿಸುತ್ತಿದ್ದರೆ, ಆತನ ಹಿಂದೆ ಐವರು ಮಕ್ಕಳು ಅತ್ಯಂತ ಕಿಕ್ಕಿರಿದು ಕುಳಿತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಪೋಸ್ಟ್‌ಗೆ ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಲಾಗಿದ್ದು, ಪೋಷಕರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆ.

ಪೋಷಕರಿಗೆ ಶಿಕ್ಷೆಯಾಗಲಿ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಬೇಗನೇ ವೈರಲ್ ಆಗಿದ್ದು, ಜನರುಇದಕ್ಕೆ ಭಾರೀ ಆಕ್ರೋಶ ಹೊರಹಾಕಿದ್ದಾರೆ. "ಇದೇನು ಅನ್ಯಾಯ? ಇವರ ಪೋಷಕರನ್ನು ಕನಿಷ್ಠ ಒಂದು ವಾರ ಜೈಲಿನಲ್ಲಿಡಬೇಕು" ಎಂದು ರಾಜೇಶ್ ಕುಮಾರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಅಪ್ರಾಪ್ತರ ಚಾಲನೆ ಗಂಭೀರ ಉಲ್ಲಂಘನೆಯಾಗಿದ್ದು, ಇದು ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಹೆಚ್ ಫೌಂಡೇಶನ್ ಒತ್ತಾಯಿಸಿದೆ. ಶಿವಕುಮಾರ್ ಎಂಬ ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ಪೋಷಕರನ್ನು ಬಂಧಿಸಿ ಒಂದು ವಾರ ಜೈಲಿನಲ್ಲಿಡಿ, ಆಗ ಎಲ್ಲವೂ ಸರಿಯಾಗುತ್ತದೆ. ಪೋಷಕರೇ ಇದಕ್ಕೆ ಮೂಲ ಕಾರಣ. ತಮ್ಮ ಮಕ್ಕಳು ವಯಸ್ಸಿಗೂ ಮೀರಿದ ಕೆಲಸ ಮಾಡಬೇಕೆಂಬ ಅವರ ಆಲೋಚನೆಯೇ ಇಂತಹ ಘಟನೆಗಳಿಗೆ ಕಾರಣ" ಎಂದು ಕಿಡಿಕಾರಿದ್ದಾರೆ.

"ಮಹಿಳೆಯರನ್ನು ಎಲ್ಲೂ ನೆಮ್ಮದಿಯಾಗಿ ಇರಲು ಬಿಡಲ್ವಾ?": 'ಬೆಂಗಳೂರು ಮೆಟ್ರೋ ಚಿಕ್ಸ್' ಅಡ್ಮಿನ್‌ಗೆ ಹೈಕೋರ್ಟ್ ಛೀಮಾರಿ, ಅರ್ಜಿ ವಜಾ

ಕಠಿಣ ಕ್ರಮಕ್ಕೆ ಆಗ್ರಹಿಸಿದ ಮಾಜಿ ಐಪಿಎಸ್ ಅಧಿಕಾರಿ

ಈ ಚರ್ಚೆಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಮಕ್ಕಳ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. "ಆತ್ಮೀಯ ಬೆಂಗಳೂರು ಪೊಲೀಸರೇ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಎಲ್ಲರಿಗೂ ಒಂದು ಸ್ಪಷ್ಟ ಸಂದೇಶ ರವಾನಿಸಲು ಈ ವಾಹನದ ಮಾಲೀಕರು ಅಥವಾ ಮಕ್ಕಳ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಿ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+