ಬೆಂಗಳೂರು: ಬದಲಾದ ವಾತಾವರಣ, ವೈರಲ್ ಜ್ವರ ಉಲ್ಬಣ
Recommended Video

ಬೆಂಗಳೂರು, ಜು.23: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾವಣೆಯಾಗುತ್ತಿದೆ. ಇದರಿಂದ ಜನರು ಹಲವಾರು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಈಗಾಗಲೇ ಚಿಕನ್‌ಗುನ್ಯಾ, ಡೆಂಗ್ಯೂ ಹಾವಳಿ ವಿಪರೀತವಿದೆ ಆದರೆ ಇದೀಗ ವೈರಲ್ ಫೀವರ್ ಹೆಚ್ಚಿನದಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ವಾರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ ಹೀಗೆ ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ವಿಪರೀತವಾಗಿದೆ.
ವಿಶೇಷವಾಗಿ ಸಾಂಕ್ರಾಮಿಕ ವೈರಾಣುಗಳಿಂದಾಗಿ ಮಕ್ಕಳಲ್ಲಿ ವಾಂತಿ-ಭೇದಿ ಸಮಸ್ಯೆ ಹೆಚ್ಚುತ್ತಿದೆ. ಡಯೇರಿಯಾ ಸಮಸ್ಯೆಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ವಾತಾವರಣದಲ್ಲಾಗುವ ನಿರಂತರ ಬದಲಾವಣೆಯಿಂದ ವೈರಾಣುಗಳ ಹಾವಳಿ ಹೆಚ್ಚುತ್ತಿದೆ.
ವಯಸ್ಕರು ಮತ್ತು ಮಕ್ಕಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಕೂಡ ಈ ರೋಗ ಹರಡಬಹುದು, ಶುಚಿತ್ವವಲ್ಲದ ಆಹಾರ, ನೀರು ಸೇವನೆ, ಸೋಮಕು ತಗುಲಿದ ವ್ಯಕ್ತಿಯಿಂದ ಉಸಿರಾದ ವೇಳೆ ಹೊಟ್ಟೆಗೆ ಸೇರುವ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.
ವಾಂತಿ-ಭೇದಿ ಹೆಚ್ಚಾಗಿ ದೇಹದಲ್ಲಿನ ನೀರಿನಂಶ ಕಳೆದುಕೊಳ್ಳುತ್ತಾರೆ, ಹೀಗಾಗಿ ಹೆಚ್ಚಿನ ದ್ರವ ಪದಾರ್ಥವನ್ನು ಸೇವಿಸಲು ನೀಡಬೇಕೆಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ಸ್ವಚ್ಛತೆ ಕಾಯ್ದುಕೊಳ್ಳಿ, ಮಾಸ್ಕ್ ಬಳಸಿ
ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಒಬ್ಬರಿಂದ ಒಬ್ಬರಿಗೆ ವೈರಾಣು ಹರಡದಂತೆ ಮುಖಕ್ಕೆ ಕರ್ಚೀಫ್, ಮಾಸ್ಕ್ ಬಳಸಬೇಕು. ಆಹಾರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ಬಿಸಿಯಾದ ತಾಜಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬೇಯಿಸದ ಚಟ್ನಿ, ಸಲಾಡ್‌ನಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಸಾದ್ಯವಾದಷ್ಟು ಹೋಟೆಲ್ ತಿಂಡಿಗಳನ್ನು ಸೇವಿಸಬಾರದು, ಫ್ರೀಜ್ ಮಾಡಿದ ಆಹಾರ ಪದಾರ್ಥಗಳಿಂದ ಕೂಡ ಸಾಧ್ಯವಾದಷ್ಟು ದೂರವಿರಬೇಕು.

ಸೊಳ್ಳೆಯಿಂದಲೂ ವೈರಲ್ ಫೀವರ್ ಬರಬಹುದು ಎಚ್ಚರ
ಸೋಂಕುಕಾರಕ ರೋಗಾಣು, ಬ್ಯಾಕ್ಟೀರಿಯಾಗಳು, ಗಾಳಿ ಇತ್ಯಾದಿಗಳಿಂದ ಅಲ್ಲದೆ ಸೊಳ್ಳೆ ಕಡಿತದಿಂದಲೂ ಹರಡಬಹುದು. ಹಾಗಾಗಿ ಜನರು ಸೊಳ್ಳೆಗಳು ಆದಷ್ಟು ಮನೆಯೊಳಗೆ ಬರದಂತೆ ನೋಡಿಕೊಳ್ಳಬೇಕು. ಹಳ್ಳ-ಕೊಳ್ಳ ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಮ್‌ಗಳಲ್ಲಿ ನೀರು ಶೇಖರಿಸಿಟ್ಟು ಮೇಲ್ಭಾಗವನ್ನು ಸರಿಯಾಗಿ ಮುಚ್ಚಬೇಕು. ಹಾಗೆಯೇ ಆಹಾರ ಸೇವನೆಯಲ್ಲೂ ಎಚ್ಚರ ವಹಿಸಬೇಕು.

ವೈರಲ್ ಫೀವರ್ ಲಕ್ಷಣಗಳು
ವೈರಲ್ ಫೀವರ್ ಗಳಲ್ಲಿ ಹಲವು ವಿಧಗಳಿವೆ ಹೀಗೆ ಅದರ ಲಕ್ಷಣಗಳಿರುತ್ತದೆ ಎನ್ನಲು ಸಾಧ್ಯವಿಲ್ಲ, ಆದರೆ ಇದರಲ್ಲಿ ಕೆಲವೊಂದು ಲಕ್ಷಣಗಳು ಆ ರೋಗವಿದೆ ಎನ್ನುವುದನ್ನು ಹೇಳುತ್ತದೆ. ವಿವಿಧ ಮಾಹಿತಿಗಳ ಪ್ರಕಾರ ಈ ವೈರಾಣುಗಳು ದೇಹವನ್ನು ಸೇರಿದಾಗ, ತಲೆನೋವು, ನೆಗಡಿ, ಕೆಮ್ಮು, ಮೈ-ಕೈನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ-ಭೇದಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜ್ವರ ತೀವ್ರವಾಗಿ ಕಾಡುತ್ತಿರುವ ಅನುಭವವಾಗುವುದಿಲ್ಲ. ವೈರಲ್ ಫೀವರ್ ವಿಪರೀತ ಮೈ-ಕೈನೋವು, ಕಣ್ಣಿನ ಹಿಂಭಾಗದಲ್ಲಿ ನೋವು ತರುತ್ತದೆ.

ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ
ಮಕ್ಕಳಲ್ಲಿ ಡಯೇರಿಯಾ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು, ಇದನ್ನು ತಡೆಯಲು ಶುಚಿತ್ವದಿಂದ ಕೂಡಿದ ಆಹಾರ ಸೇವಿಸಬೇಕು. ಆಹಾರ ಹಾಗೂ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ. ವೈರಾಣುಗಳು ಹೊಟ್ಟೆ ಸೇರುವುದನ್ನು ತಡೆಯಲು ಪ್ರತಿ ಬಾರಿ ಊಟಕ್ಕೆ ಮೊದಲು ಶುಚಿಯಾಗಿ ಕೈ ತೊಳೆದುಕೊಳ್ಳಬೇಕು. ಸಾಮಾನ್ಯದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಬಂದರೆ ಮನೆ ಮಂದಿಗೆಲ್ಲಾ ಕಾಡುತ್ತದೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications