ಬಿಬಿಎಂಪಿ ಜಾಗ ಈ ಹಿಂದೆ ಸ್ಮಶಾನ, ದಿವಾಳಿಯಾಗಲು ಕಾರಣವದೇ!

ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಸಂಕಷ್ಟದಲ್ಲಿದ್ದಾಗ, ಆಗಿರುವ ಲೋಪ ದೋಷಗಳನ್ನು ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡು ಹಿಡಿದು ಮುನ್ನಡೆಯುವುದು ಒಂದು ಕಾರ್ಯಶೈಲಿ.

ಸಂಕಷ್ಟಕ್ಕೆ ವಾಸ್ತುದೋಷ, ಮಾಟಮಂತ್ರವೇ ಕಾರಣ ಎಂದು ಅದಕ್ಕೆ ಬೇಕಾದ ಪೂಜೆ ಪುನಸ್ಕಾರಗಳ ಮೂಲಕ ಪರಿಹಾರ ಕಂಡು ಕೊಳ್ಳುವುದು ಇನ್ನೊಂದು ಶೈಲಿ. (ಕಾರ್ಪೋರೇಟರ್ ಪತಿ ಕಗ್ಗೊಲೆ)

ತನ್ನ ಕೆಲ ಅಮೂಲ್ಯ ಆಸ್ತಿಗಳನ್ನು ಅಡವಿಟ್ಟರೂ ಸಾಲ ಎನ್ನುವ ಶೂಲದಿಂದ ಹೊರ ಬರಲಾರದ ಬಿಬಿಎಂಪಿಗೆ ಮೂಲ ಸಮಸ್ಯೆ ಇರುವುದೇ ವಾಸ್ತು ದೋಷದ್ದು ಎನ್ನುತ್ತಾರೆ ವಾಸ್ತು ತಜ್ಞರು.

ಬಿಬಿಎಂಪಿ ಇರುವ ಜಾಗ, ಕಟ್ಟಡ ವಿನ್ಯಾಸ, ಎಲ್ಲಿ ಶೌಚಾಲಯ ಇರಬಾರದೋ ಅಲ್ಲಿ ಟಾಯ್ಲೆಟ್, ಮೇಯರ್ ಕೂರುವ ಜಾಗ ಹೀಗೆ ಬಿಬಿಎಂಪಿಯಲ್ಲಿ ಯಾವುದೂ ಸರಿಯಿಲ್ಲದಿರುವಾಗ ಬಿಬಿಎಂಪಿ 'ಉದ್ದಾರ' ಆಗಲು ಹೇಗೆ ಸಾಧ್ಯ ಎನ್ನುತ್ತಾರೆ ವಾಸ್ತು ಪಂಡಿತರು. (ಟೌನ್ ಹಾಲ್ ಅಡವಿಡಲು ಬಿಬಿಎಂಪಿ ಸಜ್ಜು)

ವಾಸ್ತು ದೋಷಕ್ಕೆ ಪರಿಹಾರ ಕಂಡು ಕೊಂಡರೆ ಬಿಬಿಎಂಪಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಇದೆ ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ತಜ್ಞರ ಪ್ರಕಾರ ಬಿಬಿಎಂಪಿಗಿರುವ ವಾಸ್ತು ತೊಂದರೆ ಏನು ಮತ್ತು ಅವರು ಅದಕ್ಕೆ ಕೊಡುವ ಸ್ಪಷ್ಟೀಕರಣ ಸ್ಲೈಡಿನಲ್ಲಿ ಕೊಡಲಾಗಿದೆ..

(ಮಾಹಿತಿ ಕೃಪೆ : ಕಸ್ತೂರಿ ನ್ಯೂಸ್)

ಮೊದಲು ಶೌಚಾಲಯದ ವಿಷಯ

ಮೊದಲು ಶೌಚಾಲಯದ ವಿಷಯ

ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ಎನ್ನುವುದು ದೈವ ಮೂಲೆ. ಅಲ್ಲಿ ದೇವರ ಫೋಟೋ ಇರುವ ಬದಲು ಶೌಚಾಲಯವಿದೆ. ಬಿಬಿಎಂಪಿ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಲು ಇದು ಕೂಡಾ ಪ್ರಮುಖ ಕಾರಣ.

ಈ ಹಿಂದೆ ಸ್ಮಶಾನ

ಈ ಹಿಂದೆ ಸ್ಮಶಾನ

ಬಿಬಿಎಂಪಿ ಇರುವ ಜಾಗ ಈ ಹಿಂದೆ ಸ್ಮಶಾನವಾಗಿತ್ತು. ವೈಜ್ಞಾನಿಕವಾಗಿ ನಾವು ಎಷ್ಟು ಮುಂದುವರಿದಿದ್ದರೂ ಅಲ್ಲಿ ಸ್ಮಶಾನ ಇತ್ತು ಎನ್ನುವುದನ್ನು ಅಳಿಸಲಾಗುವುದಿಲ್ಲ. ಅದರ ಎಫೆಕ್ಟ್ ಇದ್ದೇ ಇರುತ್ತೆ ಎಂದು ಸಮರ್ಥಿಸಿ ಕೊಳ್ಳುತ್ತಾರೆ ವಾಸ್ತು ತಜ್ಞರು.

ಪುರಪಿತೃಗಳ ಅಕಾಲಿಕ ಮರಣ

ಪುರಪಿತೃಗಳ ಅಕಾಲಿಕ ಮರಣ

ಕಾರ್ಪೋರೇಟರುಗಳು ಮತ್ತು ಅವರ ಕುಟುಂಬದವರು ಅಕಾಲಿ ಸಾವಿಗೆ ಒಳಗಾಗಿದ್ದಾರೆ. 1996ರಲ್ಲಿ ಆಜಾದ್ ನಗರದ ವೆಂಕಟಾಚಲ, 1998ರಲ್ಲಿ ಹೂಂಬೇಗೌಡ ನಗರದ ಕಾರ್ಪೋರೇಟರ್, 2010ರಲ್ಲಿ ಬನಶಂಕರಿ ವಾರ್ಡಿನ ದಿವಾನ್ ಆಲಿ, 2011ರಲ್ಲಿ ಗಾಂಧಿನಗರ ವಾರ್ಡಿನ ಧನರಾಜ್, ಶಹತಾಜ್ ಖಾನ್ ಹತ್ಯೆಗೆ ಯತ್ನ, ಮೊನ್ನೆ ಮೊನ್ನೆ ಬರ್ಭರವಾಗಿ ಹತ್ಯೆಯಾದ ಕಾರ್ಪೋರೇಟರ್ ಪತಿ. ಹೀಗೆ ಇವರೆಲ್ಲಾ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ.

ಅಗ್ನಿ ಮೆಟ್ಟಲು

ಅಗ್ನಿ ಮೆಟ್ಟಲು

ಅಗ್ನಿ ಮೂಲೆಯಲ್ಲಿ ಮೆಟ್ಟಲು ಇರುವುದು ಕೆಟ್ಟದು. ಆರ್ಥಿಕವಾಗಿ ಬಿಬಿಎಂಪಿ ಹಿನ್ನಡೆ ಅನುಭವಿಸುವುದು ಒಂದು ಕಡೆಯಾದರೆ, ಕಾರ್ಪೋರೇಟರುಗಳಿಗೂ ತೊಂದರೆಯಾದ ಉದಾಹರಣೆಗಳು ಸಾಕಷ್ಟಿವೆ. ಗೋರಿ ಜಾಗದಲ್ಲಿ ಮೇಯರ್ ಕೂರುತ್ತಾರೆ. ಮೇಯರ್ ಆಗಿದ್ದ ಎಸ್ ಕೆ ನಟರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ವಾಸ್ತು ತಜ್ಞರ ಸ್ಮರಿಸಿ ಕೊಳ್ಳುವುದನ್ನು ಮರೆಯುವುದಿಲ್ಲ.

ಕಟ್ಟಡ ಪ್ರವೇಶ ಮಾಡಿದರೆ ತೊಂದರೆ

ಕಟ್ಟಡ ಪ್ರವೇಶ ಮಾಡಿದರೆ ತೊಂದರೆ

ಈ ಕಟ್ಟಡ ಪ್ರವೇಶ ಮಾಡಿದರೆ ತೊಂದರೆ. ಒಟ್ಟಾರೆ ಆರ್ಥಿಕ ದೃಷ್ಠಿಯಿಂದ ಏಳಿಗೆ ಅಸಾಧ್ಯ. ತೆರಿಗೆ ಸಂಗ್ರಹದಲ್ಲೂ ಹಿಂದೆ ಬೀಳ ಬೇಕಾಗುತ್ತದೆ. ಪುರಪಿತೃಗಳಿಗೂ ತೊಂದರೆ ತಪ್ಪಿದ್ದಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+