ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಕೆರೆಯಲ್ಲಿ ನೊರೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ವರ್ತೂರು ಕೆರೆ ಸಂಪೂರ್ಣವಾಗಿ ಕಲ್ಮಶಗೊಂಡಿದೆ. ಕಳೆದ ಒಂದು ವಾರದಿಂದ ವರ್ತೂರು ಕೆರೆಯಲ್ಲಿ ಮತ್ತೆ ನೊರೆಯ ತೊಂದರೆ ಶುರುವಾಗಿದೆ. ಕೆರೆಯಲ್ಲಿ ಉತ್ಪಾದನೆಯಾಗುವ ನೊರೆಯು ಹತ್ತಿರದಲ್ಲಿರುವ ವೈಟ್‌ಫೀಲ್ಡ್ ಮುಖ್ಯರಸ್ತೆಗೆ ಹಾರಿಹೋಗುತ್ತಿದೆ.

 ವರ್ತೂರು ಕೆರೆಯಲ್ಲಿ ಕಾಣಿಸಿಕೊಂಡ ನೊರೆ: ವಾಹನ ಸವಾರರಿಗೆ ಕಿರಿಕಿರಿ ವರ್ತೂರು ಕೆರೆಯಲ್ಲಿ ಕಾಣಿಸಿಕೊಂಡ ನೊರೆ: ವಾಹನ ಸವಾರರಿಗೆ ಕಿರಿಕಿರಿ

ಈ ಹಿಂದೆಯೂ ಅನೇಕ ಬಾರಿ ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದ ನೊರೆ ಉಂಟಾಗಿತ್ತು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಆಗಿತ್ತು. ಹೀಗಾಗಿ, ನೊರೆಯು ರಸ್ತೆಗೆ ಹಾರದಂತೆ ತಡೆಗಟ್ಟಲು ಜಾಲರಿ ಅಳವಡಿಸಲಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ನೊರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಸ್ಪ್ರಿಂಕ್ಲರ್‌ಗಳನ್ನು ಹಾಕಲಾಗಿತ್ತು. ಆದರೆ, ಕೆ.ಸಿ. ಕಣಿವೆ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ಜಾಲರಿಯನ್ನು ತೆಗೆಯಲಾಗಿದೆ. ಸ್ಪ್ರಿಂಕ್ಲರ್ ಗಳ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದು ಕೂಡಾ ನೊರೆಯ ಪ್ರಮಾಣ ಹೆಚ್ಚಲು ಕಾರಣವಾಗಿದೆ.

Varthur lake spills foam again

ವರ್ತೂರು ಕೆರೆಯ ಸುತ್ತಮುತ್ತಲು ಅನೇಕ ಕಾಮಗಾರಿಗಳು ನಡೆಯುತ್ತಿದೆ. ಕೋಲಾರದಲ್ಲಿ ಪೈಪ್‌ಲೈನ್ ಕೆಲಸ ನಡೆಯುತ್ತಿದೆ. ಜತೆಗೆ ಮಳೆಯೂ ಬಂದಿರುವ ಕಾರಣ ಕೆಲೆಯಲ್ಲಿರುವ ಹಾನಿಕಾರಕ ವಸ್ತುಗಳೆಲ್ಲವೂ ಒಂದೆಡೆ ಸೇರಿ ನೊರೆಯನ್ನು ಉತ್ಪತ್ತಿ ಮಾಡುತ್ತಿದೆ. ಅದರೊಂದಿಗೆ ಶುದ್ಧೀಕರಿಸದ ಚರಂಡಿ ನೀರು, ಡಿಟರ್ಜೆಂಟ್ಸ್ ಗಳ ಅಂಶಗಳು ನೊರೆಗೆ ಕಾರಣವಾಗಿದೆ.

English summary
Foam and froth seems to have increased in Varthur lake over the past few days, and is threatening to fly off on to neighbouring Whitefield main road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X