Breaking: ಕನ್ನಡ ಶೋ ಟಿಕೆಟ್ ನೀಡಿ ಇಂಗ್ಲಿಷ್‌ನಲ್ಲಿ ಅವತಾರ್ 2 ಪ್ರಸಾರ, ವೀಕ್ಷಕರಿಂದ ಗಲಾಟೆ

ಬೆಂಗಳೂರು ಡಿಸೆಂಬರ್ 18: ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹಾಲಿವುಡ್‌ನ 'ಅವತಾರ್ 2' ಸಿನಿಮಾಗೆ ಕನ್ನಡದ ಪ್ರದರ್ಶನಕ್ಕೆ ಟಿಕೆಟ್ ನೀಡಿ ಇಂಗ್ಲಿಷನಲ್ಲಿ ಪ್ರಸಾರ ಮಾಡಿದ ಘಟನೆ ಮಾಗಡಿ ರಸ್ತೆಯ ಜಿಟಿ ವರ್ಲ್ಡ್ ಮಾಲ್‌ನಲ್ಲಿ ನಡೆದಿದೆ. ಕನ್ನಡಿಗರು ಕನ್ನಡದಲ್ಲೇ ಸಿನಿಮಾ ತೋರಿಸುವಂತೆ ಒತ್ತಾಯಿಸಿದ್ದರಿಂದ ಮಾಲ್‌ನಲ್ಲಿ ಕೆಲಕಾಲ ಗಲಾಟೆ ನಡೆಯಿತು.

ಎರಡು ದಿನದ ಹಿಂದಷ್ಟೇ ಡಿಸೆಂಬರ್ 16ರಂದು ಬಹು ನಿರೀಕ್ಷೆಯ 'ಅವತಾರ್- 2 ದಿ ವೇ ಆಫ್ ವಾಟರ್' ಇಂಗ್ಲಿಷ್ ಸಿನಿಮಾ ತೆರೆ ಕಂಡಿದೆ. ಅದನ್ನು ವೀಕ್ಷಿಸಲು ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್‌ಗೆ ತೆರಳಿದ್ದ ನೂರಾರು ಮಂದಿಗೆ ನಿರಾಸೆಯಾಗಿದ್ದಾರೆ.

Uproar at Bengaluru GT World Mall demanding screening of Avatar 2 movie in Kannada

Year end 2022; ಸ್ವಿಗ್ಗಿ ವರ್ಷದ ವ್ಯಕ್ತಿ ಕಿರೀಟ ಬೆಂಗಳೂರಿಗನಿಗೆ!

ಮಧ್ಯಾಹ್ನದ ನಂತರ ಕನ್ನಡದಲ್ಲೇ ಅವತಾರ್ ಸಿನಿಮಾ ನೋಡಲು ಜನರು ಸರತಿ ಸಾಲಿನಲ್ಲಿ ನಿಂತು ಕನ್ನಡದ ಪ್ರದರ್ಶನದ ಟಿಕೇಟ್ ಖರೀದಿಸಿದ್ದಾರೆ. ಆದರೆ ಟಿಕೆಟ್ ಪಡೆದ ಒಳಹೋದವರಿಗೆ ಸಿನಿಮಾ ಆರಂಭವಾಗುತ್ತಿದ್ದಂತೆ ಇಂಗ್ಲಿಷ್‌ನಲ್ಲಿ ಪ್ರಸಾರವಾಗಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಮಾಲ್ ಮತ್ತು ಚಿತ್ರಮಂದಿರದ ಆಡಳಿತ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ನೋಡಲು ನಾವೆಲ್ಲ ಬಂದಿದ್ದು, ನಮಗೆ ಸ್ಥಳಿಯ ಭಾಷೆಯಲ್ಲಿಯೆ ಸಿನಿಮಾ ತೋರಿಸಿ ಎಂದು ಆಗ್ರಹಿಸಿದ್ದಾರೆ.

ಆದರೆ ಇದಕ್ಕೆ ಮಾಲ್ ಸಿಬ್ಬಂದಿ ಒಪ್ಪದಿದ್ದಾಗ ಮಾತಿನ ಚಕಮಕಿ ನಡೆದಿದೆ. ನೂರಾರು ಮಂದಿ ಕನ್ನಡದಲ್ಲೇ ಅವತಾರ್ 2ಪ್ರಸಾರ್ ಮಾಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.

1 ಗಂಟೆ ನಂತರ ಕನ್ನಡದಲ್ಲಿ ಶೋ, ಸಂತಸ
ಪ್ರೇಕ್ಷಕರ ಗಲಾಟೆ ನಂತರ ಎಚ್ಚೆತ್ತುಕೊಂಡ ಜಿಟಿ ವರ್ಲ್ಡ್ ಮಾಲ್ ಆಡಳಿತ ಮಂಡಳಿಯಿಂದ ಒಂದು ಗಂಟೆ ತಡವಾಗಿ ಕನ್ನಡದಲ್ಲಿ ಅವತಾರ್ 2 ಪ್ರಸಾರವಾಯಿತು.ಇಂದು (ಭಾನುವಾರ) ಸಂಜೆ 5ಗಂಟೆಗೆ ಅವತಾರ್ 2 ಕನ್ನಡದಲ್ಲಿ ಶೋ ನೋಡಲು ಜನ ಟಿಕೆಟ್ ಪಡೆದಿದ್ದರು. ಆದರೆ ಇಂಗ್ಲಿಷ್ ನಲ್ಲಿ ಶೋ ಪ್ರಸಾರವಾಗುತ್ತಿದ್ದಂತೆ ಆಡಳಿತ ಮಂಡಳಿಯ ಕನ್ನಡ ನಿರ್ಲಕ್ಷ್ಯ ಧೋರಣೆಗೆ ವೀಕ್ಷಕರು ಆಕ್ರೋಶ ಹೊರ ಹಾಕಿದರು. ಕನ್ನಡಿಗರ ಆಕ್ರೋಶಕ್ಕೆ ಮಣಿದು 6ಗಂಟೆಗೆ ಪುನಃ ಕನ್ನಡದಲ್ಲಿ ಸಿನಿಮಾ ಆರಂಭಿಸಲಾಯಿತು. ಅಲ್ಲಿಯವರೆಗೆ ಸುಮಾರು ಒಂದು ಗಂಟೆ ಕಾಲ ಆಂಗ್ಲ ಭಾಷೆಯಲ್ಲಿ ಸಿನಿಮಾ ವೀಕ್ಷಿಸಬೇಕಾಯಿತು.
ನಂತರ ಕನ್ನಡದ ಪ್ರದರ್ಶನ ಆರಂಭವಾಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ ವೀಕ್ಷಕರು ಕನ್ನಡಪರ ಜೈ ಕಾರ ಕೂಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+