ಕೇಂದ್ರ ಸಚಿವ ಅನಂತ್ ಕುಮಾರ್ ಸೌಖ್ಯವಾಗಿದ್ದಾರೆ: ಸಚಿವರ ಕಚೇರಿಯಿಂದ ಸ್ಪಷ್ಟನೆ

Recommended Video

      ಅನಂತ್ ಕುಮಾರ್ ಗೆ ಅನಾರೋಗ್ಯ, ಲಂಡನ್ ನಲ್ಲಿ ಚಿಕಿತ್ಸೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 17: ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಎಚ್.ಎನ್.ಅನಂತ್ ಕುಮಾರ್ ಅಸ್ವಾಸ್ಥ್ಯದ ಕಾರಣಕ್ಕೆ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ 'ಸುಳ್ಳು' ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.

      ಲಂಡನ್ ನಲ್ಲಿರುವ ತಮ್ಮ ಸಂಬಂಧಿಯ ಮನೆಯಲ್ಲಿ ಕೇಂದ್ರ ಸಚಿವರು ಇದ್ದಾರೆ. ವಾರದೊಳಗೆ ಅವರು ದೇಶಕ್ಕೆ ವಾಪಸಾಗಲಿದ್ದಾರೆ ಎಂದು ಅನಂತ್ ಕುಮಾರ್ ರ ಬೆಂಗಳೂರು ಕಚೇರಿ ಮೂಲಗಳು ತಿಳಿಸಿವೆ. "ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬುದು ವದಂತಿ ಮಾತ್ರ" ಎಂದು ಸ್ಪಷ್ಟ ಪಡಿಸಿದೆ.

      ಐದು ಅವಧಿಗೆ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಅವರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನವೇ ಗಂಭೀರ ಸ್ವರೂಪದ ಕೆಮ್ಮಿನ ಸಮಸ್ಯೆಯಿತ್ತು. ಚುನಾವಣೆ ಆದ ನಂತರ ಚಿಕಿತ್ಸೆ ಪಡೆದಿದ್ದರು. ಆದರೆ ಜಯನಗರ ವಿಧಾನಸಭೆ ಚುನಾವಣೆಯು ಮುಂದಕ್ಕೆ ಹೋಗಿದ್ದರಿಂದ ಹಾಗೂ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾರಣಕ್ಕೆ ಅನಂತ್ ಕುಮಾರ್ ಚಿಕಿತ್ಸೆ ಪಡೆಯುವುದು ಸಹ ಮುಂದೆ ಹೋಗಿತ್ತು.

      Union minister HN Ananth Kumar unwell, now in London for treatment

      ಎರಡು ವಾರಗಳ ಹಿಂದೆ ಪ್ರಧಾನಿ ಮೋದಿ ಅವರಿಂದ ಒಪ್ಪಿಗೆ ಪಡೆದ ನಂತರ ಚಿಕಿತ್ಸೆಗಾಗಿ ಅನಂತ್ ಕುಮಾರ್ ವಿದೇಶಕ್ಕೆ ತೆರಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+