ನಮ್ಮ ಮೆಟ್ರೋ: 2ಎ, 2ಬಿ ಹಂತದ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆ

ಬೆಂಗಳೂರು, ಏಪ್ರಿಲ್ 20: ನಮ್ಮ ಮೆಟ್ರೋ ಯೋಜನೆಯ 2ಎ ಮತ್ತು 2 ಬಿ ಹಂತಕ್ಕೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಒಟ್ಟಾರೆ, 58.19 ಕಿಲೋ ಮೀಟರ್ ಉದ್ದದ ಈ ಯೋಜನೆಗೆ ಒಟ್ಟಾರೇ. 14,788,101 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

2ಎ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಆರ್ ಪುರಂವರೆಗೆ ಹಾಗೂ 2ಬಿ ಹಂತದಲ್ಲಿ ಕೆಆರ್ ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.

Union Cabinet Approves Bangalore Metro Rail Project Phase 2A, 2B

ಬಿಎಂಆರ್‌ಸಿಎಲ್ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಪರೀಕ್ಷಾರ್ಥ ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದೆ. ಇದು ನೇರಳೆ ಮಾರ್ಗ ಮೈಸೂರು ರಸ್ತೆಯ ವಿಸ್ತರಿತ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಪರೀಕ್ಷಾರ್ಥ ಮೆಟ್ರೋ ರೈಲು ಸಂಚರಿಸಿದೆ.

2020ರ ಡಿಸೆಂಬರ್‌ನಲ್ಲಿ ಬಿಎಂಆರ್‌ಸಿಎಲ್ ನೀಡಿದ್ದ ಮಾಹಿತಿ ಪ್ರಕಾರ 2021ರ ಆರಂಭದಲ್ಲಿಯೇ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚರಿಸಲಿದೆ.

7.5 ಕಿ.ಮೀ ಉದ್ದದ ವಿಸ್ತರಿಸಿದ ಮೆಟ್ರೋ ಮಾರ್ಗ ಇದಾಗಿದೆ. ಜೂನ್ 2021ರಲ್ಲಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಹಳಿಗಳ ವೀಕ್ಷಣೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+