ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆ, ಮಕ್ಕಳು, ಹಿರಿಯರ ಸುರಕ್ಷೆಗಾಗಿ ಜಿಪಿಎಸ್ ಸಾಧನ ಬಳಸಿ

By Mahesh
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 07: ಬೆಂಗಳೂರು ಮೂಲದ ಯುಎನ್‍ಐಜಿಪಿಎಸ್ ಸಲ್ಯೂಷನ್ಸ್ ಸಂಸ್ಥೆಯು ಜಿಪಿಎಸ್ ಪತ್ತೆ ಸಾಧನವನ್ನು ಲೋಕಾರ್ಪಣೆಗೊಳಿಸಿದೆ. "ಯುಎನ್‍ಐ ಸುರಕ್ಷಾ' ಎಂಬ ಹೆಸರಿನಲ್ಲಿ ಹೊರತಂದಿದೆ.

ಈ ಸಾಧನವನ್ನು ಹೊರತರುವ ಹಿಂದಿರುವ ಉದ್ದೇಶ ಸುರಕ್ಷತಾ ಲೋಪವನ್ನು ಕಡಿಮೆ ಮಾಡುವುದು. ಸುರಕ್ಷತೆಗೆ ಸವಾಲಾಗಿರುವ ಅಪಹರಣದಂತಹ ಪ್ರಕರಣಗಳ ಪರಿಹಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸುವುದಾಗಿದೆ. ಸುರಕ್ಷತೆಯ ಸಮಸ್ಯೆ ಇರುವಂತಹ ತಾಣಗಳಲ್ಲಿ, ಕ್ಯಾಬ್ ಹಾಗೂ ಇತರೆ ಸಾರ್ವಜನಿಕ ತಾಣದಲ್ಲಿ ಈ ಸಾಧನವು ಮಹಿಳೆಯರೂ ಸೇರಿದಂತೆ ಎಲ್ಲಾ ಬಳಕೆದಾರರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ.

ವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯವಾಹನಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ

ಈ ಕಾರ್ಯಕ್ರಮವು ಜಿಪಿಎಸ್ ಒಳಗೊಂಡ ವಾಚುಗಳು, ಪೋರ್ಟೆಬಲ್ ಟ್ರ್ಯಾಕಿಂಗ್ ಸಾಧನಗಳ ಲೋಕಾರ್ಪಣೆಗೆ ಸಾಕ್ಷಿಯಾಗಿದೆ.

ಈ ಸಾಧನವನ್ನು ಕೊಳ್ಳಲು ಬಯಸುವ ಆಸಕ್ತರು, ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಖರೀದಿ ಲಭ್ಯವಿದೆ. ಅದಕ್ಕೆ ಸಂಪರ್ಕಿಸುವ ಸಂಸ್ಥೆಯ ವೆಬ್‍ಸೈಟ್ ಯೂನಿಜಿಪಿಎಸ್ ನಲ್ಲಿ ಪಡೆದುಕೊಳ್ಳಬಹುದು. ಯುಎನ್‍ಐಜಿಪಿಎಸ್ ಸಲ್ಯೂಷನ್ ಸಿಇಒ ದೀಪ್ತಿ ಕೊಹ್ಲಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ.

ಜಿಪಿಎಸ್ ಕೈಗಡಿಯಾರ

ಜಿಪಿಎಸ್ ಕೈಗಡಿಯಾರ

ಜಿಪಿಎಸ್ ಕೈಗಡಿಯಾರ: ಈ ವಾಚು ಜಿಪಿಎಸ್ ಆಧಾರಿತ ತಂತ್ರಜ್ಞಾನ ಚಾಲಿತವಾಗಿದೆ. ಇದರ ಪತ್ತೆ ಕಾರ್ಯ ಆನ್‍ಲೈನ್ ಮೂಲಕ ಆಗಲಿದೆ. ಎಸ್‍ಒಎಸ್‍ಗಳು ಕರೆ ಅಥವಾ ಎಸ್‍ಎಂಎಸ್ ಸಂದೇಶದ ರೂಪದಲ್ಲಿ ರವಾನೆಯಾಗುತ್ತವೆ. ಜಿಯೊಫೆನ್ಸ್ ಎಚ್ಚರಿಕೆ ಹಾಗೂ ಮಕ್ಕಳು ಇರುವ ಸ್ಥಳವನ್ನು ಪತ್ತೆ ಮಾಡಲು ಸಹಕರಿಸುವ ನಿಖರ ಸಮಯ, ಸ್ಥಳ ಗುರುತಿಸುವ ಸಾಮಥ್ರ್ಯ ಹೊಂದಿರುತ್ತದೆ. ಇದಲ್ಲದೇ ಇನ್ನೂ ಅನೇಕ ಪ್ರಮುಖ ಅನುಕೂಲಗಳು ಈ ವಾಚಿನಲ್ಲಿವೆ.

ಪೋರ್ಟೆಬಲ್ ಪತ್ತೆ ಸಾಧನ: ಜಿಪಿಎಸ್ ಅಳವಡಿತ ಪೋರ್ಟೆಬಲ್ ಸಾದನವನ್ನು ತೆಗೆದುಕೊಂಡು ಹೋಗುವುದು ಕೂಡ ಸುಲಭ. ಮಹಿಳೆಯರು ತಮ್ಮ ಪರ್ಸ್‍ಗಳಲ್ಲಿ ಮಕ್ಕಳು ಬ್ಯಾಗ್‍ನಲ್ಲಿ ಇಲ್ಲವೇ ಆಭರಣ ಬಾಕ್ಸ್‍ನಲ್ಲಿ ಆರಾಮವಾಗಿ ಇರಿಸಿಕೊಳ್ಳಬಹುದು. ಯಾವುದೇ ರೀತಿಯ ಬ್ಯಾಟರಿ ಚಾರ್ಜ್ ಮಾಡದೇ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಸಾಧನ ಹೊಂದಿದೆ.

ನೈಜ ಸಮಯದ ಟ್ರ್ಯಾಕಿಂಗ್ ವ್ಯವಸ್ಥೆ

ನೈಜ ಸಮಯದ ಟ್ರ್ಯಾಕಿಂಗ್ ವ್ಯವಸ್ಥೆ

ಅಲ್ಲದೇ ಅತ್ಯಂತ ವಿಶಿಷ್ಟವಾದ ಸುರಕ್ಷತೆಯನ್ನು ಕುಟುಂಬ ಸದಸ್ಯರಿಗೆ ಯಾವುದೇ ಸ್ಥಳದಲ್ಲಿದ್ದರೂ ಕೂಡ ನೀಡುತ್ತದೆ. ಈ ಚಿಕ್ಕ ಪತ್ತೆ ಸಾಧನವು ಬ್ಯಾಗ್ ಒಳಗೆ ಎಲ್ಲಿಯೋ ಇರಿಸಿರುವ ಅಮೂಲ್ಯ ವಸ್ತುಗಳು, ಸಲಕರಣೆಗಳನ್ನು ಐಒಟಿ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ಕಾರ್ಯ ಮಾಡುತ್ತದೆ.

"ಸುರಕ್ಷತೆ ಅನ್ನುವುದು ಭಾರತ ದೇಶದಲ್ಲಿ ಪ್ರಮುಖ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಅನಿವಾರ್ಯ ಕೂಡ ಆಗಲಿದೆ. ಎಸ್‍ಒಎಸ್ ಕೀ ಬಳಕೆ ಮೂಲಕ ಮಕ್ಕಳು, ಮಹಿಳೆಯರು ತಮಗೆ ತೊಂದರೆ ಎದುರಾದಾಗ ತಕ್ಷಣ ಅಲಾರಾಂ ಮೊಳಗುತ್ತದೆ. ಈ ಸಾದನದ ಸಹಕಾರದಿಂದ ಸಹಾಯ ಪಡೆಯಬಹುದಾಗಿದೆ. ಜೀವಂತ ನೈಜ ಸಮಯದ ಟ್ರ್ಯಾಕಿಂಗ್ ವ್ಯವಸ್ಥೆ ಇದರಲ್ಲಿದೆ.

ಬಳಕೆದಾರರ ಸ್ನೇಹಿಯಾಗಿ ಈ ಸಾಧನ

ಬಳಕೆದಾರರ ಸ್ನೇಹಿಯಾಗಿ ಈ ಸಾಧನ

ಇದು ಪಾಲಕರು/ಪೋಷಕರನ್ನು ಸಂತೃಪ್ತಿಯಿಂದ ಇರುವಂತೆ ಮಾಡುತ್ತದೆ. ತಮ್ಮವರನ್ನು ನಿರಂತರವಾಗಿ, ನಿರಾತಂಕವಾಗಿ ಹಿಂಬಾಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಅತ್ಯಂತ ಬಳಕೆದಾರರ ಸ್ನೇಹಿಯಾಗಿ ಈ ಸಾಧನ ಸಿದ್ಧವಾಗಿದೆ. ಮಕ್ಕಳಿಗೆ ಕೂಡ ಅತ್ಯಂಥ ಸರಳವಾಗಿ ಬಳಸುವ ಮಾದರಿಯಲ್ಲಿ ಲಭ್ಯವಿದೆ' ಎಂದು ಯುಎನ್‍ಐಜಿಪಿಎಸ್ ಸಲ್ಯೂಷನ್‍ನ ಸಂಸ್ಥಾಪಕಿ ಹಾಗೂ ಸಿಇಒ ದೀಪ್ತಿ ಕೊಹ್ಲಿ ತಿಳಿಸಿದ್ದಾರೆ.

ಉತ್ಪನ್ನ ಲೋಕಾರ್ಪಣೆಗೊಳಿಸಿ ಮಾತನಾಡಿದ ಯುಎನ್‍ಐಜಿಪಿಎಸ್ ಸಲ್ಯೂಷನ್ಸ್‍ನ ಸಿಟಿಒ, ವ್ಯವಸ್ಥಾಪನಾ ಪಾಲುದಾರರಾದ ರಾಜೇಶ್ ಗೇವರ್, ಕಾರ್ಯನಿರ್ವಹಿಸಿ ರಾತ್ರಿ ವಾಪಾಸಾಗುವ ಹಾಗೂ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ನಮ್ಮ ಪರಿಹಾರ ಅತ್ಯಂತ ಉಪಯುಕ್ತವಾಗಿ ಲಭಿಸಲಿದೆ. ಅಲ್ಲದೇ ವಿಪರೀತ ದೂರ ಸಂಚರಿಸುವವರಿಗೂ ಇದು ಉಪಯೋಗಿ.

ಸಿಎಂಒ ಆಗಿರುವ ಶ್ಯಾಮ್ ನಿಹಾಟೆ

ಸಿಎಂಒ ಆಗಿರುವ ಶ್ಯಾಮ್ ನಿಹಾಟೆ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಈ ಸಾಧನವು ತಮ್ಮ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮೂಲಕ ಧೈರ್ಯ ಹೊಂದುವ ಅವಕಾಶವನ್ನು ಮಾಡಿಕೊಡುತ್ತದೆ' ಎಂದ ಅವರು ಮುಂದುವರಿದು ಮಾತನಾಡಿ, ಈ ಸಾದನವು ವಿಶ್ವದ ಯಾವುದೇ ಮೂಲೆಯಿಂದ ಬೇಕಾದರೆ ಟ್ರ್ಯಾಕ್ ಮಾಡಬಹುದಾದ ಅನುಕೂಲ ಹೊಂದಿದೆ. ಬಳಕೆದಾರರಿಗೆ ಅತ್ಯಂತ ಪ್ರಾಮಾಣಿಕವಾಗಿ ನಿಖರ ದಾಖಲೆಯನ್ನು ಒದಗಿಸುತ್ತದೆ' ಎಂದರು.

"ಈ ಸಾಧನದ ಪೂರೈಕೆದಾರರು ಸುರಕ್ಷತೆ ಹಾಗೂ ನಿಯಂತ್ರಣವನ್ನು ಉತ್ತಮವಾಗಿ ಸಾಧಿಸಿದ್ದಾರೆ. ಇದರ ಒಳಗೆ ನಮ್ಮ ಫ್ಲಿಟ್ ನಿರ್ವಹಣೆ ಪರಿಹಾರವನ್ನು ಬಳಸಲಾಗಿದೆ. ಇದರಿಂದ ಸಾಕಷ್ಟು ಗ್ರಾಹಕರಿಗೆ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು. ಅಪಾರ ನಿಯಂತ್ರಣ ಜತೆಗೆ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ' ಎಂದು ಐಐಎಂ ಇಂದೋರ್‍ನ ಹಳೆಯ ವಿದ್ಯಾರ್ಥಿ ಹಾಗೂ ಯುಎನ್‍ಐಜಿಪಿಎಸ್‍ನಲ್ಲಿ ಸಿಎಂಒ ಆಗಿರುವ ಶ್ಯಾಮ್ ನಿಹಾಟೆ ಅಭಿಪ್ರಾಯ ಪಟ್ಟಿದ್ದಾರೆ.

ಯುಎನ್‍ಐಜಿಪಿಎಸ್ ಸಲ್ಯೂಷನ್

ಯುಎನ್‍ಐಜಿಪಿಎಸ್ ಸಲ್ಯೂಷನ್

ಯುಎನ್‍ಐಜಿಪಿಎಸ್ ಸಲ್ಯೂಷನ್ ಕಂಪನಿಯು ಐಟಿ ಕೈಗಾರಿಕೆಯ ಹಿರಿಯ ವ್ಯಕ್ತಿಗಳ ಮೆದುಳಿನಲ್ಲಿ ಹುಟ್ಟಿದ ಕೂಸು. ಇದರ ವ್ಯವಸ್ಥಾಪನಾ ಮಂಡಳಿಯು ಐಐಎಂ ಹಾಗೂ ಐಐಟಿಯ ಹಳೆಯ ವಿದ್ಯಾರ್ಥಿಗಳ ಸಮೂಹವನ್ನು ಒಳಗೊಂಡಿದೆ. ಅಲ್ಲದೇ ಮಾಜಿ ಮೆಕಿನ್ಸೆ ಪಾಲುದಾರರಿಂದ ಸಲಹೆ ಪಡೆದು ರಚನೆಗೊಂಡಿದೆ. ಯುಎನ್‍ಐಜಿಪಿಎಸ್ ಸಲ್ಯೂಷನ್ ಸಿಇಒ ದೀಪ್ತಿ ಕೊಹ್ಲಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ.

ಮೊದಲ ತಲೆಮಾರಿನ ಮಹಿಳಾ ಉದ್ಯಮಿ ಇವರು. ನಂತರ ಈ ಸಂಸ್ಥೆಗೆ ರಾಜೇಶ್ ಜಿ. ಅವರು ಸೇರ್ಪಡೆಯಾದರು. ಮದ್ರಾಸ್ ಐಐಟಿಯಿಂದ ಇವರು ಬಂದಿದ್ದಾರೆ. ಆಮೇಲೆ ಐಐಎಂ ಇಂದೋರ್‍ನ ಹಳೆ ವಿದ್ಯಾರ್ಥಿ ಶ್ಯಾಮ್ ನಿಹಾಟೆ ಸಿಎಂಒ ಸೇರ್ಪಡೆಯಾದರು. ಇನ್ನು ದಿನೇಶ್ ಘುಟಗೆ ಐಐಟಿಎಂ ಹಳೆಯ ವಿದ್ಯಾರ್ಥಿ.

English summary
Bengaluru based UniGPS Solutions launches GPS tracking devices under the name ‘UNI Suraksha’ today. The product aims to minimize the security issues and threats like kidnapping, by providing solutions using latest technologies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X