Namma Metro: ಮೆಟ್ರೋ ನಿಲ್ದಾಣದಿಂದ ಬಾಷ್ ಕ್ಯಾಂಪಸ್‌ಗೆ ನೇರ ಸಂಪರ್ಕ- ಮಾಹಿತಿ, ವಿವರ
ಬೆಂಗಳೂರು, ನವೆಂಬರ್ 18: ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದ ಜನಕ್ಕೆ ಮೆಟ್ರೋ ಕೊಂಚ ಮಟ್ಟಿಗಿನ ರಿಲೀಫ್ ನೀಡಿತ್ತು. ಸಮಯ ಉಳಿಸಲು, ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪ್ರತಿನಿತ್ಯವು ಲಕ್ಷಾಂತರ ಜನರು ಮೆಟ್ರೋದಲ್ಲಿ ಪ್ರಯಣಿಸುತ್ತಾರೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯವೂ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ.
ಇದೀಗ ನಮ್ಮ ಮೆಟ್ರೋ ಟೆಕ್ ಕಂಪನಿಯೊಂದಿಗೆ ಹೊಸ ಪ್ರಯೋಗವೊಂದಕ್ಕೆ ಮುಂದಾಗಿದೆ. ಇದರಿಂದ ಕಂಪನಿಯ ಸಾವಿರಾರು ಉದ್ಯೋಗಿಗಳಿಗೆ ನೆರವಾಗಲಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಬಾಷ್ ಲಿಮಿಟೆಡ್ ನಡುವೆ ಶುಕ್ರವಾರ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ.

ನೂತನವಾಗಿ ನಿರ್ಮಾಣವಾಗುತ್ತಿರುವ ಮೆಟ್ರೋ ಗುಲಾಬಿ ಮಾರ್ಗ ಕಾಳೇನ ಅಗ್ರಹಾರದಿಂದ-ನಾಗವಾರ ಮಾರ್ಗದ ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ, ಬಾಷ್ ಲಿಮಿಟೆಡ್ ಕ್ಯಾಂಪಸ್‌ಗೆ ನೆಲದಡಿ ನೇರ ಸಂಪರ್ಕ ಒದಗಿಸುವ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಮತ್ತು ಬಾಷ್ ಸಂಸ್ಥೆಗಳು ಸಹಿ ಹಾಕಿವೆ.
ಸುಮಾರು 12 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿರುವ ಬಾಷ್ ಕಂಪನಿಯು ತಮ್ಮ ಉದ್ಯೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಈ ಒಪ್ಪಂದ ಮಾಡಿಕೊಂಡಿದೆ. ಮೆಟ್ರೋ ನಿಲ್ದಾಣದ ಕಾನ್ಕೋರ್ಸ್ ಮಟ್ಟದಿಂದ ಬಾಷ್ ಆವರಣಕ್ಕೆ ನೆಲದಡಿ ಸಂಪರ್ಕ ಕಲ್ಪಿಸುವುದಕ್ಕೆ 30 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿನ ಮೊದಲ ಒಪ್ಪಂದ ಇದಾಗಿದ್ದು, ಬಾಷ್ ಉದ್ಯೋಗಿಗಳು ರಸ್ತೆ ದಾಟುವ ಅಗತ್ಯವಿಲ್ಲದೆ ನೇರವಾಗಿ ಮೆಟ್ರೋ ನಿಲ್ದಾಣದಿಂದ ಬಾಷ್ ಆವರಣಕ್ಕೆ ತಲುಪಬಹುದಾಗಿದೆ. ಇನ್ನು ಈ ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ಬಾಷ್ ಲಿಮಿಟೆಡ್ ಭರಿಸಲಿದ್ದು, ಕಾಮಗಾರಿಯನ್ನು ಬಿಎಂಆರ್‌ಸಿಎಲ್ ನಿರ್ವಹಿಸಲಿದೆ.
ನೀಲಿ ಮಾರ್ಗದ ಅಪ್ಡೇಟ್ ಏನು..?
ಬೆಂಗಳೂರು ನಮ್ಮ ಮೆಟ್ರೋ 55 ಕಿಲೋ ಮೀಟರ್ ಉದ್ದದ ನೀಲಿ ಮಾರ್ಗದ ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ. ವಿವಿಧ ಹಂತದ ಕೆಲಸಗಳು ಪೂರ್ಣಗೊಂಡಿವೆ. ಈ ಮಾರ್ಗವು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ 31 ಮೀಟರ್ ಸಂಯೋಜಿತ ಗಿರ್ಡರ್ ನಿರ್ಮಾಣ ಪೂರ್ಣಗೊಂಡಿದೆ.












Click it and Unblock the Notifications