ನಮ್ಮ ಮೆಟ್ರೋ ಸುರಂಗ ಮಾರ್ಗ: ಅತಿ ಕಡಿಮೆ ಮೊತ್ತಕ್ಕೆ ಟೆಂಡರ್
ಬೆಂಗಳೂರು, ಜನವರಿ 28: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆವರೆಗಿನ 5.63 ಕಿ.ಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಲಾಗಿದೆ.
ಗೊಟ್ಟಿಗೆರೆ-ನಾಗವಾರ ಯೋಜನೆಯಲ್ಲಿ ಸುರಂಗ ಮಾರ್ಗಗಳಿಗೆ ಕಳೆದ ವರ್ಷ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಶೇ.60ಕ್ಕಿಂತ ಅಧಿಕ ಮೊತ್ತವನ್ನು ಉಲ್ಲೇಖಿಸಿದ್ದರಿಂದ ಇಡೀ ಟೆಂಡರ್ ರದ್ದುಗೊಳಿಸಲಾಗಿತ್ತು.
ಬ್ರಿಗೇಡ್ ರಸ್ತೆಯ ವೆಲ್ಲಾರ್ ಜಂಕ್ಷನ್‌ನಿಂದ ಎಂಜಿ ರಸ್ತೆ, ಶಿವಾಜಿನಗರ, ದಂಡು ಪ್ರದೇಶ, ಪಾಟರಿ ಟೌನ್, ಮೂಲಕ ಟ್ಯಾನರಿ ರಸ್ತೆಯವರೆಗೆ ನಿರ್ಮಾಣವಾಗಲಿರುವ ಸುರಂಗ ಮಾರ್ಗ ಇದಾಗಿದೆ.

ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಎಲ್ ಅಂಡ್ ಟಿ ನಿಗಮ, ಊಹಿಸಿದ ವೆಚ್ಚಕ್ಕಿಂತ ಶೇ.17.5 ಅಧಿಕ ಬಿಡ್ ಮಾಡಿದೆ ಎನ್ನುವ ಮಾಹಿತಿ ಲಭಿಸಿದೆ. ಬಿಡ್ ಕೊಂಚ ಹೆಚ್ಚಾದರೂ ಬಿಎಂಆರ್‌ಸಿಎಲ್ ಪ್ರಕ್ರಿಯೆ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications