ಶಿಳ್ಳೆ ತಂದಿಟ್ಟಿತು ಆಪತ್ತು: ಅಮೆರಿಕಾ ಬದಲು ಜೈಲು ಪಾಲಾದ ಎನ್‌ಆರ್‌ಐಗಳು
ಬೆಂಗಳೂರು, ಡಿಸೆಂಬರ್ 11: ಭಾರತೀಯ ಮೂಲದ ಆಸ್ಟ್ರೇಲಿಯಾ ಮಹಿಳೆಗೆ ಕ್ಯಾಟ್ ಕಾಲಿಂಗ್ ಮಾಡಿದ್ದಲ್ಲದೆ ಆಕೆಯನ್ನು ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಭಾರತೀಯ ಮೂಲದ ಅಮೆರಿಕಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಬ್‌ನಲ್ಲಿ ರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ಈ ಘಟನೆ ನಡೆದಿದೆ.ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ಇಂದಿರಾನಗರ ಪೊಲೀಸರು ರಮೇಶ್ ಅಂಕೂರ್, ರೋಹನ್ ರಮೇಶ್ ಎಂಬುವವರನ್ನು ಬಂಧಿಸಿದ್ದಾರೆ, ಇದೀಗ ಅಮೆರಿಕಾಗೆ ಹೋಗುವವರು ಜೈಲು ಪಾಲಾದಂತಾಗಿದೆ.
ಆರೋಪಿಗಳ ಪೋಷಕರು ಈ ಹಿಂದೆ ಅಮೆರಿಕಾದ ನ್ಯೂ ಜರ್ಸಿಯಲ್ಲಿದ್ದು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. ರಮೇಶ್ ಹಾಗೂ ರೋಹನ್ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದಾರೆ.ಅಲ್ಲೇ ನೆಲೆಸಿದ್ದರು. ಇತ್ತೀಚೆಗೆ ಪೋಷಕರನ್ನು ನೋಡಿಕೊಂಡು ಹೋಗಲು ಬಂದಿದ್ದರು.

ಇಂದಿರಾ ನಗರದ 100 ಅಡಿ ರಸ್ತೆಯಲ್ಲಿನ ಸ್ವಿಂಗ್ ಪಬ್‌ಗೆ ತೆರಳಿದ್ದ ಮಹಿಳೆ ಆಕೆಯ ಪತಿ ಊಟ ಮುಗಿಸಿಕೊಂಡು ಮನೆಗೆ ತೆರಳಲು ರಾತ್ರಿ 1.15ರ ಸುಮಾರಿಗೆ ಪಬ್ ಹೊರಗಡೆ ನಿಂತಿದ್ದರು. ಆ ಸಂದರ್ಭದಲ್ಲಿ ಹೊರಬಂದ ರಮೇಶ್ ಹಾಗೂ ರೋಹನ್ ಮಹಿಳೆಯನ್ನು ನೋಡಿ ಶಿಳ್ಳೆ ಹೊಡೆದು ಅಶ್ಲೀಲವಾಗಿ ಸನ್ನೆ ಮಾಡಿದ್ದಾರೆ.
ಆರೋಪಿಗಳ ವರ್ತನೆಯನ್ನು ಸಹಿಸಲಾಗದೆ ಮಹಿಳೆ ಅವರನ್ನು ದೂರು ನಿಲ್ಲುವಂತೆ ಹೇಳಿದ್ದಾರೆ, ಇಷ್ಟಕ್ಕೆ ಸುಮ್ಮನಿರದ ಆರೋಪಿಗಳು ಆಕೆಯ ಮೈಮುಟ್ಟಿದ್ದಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಳಿಕ ಸಂತ್ರಸ್ತೆ ಹಾಗೂ ಆರೋಪಿಗಳನ್ನು ಠಾಣೆಗೆ ಕರೆತಂದ ಪೊಲೀಸರು ಮಹಿಳೆ ಪತಿ ನೀಡಿದ ದೂರಿನನ್ವಯ ಲೈಂಗಿಕ ಕಿರುಕುಳ(354) ಉದ್ದೇಶಪೂರ್ವಕ ಅವಮಾನ(504) ಇನ್ನಿತರೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ಯಾಟ್ ಕಾಲಿಂಗ್ ಎಂದರೇನು?ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಅಶ್ಲೀಲ ದೃಷ್ಟಿಯಿಂದ ನೋಡುವವುದು, ಅಸಭ್ಯವಾಗಿ ಸನ್ನೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡುವುದನ್ನು ಪಾಶ್ಚಾತ್ಯ ದೇಶಗಳಲ್ಲಿ ಕ್ಯಾಟ್ ಕಾಲಿಂಗ್ ಎನ್ನಲಾಗುತ್ತದೆ.












Click it and Unblock the Notifications