ಹಾಲು ಮಾರುವ ವೃದ್ಧನಿಗೆ ಲಾಂಗು-ಮಚ್ಚು ತೋರಿಸಿ ದರೋಡೆ
ಬೆಂಗಳೂರು, ನವೆಂಬರ್ 2: ಹಾಲು ಮಾರುವ ವೃದ್ಧನಿಗೆ ಲಾಂಗು-ಮಚ್ಚು ತೋರಿಸಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ಶನಿವಾರ ನಡೆದಿದೆ.
ಕೆಜಿ ಹಳ್ಳಿಯಲ್ಲಿ ಬೆಳಗಿನ ಜಾವ ಸುಮಾರು 3.50ರ ವೇಳೆಗೆ ಈ ಘಟನೆ ನಡೆದಿದೆ. ಹಾಲು ಮಾರಾಟ ಮಾಡುವ ವೃದ್ಧನ ಬಳಿ ಇಬ್ಬರು ಹೆಲ್ಮೆಟ್ ಧರಿಸಿದ ಇಬ್ಬರು ದುಷ್ಕರ್ಮಿಗಳು ಬಂದು ವೃದ್ಧನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದಾರೆ.
ಹಾಲು, ಮೊಸರು ಮಾರಾಟ ಮಾಡುವ ಮಳಿಗೆ ಬಳಿ ಬಂದು ಹಣ ನೀಡುವಂತೆ ದುಷ್ಕರ್ಮಿಗಳು ದಮ್ಕಿ ಹಾಕಿದ್ದಾರೆ, ಆದರೆ ಹಣ ಕೊಡಲು ನಿರಾಕರಿಸಿದ ವೃದ್ಧ ಮೇಲೆ ಹಲ್ಲೆ ನಡೆಸಿ ಹಣ ದೋಚಿಕೊಂಡು ಬೈಕಿನ ಮೇಲೆ ಪರಾರಿಯಾಗಿದ್ದಾರೆ.

ಕಾನೂನು ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ, ಹಾಲು ಮಾರಿಕೊಂಡು ಜೀವನ ಸಾಗಿಸುವವರ ಜೀವನಕ್ಕೂ ಕುತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications