ಬೆಂಗಳೂರಲ್ಲಿ ಮತ್ತೆ ಎರಡು ದಿನ ಮಳೆ ಬರುವ ಸಾಧ್ಯತೆ
Recommended Video

ಬೆಂಗಳೂರು, ಏಪ್ರಿಲ್ 12: ದಕ್ಷಿಣ ಒಳನಾಡಿನಲ್ಲಿ ಇನ್ನೂ ಇರುವ ಟ್ರಫ್ ನಿಂದಾಗಿ ಏ.12 ಹಾಗೂ 13 ರಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ ಆರಂಭದಲ್ಲೇ ಸೃಷ್ಟಿಯಾದ ಟ್ರಫ್ ನಿಂದಾಗಿ ಕೆಲ ದಿನಗಳವರೆಗೆ ಮಳೆ ಸುರಿದಿತ್ತು. ಟ್ರಫ್ ( ದಟ್ಟ ಮೋಡಗಳ ಸಾಲು) ಇನ್ನೂ ಮುಂದುವರೆದಿರುವುದರಿಂದ ಮತ್ತೆ ಎರಡು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಮಳೆ ಬರುವ ಸಾಧ್ಯತೆಯಿಂದಾಗಿ ನಗರದ ತಾಪಮಾನದಲ್ಲಿ ಹೆಚ್ಚಳವಾಗಿತ್ತು. ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ಗರಿಷ್ಠ ತಾಪಮಾನ 36ರಿಂದ 29 ಡಿಗ್ರಿ ಸೆಲ್ಸಿಯಸ್ ಇತ್ತು. ಈ ವರ್ಷ ಏಪ್ರಿಲ್ ಎರಡನೇ ವಾರದಲ್ಲೂ ಗರಿಷ್ಠ ತಾಪಮಾನ 33.ಡಿಗ್ರಿ ಸೆಲ್ಸಿಯಸ್ ದಾಟಿಲ್ಲ. ಗುರುವಾರ ನಗರದಲ್ಲಿ ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ 21.9 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 33ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 32.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇನ್ನೂ 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, 2 ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications