ಜಾರ್ಜ್ ರಾಜೀನಾಮೆ, ಸಿದ್ದುಗೆ ಹಿನ್ನಡೆ, ಟ್ವೀಟ್ ಪ್ರತಿಕ್ರಿಯೆ

ಬೆಂಗಳೂರು, ಜುಲೈ 18: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದು ಆಯ್ತು, ರಾಜ್ಯಪಾಲರು ಅಂಗೀಕರಿಸಿದ್ದು ಆಯ್ತು. ಮಾಜಿ ಸಚಿವರಾದ ಮೇಲೆ ಜಾರ್ಜ್ ಅವರು ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಸುಮ್ಮನೆ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ. ಇದೆಲ್ಲವನ್ನು ಗಮಿಸುತ್ತಿರುವ ಟ್ವಿಟ್ಟರ್ ಲೋಕ ಹೇಗೆ ಪ್ರತಿಕ್ರಿಯಿಸುತ್ತಿದೆ ನೋಡಿ.

ಮಂಗಳೂರು ಐಜಿ ಕಚೇರಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಮತ್ತು ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಮಡಿಕೇರಿ ಟೌನ್ ಪೊಲೀಸರಿಗೆ ಮಡಿಕೇರಿ ಜೆಎಂಎಫ್‌ಸಿ ಕೋರ್ಟ್ ಸೋಮವಾರ ಆದೇಶ ನೀಡಿತ್ತು.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಮಡಿಕೇರಿ ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ ಅವರು ಸೋಮವಾರ ಮಧ್ಯಾಹ್ನ ಈ ಕುರಿತು ಆದೇಶ ನೀಡಿದರು. ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಅವರು ಜುಲೈ 11ರಂದು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.[ಕೆ.ಜೆ.ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು] ನಂತರದ ಬೆಳವಣಿಗೆಯಂತೆ ಕೆಜೆ ಜಾರ್ಜ್ ಅವರು ಈಗ ಮಾಜಿ ಸಚಿವರಾಗಿದ್ದಾರೆ. ಈ ಬಗ್ಗೆ ಟ್ವೀಟ್ಸ್ ಏನು ಬಂದಿದೆ ಮುಂದೆ ನೋಡಿ....

ಸಿದ್ದರಾಮಯ್ಯ, ಕಾಂಗ್ರೆಸ್ ಗಾಗಿ ರಾಜೀನಾಮೆ

ಸಿದ್ದರಾಮಯ್ಯ, ಕಾಂಗ್ರೆಸ್ ಗಾಗಿ ರಾಜೀನಾಮೆ

ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ ಕೆಜೆ ಜಾರ್ಜ್. [ವಿವರ ಇಲ್ಲಿ ಓದಿ]

ಬಿಜೆಪಿ ಸದನದ ಒಳಗೂ ಹೊರಗೂ ಹೋರಾಡಿದ ಫಲ

ಬಿಜೆಪಿ ಸದನದ ಒಳಗೂ ಹೊರಗೂ ಹೋರಾಡಿದ ಫಲ ಇಂದು ಜಾರ್ಜ್ ರಾಜೀನಾಮೆ ನೀಡುವಂತಾಗಿದೆ.

ಗಣಪತಿ ಅವರ ಪತ್ನಿ ಪಾವನಾ ಅವರ ಪ್ರತಿಕ್ರಿಯೆ

ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್ ಗೆ ನ್ಯಾಯಾಲಯದ ಆದೇಶ ಹಾಗೂ ಜಾರ್ಜ್ ರಾಜೀನಾಮೆ ಬಗ್ಗೆ ಎಂಕೆ ಗಣಪತಿ ಅವರ ಪತ್ನಿ ಪಾವನಾ ಅವರ ಪ್ರತಿಕ್ರಿಯೆ

ಕೋಮುವಾದ ಬಣ್ಣ ಹಚ್ಚಿದರೂ ಹಚ್ಚಬಹುದು

ಜಾರ್ಜ್ ಅವರು ಅಲ್ಪಸಂಖ್ಯಾತ ಎಂದು ಹೇಳಿಕೊಂಡು ಸಿಂಪಥಿ ಪಡೆಯಬಹುದು. ಮಂಗಳೂರಿನ ಚರ್ಚ್ ದಾಳಿ ಪ್ರಕರಣ ಕಾಡುತ್ತದೆ.

ಸೋನಿಯಾ ಅವರ ಆಪ್ತನ ಅವನತಿ

ಸೋನಿಯಾ ಅವರ ಆಪ್ತನ ಅವನತಿ ಆರಂಭವಾಯಿತು. ಡಿಕೆ ರವಿ ಪ್ರಕರಣದಲ್ಲೇ ರಾಜೀನಾಮೆ ನೀಡಬೇಕಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+