ಅಜಿತ್-ಶಾಲಿನಿಗೆ ಪುಟ್ಟ ಪ್ರಿನ್ಸ್ ಜನನ, ಟ್ವಿಟ್ಟರ್ ಟಾಪ್ ಟ್ರೆಂಡಿಂಗ್
ಚೆನ್ನೈ, ಮಾ.2: #KuttyThala (ಅರ್ಥಾತ್ ಪುಟ್ಟ ರಾಜಕುಮಾರ) ಎಂಬ ಹ್ಯಾಶ್ ಟ್ಯಾಗ್ ಸೋಮವಾರ ಬೆಳಗ್ಗಿನಿಂದ ಭಾರತದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಷ್ಟೇ ಅಲ್ಲದೆ ವಿಶ್ವದ ಟಾಪ್ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ತಮಿಳಿನ ಜನಪ್ರಿಯ ನಟ ಅಜಿತ್ ಕುಮಾರ್ ಹಾಗೂ ನಟಿ ಶಾಲಿನಿ(ಬೇಬಿ ಶ್ಯಾಮಿಲಿ ಅಕ್ಕ) ಅವರಿಗೆ ಪುತ್ರ ಜನನವಾಗಿದ್ದನ್ನು ಅವರ ಫ್ಯಾನ್ ಈ ರೀತಿ ಕೊಂಡಾಡುತ್ತಿದ್ದಾರೆ.
ಸೂಪರ್ ಸ್ಟಾರ್ ಗೆ ಮಗು ಹುಟ್ಟಿದರೆ ಅಥವಾ ಇನ್ಯಾವುದೇ ಶುಭ ಸಂಗತಿ ಅವರ ಜೀವನದಲ್ಲಿ ಘಟಿಸಿದರೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುವುದು ಮಾಮೂಲಿ. ಈಗಂತೂ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸುಲಭವಾಗಿ 'ಸ್ಟಾರ್' ನತ್ತ ಫ್ಯಾನ್ಸ್ ಕೈ ಚಾಚುತ್ತಾರೆ. ಆದರೆ, ಈ ಸ್ಟಾರ್ ದಂಪತಿ ಬಗ್ಗೆ ತಮಿಳುನಾಡಿನಲ್ಲಷ್ಟೇ ಅಲ್ಲ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ. [ಅಜಿತ್ ಸಿನಿಮಾಗೆ ಒಳ್ಳೆ ಓಪನಿಂಗ್, ಫ್ಯಾನ್ಸ್ ನಿಂದ ರಕ್ತದಾನ]
ಸಿನಿಮಾ ಅಷ್ಟೇ ಅಲ್ಲದೆ ಸಾಹಸ ಕ್ರೀಡೆ,ಕಾರು ರೇಸಿಂಗ್ ಮೂಲಕ ಅಜಿತ್ ಜನಪ್ರಿಯರಾಗಿದ್ದಾರೆ. ಆನ್ ಅಂಡ್ ಆಫ್ ಸ್ಕ್ರೀನ್ ನಲ್ಲಿ ಸರಳತೆ ಹಾಗೂ ಎಲ್ಲರೊಡನೆ ಸ್ನೇಹಮಯವಾಗಿ ನಡೆದುಕೊಳ್ಳುವ ರೀತಿಯಿಂದ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿದೆ.
ಇತ್ತೀಚಿಗೆ ತೆರೆ ಕಂಡ ಎನ್ನೈ ಅರಿಂಧಾಳ್ ಚಿತ್ರದ ಯಶಸ್ಸಿನಲ್ಲಿ ಅಜಿತ್ ಇರುವಾಗಲೇ ಅವರ ಕುಟುಂಬಕ್ಕೆ ಪುಟ್ಟ ಪ್ರಿನ್ಸ್ ಆಗಮನವಾಗಿದೆ. ಈ ಯುವರಾಜನನ್ನು ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ಅಭಿನಂದನೆಗಳ ಮೂಲಕ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿದ್ದಾರೆ. [ಟ್ವಿಟ್ಟರ್: ಮೋದಿ ನಂ.2, ಒಬಾಮಾ ಈಗಲೂ ನಂ.1]
ರಾಹುಲ್ ದ್ರಾವಿಡ್ ನಿವೃತ್ತಿ, ಮೋದಿ ಲೋಕಸಭೆ ಗೆಲುವು ಸಂದರ್ಭದಲ್ಲಿ ಮಾತ್ರ ಈ ರೀತಿ ವಿಶ್ವದೆಲ್ಲೆಡೆ ಟಾಪ್ ಟ್ರೆಂಡಿಂಗ್ ಹೊಂದಲು ಸಾಧ್ಯವಾಗಿತ್ತು.ಸಾಮಾಜಿಕ ಜಾಲ ತಾಣಗಳಲ್ಲಿ ಅಜಿತ್ ಹಾಗೂ ಶಾಲಿನಿ ದಂಪತಿಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. ಕೆಲವು ಟ್ವೀಟ್ಸ್ ಇಲ್ಲಿದೆ ನೋಡಿ...

ಯಾರಿದು ಕುಟ್ಟಿ ತಲಾ? ಟ್ವಿಟ್ಟರ್ ಟಾಪ್ ಟ್ರೆಂಡಿಂಗ್
ಅಜಿತ್ ಹಾಗೂ ಶಾಲಿನಿ ತಾರಾ ದಂಪತಿಗಳು 1999ರ ತಮಿಳು ಚಿತ್ರ ಅಮರ್ ಕಲಂ ವೇಳೆಯಲ್ಲಿ ಇಬ್ಬರಿಗೂ ಪ್ರೇಮಾಂಕಿರವಾಯಿತು 2000ರಲ್ಲಿ ಮದುವೆಯಾಯಿತು. ಇಬ್ಬರಿಗೂ ಅನೌಷ್ಕ ಹೆಸರಿನ ಏಳು ವರ್ಷದ ಮಗಳಿದ್ದಾಳೆ.
|
#kuttythala ಟ್ವಿಟ್ಟರ್ ಟಾಪ್ ಟ್ರೆಂಡಿಂಗ್
ಲಿಟ್ಲ್ ಪ್ರಿನ್ಸ್ -ಕುಟ್ಟಿ ಥಲಾ ಅಥವಾ ಪುಟ್ಟ ಯುವರಾಜನ ಆಗಮನಕ್ಕೆ #kuttythala ಎಂದು ಹ್ಯಾಶ್ ಟ್ಯಾಗ್ ಆರಂಭಿಸಲಾಗಿದ್ದು, ಈ ಸಮಯದ ತನಕ ಭಾರತದಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.
|
ಅಭಿಮಾನಿಗಳಿಂದ ಶುಭ ಹಾರೈಕೆ ಮಹಾಪೂರ
ಅಭಿಮಾನಿಗಳಿಂದ ಶುಭ ಹಾರೈಕೆ ಮಹಾಪೂರವೇ ಹರಿದು ಬಂದಿದೆ. ವಿಶ್ವದೆಲ್ಲೆಡೆಯಿಂದ ಟ್ವೀಟ್ ಗಳು ಬಂದಿವೆ ಎಂದು ಟ್ರೆಂಡಿಂಗ್ ಇನ್ ಸಂಸ್ಥೆ ಹೇಳಿದೆ.
|
ತಮಿಳು ಚಾನೆಲ್, ವೆಬ್ ಸೈಟ್ ಗಳಿಗೂ ಹಬ್ಬ
ಪೈಪೋಟಿಗೆ ಬಿದ್ದಂತೆ ಅಜಿತ್ ಶಾಲಿನಿ ಮಗು ಫೋಟೊ ಇರುವ ಚಿತ್ರವನ್ನು ಟ್ವೀಟ್ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.
|
ಟ್ವಿಟ್ಟರ್ ಟಾಪ್ ಟ್ರೆಂಡಿಂಗ್ ಚಿತ್ರಗಳು ಇಲ್ಲಿವೆ
Kuttythala ಟ್ವಿಟ್ಟರ್ ಟಾಪ್ ಟ್ರೆಂಡಿಂಗ್ ಚಿತ್ರಗಳು ಇಲ್ಲಿವೆ
|
ಟ್ರೆಂಡಿಂಗ್ ಜಾರಿಯಲ್ಲಿಡಲು ಸಜ್ಜಾದ ಅಭಿಮಾನಿಗಳು
ಟ್ರೆಂಡಿಂಗ್ ಜಾರಿಯಲ್ಲಿಡಲು ಸಜ್ಜಾದ ಅಭಿಮಾನಿಗಳು ಹೆಚ್ಚೆಚ್ಚು ಟ್ವೀಟ್ ಮಾಡುವ ಮೂಲಕ ಟ್ರೆಂಡಿಂಗ್ ಜಾರಿಯಲ್ಲಿಟ್ಟಿದ್ದಾರೆ.
|
ಸಾಮಾಜಿಕ ಕಳಕಳಿಯುಳ್ಳ ನಟ ಅಜಿತ್
ಸಾಮಾಜಿಕ ಕಳಕಳಿಯುಳ್ಳ ನಟ ಅಜಿತ್ ಅವರು ತಮ್ಮ ಪ್ರತಿ ಚಿತ್ರದ ಬಹುತೇಕ ಸಂಭಾವನೆಯನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಬೆಂಗಳೂರಿನಲ್ಲೂ ಅಜಿತ್ ಹೆಸರಿನಲ್ಲಿ ಫ್ಯಾನ್ಸ್ ಕ್ಲಬ್ ಇದ್ದು, ಉಚಿತ ರಕ್ತದಾನ, ಅನ್ನದಾನ ಸೇರಿದಂತೆ ಅನೇಕ ಸಾಮಾಜಿಕ ಕಳ ಕಳಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಒಟ್ಟಾರೆ ಏನಿದು Kuttythala ಎಂದು ಎಲ್ಲರೂ ಹುಬ್ಬೇರಿಸುವಂತಾಗಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications