ಟ್ವಿಟ್ಟರ್: ಮೋದಿ ನಂ.2, ಒಬಾಮಾ ಈಗಲೂ ನಂ.1
ಬೆಂಗಳೂರು, ಫೆ.12: ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈಗಲೂ ಎಲ್ಲರಿಗಿಂತ ಮುಂದಿದ್ದಾರೆ. ಒಬಾಮಾ ನಂತರದ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್‌ನಲ್ಲಿ 10 ಮಿಲಿಯನ್ ಗೂ ಹಿಂಬಾಲಕರನ್ನು ಹೊಂದಿದ್ದಾರೆ. ನರೇಂದ್ರ ಮೋದಿ ಅವರ ವೈಯಕ್ತಿಕ(@narendramodi) ಹಾಗೂ ಪ್ರಧಾನಿ ಸಚಿವಾಲಯ ಅಧಿಕೃತ ಟ್ವೀಟ್ ಖಾತೆ(@PMOIndia)ಮೂಲಕ ಸಾರ್ವಜನಿಕರೊಡನೆ ನಿರಂತರವಾಗಿ ಸಂಪರ್ಕ ಹೊಂದಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿನ ಜನಪ್ರಿಯತೆಯ ಅಳತೆ ಗೋಲನ್ನು ಮೀರಿ ಮೋದಿ ಬೆಳೆಯುತ್ತಿದ್ದಾರೆ. ರಾಜಕಾರಣಿಗಳ ಪೈಕಿ ಮೋದಿ ಅವರು ಎರಡನೇ ಸ್ಥಾನದಲ್ಲಿದ್ದರೆ, ಸೆಲೆಬ್ರಿಟಿಗಳ ಪೈಕಿ, ಒಬಾಮಾ(57.7 M)ಹಾಗೂ ಪೋಪ್(14M) ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ.[ಕ್ರಿಕೆಟ್ ದಿಗ್ಗಜ ಸಚಿನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ]

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಖಾತೆ 10 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದೆ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬುಧವಾರ ಪ್ರಕಟಿಸಿದೆ. ಮೋದಿ ಅವರ PMO ಖಾತೆ ಸುಮಾರು 4.86 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ.
ಟ್ವೀಟ್ ಮಿರರ್, ವಿಡಿಯೋ ಟ್ವೀಟ್ ನಂಥ ಸೌಲಭ್ಯಗಳನ್ನು ಬಳಸಿದ ಪ್ರಪ್ರಥಮ ರಾಜಕಾರಣಿ ಅಥವಾ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಮೋದಿ ಹೊಂದಿದ್ದಾರೆ. ನಿರಂತರವಾಗಿ ಜನರ ಸಂಪರ್ಕ ಹೊಂದಲು ಟ್ವಿಟ್ಟರ್ ನೆರವಾಗಿದೆ. ಜನರ ಜೊತೆ ಸಂವಹನ ನಡೆಸಲು ಟ್ವಿಟ್ಟರ್ ಅನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ.[ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]
ಕಳೆದ ಐದು ತಿಂಗಳಿನಲ್ಲಿ ನಿರಂತರವಾಗಿ ಹಿಂಬಾಲಕರನ್ನು ಹೊಂದುವ ಮೂಲಕ ಫೇಸ್ ಬುಕ್ ನಲ್ಲಿ 27 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಜುಲೈನಲ್ಲಿ ಮೋದಿ ಅವರು 18 ಮಿಲಿಯನ್ ಫೇಸ್ ಬುಕ್ ಗೆಳೆಯರು ಹಾಗೂ 5.09 ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದರು.
ನವೆಂಬರ್ ನಲ್ಲಿ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 8 ಮಿಲಿಯನ್ ದಾಟಿತ್ತು. ಈಗ 10 ಮಿಲಿಯನ್ ಮೀರಿ ಸಾಗುತ್ತಿದೆ. ಫೇಸ್ ಬುಕ್ ಗೆಳೆಯರ ಸಂಖ್ಯೆ 27 ಮಿಲಿಯನ್ ಮೀರಿದೆ. (ಪಿಟಿಐ)












Click it and Unblock the Notifications