Get Updates
Get notified of breaking news, exclusive insights, and must-see stories!

ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!

ನವದೆಹಲಿ, ನ.20: ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಂಡು ಚುನಾವಣೆ ಗೆದ್ದ ಮೋದಿ ಟೀಂಗೆ ಈಗಾಗಲೇ ಪ್ರಶಸ್ತಿ ಗರಿ ಬಂದಿದೆ. ಮೋದಿ ಅವರು ಪ್ರಧಾನಿ ಪಟ್ಟಕ್ಕೇರಿದ ಮೇಲೂ ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಾ ವಿಶ್ವದ ಜನಪ್ರಿಯ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬಿಟ್ಟರೆ ಮೋದಿ ಅವರೇ ಫೇಮಸ್!

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ 8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ನರೇಂದ್ರ ಮೋದಿ ಅವರ ವೈಯಕ್ತಿಕ(@narendramodi) ಹಾಗೂ ಪ್ರಧಾನಿ ಸಚಿವಾಲಯ ಅಧಿಕೃತ ಟ್ವೀಟ್ ಖಾತೆ(@PMOIndia)ಮೂಲಕ ಸಾರ್ವಜನಿಕರೊಡನೆ ನಿರಂತರವಾಗಿ ಸಂಪರ್ಕ ಹೊಂದಿದ್ದಾರೆ.

ಮೋದಿ ಅವರ PMO ಟ್ವಿಟರ್ ಖಾತೆಯಲ್ಲಿ 3.8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ, ಮೋದಿ ಅವರ ವೈಯಕ್ತಿಕ ಖಾತೆ 8.03 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದೆ.

Narendra Modi has 25 million fans on FB, 8 million Twitter followers

ಮೋದಿ ಅವರು ಪ್ರಧಾನಿಯಾಗುತ್ತಿದ್ದಂತೆ, ಫೇಸ್ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ ನಿರಂತರವಾಗಿ ಹಿಂಬಾಲಕರನ್ನು ಹೊಂದುವ ಮೂಲಕ ಫೇಸ್ ಬುಕ್ ನಲ್ಲಿ 25 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಮೋದಿ ಅವರನ್ನು ಬಿಟ್ಟರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು 43.6 ಮಿಲಿಯನ್ ಅಭಿಮಾನಿಗಳನ್ನು ಪಡೆದು ಸಾಮಾಜಿಕ ಜಾಲ ತಾಣಗಳಲ್ಲಿ ಕಿಂಗ್ ಎನಿಸಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ವಿಶ್ವದ ಜನಪ್ರಿಯ ನಾಯಕರಲ್ಲಿ ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್(14 ಮಿಲಿಯನ್) ಅವರು ಇದ್ದರು. ಆದರೆ ಮೋದಿ ಅವರ ಟ್ವೀಟ್ ಗಳು ಜನಪ್ರಿಯತೆ ಹೆಚ್ಚುತ್ತಿದ್ದು, ದೇಶದ ಪ್ರಧಾನಿಯೊಬ್ಬರು ಹೋದ ಕಡೆಯಲೆಲ್ಲ ಟ್ವಿಟರ್ ಖಾತೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ಜನತೆಗೆ ಸಂದೇಶ ನೀಡುತ್ತಿರುವುದು ಮಾತ್ರ ಇದೇ ಮೊದಲು ಎಂದು ಟ್ವಿಟರ್ ಇಂಡಿಯಾ ಹೇಳಿದೆ.

ಜುಲೈನಲ್ಲಿ ಮೋದಿ ಅವರು 18 ಮಿಲಿಯನ್ ಫೇಸ್ ಬುಕ್ ಗೆಳೆಯರು ಹಾಗೂ 5.09 ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮೋದಿ ಅವರ ಟಾಪ್ ಪೋಸ್ಟ್: ಚುನಾವಣೆ ವಿಜಯೋತ್ಸವ ಟ್ವೀಟ್ 70,586 ಬಾರಿ ರೀಟ್ವೀಟ್ ಆಗಿ ಹೊಸ ದಾಖಲೆ ಬರೆದಿದೆ. ಫೇಸ್ ಬುಕ್ ನಲ್ಲಿ ಐಎನ್ಎಸ್ ವಿಕ್ರಮಾದಿತ್ಯ ಚಿತ್ರ 8.22 ಲಕ್ಷ ಲೈಕ್ಸ್ ಹಾಗೂ ಸ್ವಾತಂತ್ರೋತ್ಸವ ದಿನದ ಪೋಸ್ಟ್ 7.72 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಇದಲ್ಲದೆ ಫೇಸ್ ಬುಕ್ ಸಿಇಒ ಮಾರ್ಕ್ ಝಕರ್ ಬರ್ಗ್ ಜೊತೆಗಿನ ಚಿತ್ರ 6.19 ಲೈಕ್ಸ್ , ಇತ್ತೀಚಿನ ಜಿ20 ಶೃಂಗಸಭೆಯಲ್ಲಿ ವಿಶ್ವದ ಟಾಪ್ ನಾಯಕರ ಜೊತೆಗಿನ ಚಿತ್ರ 4.47 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+