11 ಬಾರಿ ತಿರಸ್ಕೃತವಾಗಿದ್ದ ವೋಟರ್ ಐಡಿ ಅಂತೂ ತೃತೀಯ ಲಿಂಗಿಯ ಕೈ ಸೇರಿತು

ಬೆಂಗಳೂರು, ಏ.11: ತೃತೀಯ ಲಿಂಗಿಗಳು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಎಲ್ಲೆಡೆ ಇವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಮತದಾನ ಮಾಡಲು ಮನಸ್ಸಿದ್ದರೂ ಮತದಾರರ ಗುರುತಿನ ಚೀಟಿ ಮಾಡಿಸುವುದು ಎಷ್ಟು ಕಷ್ಟ ಎಂಬುದು ಈ ಘಟನೆಯಿಂದ ಮನದಟ್ಟಾಗುತ್ತದೆ.

ತೃತೀಯ ಲಿಂಗಿಯೊಬ್ಬರ ವೋಟರ್ ಐಟಿ 11 ಬಾರಿ ತಿರಸ್ಕೃತಗೊಂಡು ಕೊನೆಗೂ 12ನೇ ಬಾರಿಗೆ ಅವರ ಕೈ ಸೇರಿದೆ.ಮತದಾನ ಎಲ್ಲರ ಹಕ್ಕು ಹೌದು ಆದರೆ ಮತದಾನ ಗುರುತಿನ ಚೀಟಿ ಮಾಡಿಸಲೂ ಕೂಡ ತೃತೀಯ ಲಿಂಗಿಗಳು ಅಷ್ಟೇ ಅಲೆದಾಡಬೇಕಿದೆ. ಅಂತೂ ರಿಯಾನಾ ಅವರಿಗೆ ಗುರುತಿನ ಚೀಟಿ ದೊರೆತಿದೆ.

Trans woman receives voter ID after being rejected 11 times

22 ವರ್ಷದ ರಿಯಾನಾ 2019ರ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದ ಮತದಾರರ ಗುರುತಿನ ಚೀಟಿ ಮಾಡಿಸಲು ಕಷ್ಟ ಪಡುತ್ತಿದ್ದರು. ಪ್ರತಿ ಬಾರಿಯೂ ಅರ್ಜಿ ತಿರಸ್ಕೃತವಾಗುತ್ತಿತ್ತು.ಇದುವರೆಗೂ 11 ಬಾರಿ ತಿರಸ್ಕೃತವಾಗಿದೆ.

''ನನಗೆ 18 ವರ್ಷ ಪೂರ್ಣವಾದ ದಿನದಿಂದಲೂ ಗುರುತಿನ ಚೀಟಿ ಮಾಡಿಸಲು ಅಲೆದಾಡುತ್ತಿದ್ದೇನೆ ಆದರೆ ಈ ವರ್ಷ ಗುರುತಿನ ಚೀಟಿ ದೊರೆತಿದೆ'' ಎಂದು ಹೇಳಿದರು.

ಬೆಂಗಳೂರು ಕೇಂದ್ರದಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ತೃತೀಯ ಲಿಂಗಿಗಳನ್ನು ಹೊರತುಪಡಿಸಿ ಉಳಿದವರಿಗೆಲ್ಲಾ ಗುರುತಿನ ಚೀಟಿ ಮಾಡಿಸುವುದು ಸುಲಭ ಆದರೆ ನಮಗೆ ಮಾತ್ರ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+