ದೊಡ್ಡಬಳ್ಳಾಪುರ-ಯಲಹಂಕ ರೈಲು ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು, ಮಾರ್ಚ್ 28: ರೈಲು ಹಳಿ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾ.29ರಿಂದ ದೊಡ್ಡಬಳ್ಳಾಪುರ-ಯಲಹಂಕ ನಡುವೆ 2 ತಿಂಗಳು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಈ ಮಾರ್ಗದಲ್ಲಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ರೈಲು ಸಂಚಾರ ವಿಳಂಬವಾಗಲಿದೆ. ಗೋರಖ್ ಪುರ-ಯಶವಂತಪುರ ಎಕ್ಸ್ ಪ್ರೆಸ್ ರೈಲು ಸೋಮವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ನಡುವೆ 35 ನಿಮಿಷ ಮತ್ತು ರಾಜಾನುಕುಂಟೆ-ಯಲಹಂಕ ನಡುವೆ 25 ನಿಮಿಷ ನಿಲ್ಲಲಿದೆ.

ನಾಂದೇಡ್-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪ್ರತಿ ಶನಿವಾರ, ಸೋಮವಾರ, ಬುಧವಾರ ದೊಡ್ಡಬಳ್ಳಾಪುರ-ರಾಜನುಕುಂಟೆ ನಡುವೆ 45 ನಿಮಿಷ ನಿಲ್ಲಲಿದೆ.

Train service interruption between Yelahanka and doddaballapura

ರಾಜಾನುಕುಂಟೆ-ಯಲಹಂಕ ನಡುವೆ 35 ನಿಮಿಷ, ಶ್ರೀ ಸಾಯಿನಗರ್ ಶಿರಡಿ- ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು ಬುಧವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ನಡುವೆ 25 ನಿಮಿಷ ನಿಲ್ಲಲಿದೆ. ಕಾಚಿಗುಡ-ಯಶವಂತಪುರ ಎಕ್ಸ್ ಪ್ರೆಸ್ ಪ್ರತಿ ಬುಧವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ಮತ್ತು ರಾಜಾನುಕುಂಟೆ-ಯಲಹಂಕ ನಡುವೆ 105 ನಿಮಿಷ ಸಂಚಾರ ಸ್ಥಗಿತವಾಗಲಿದೆ.

ಚಿಕ್ಕಬಾಣಾವರ ಸಮೀಪ ಹಳಿ ನಿರ್ವಹಣೆ ಕಾಮಗಾರಿ ಕಾರಣದಿಂದ ಮಾ.29ರಿಂದ ಏ.22ರವರೆಗೆ ಅರಸೀಕೆರೆ-ಕೆಎಸ್ಆರ್ ಬೆಂಗಳೂರು ರೈಲು ಸಂಚಾರ ವಿಳಂಬವಾಗಲಿದೆ. ಇದರಿಂದಾಗಿ ಕೆಎಸ್ಆರ್ ಬೆಂಗಳೂರು-ಮೈಸೂರು ಮ್ಯಾಸೆಂಜರ್ ರೈಲು ಬೆಳಗ್ಗೆ 9.20ರ ಬದಲಾಗಿ 9.50ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+