ರೈಲಿನಲ್ಲಿ ವಿನಾಕಾರಣ ಚೈನ್ ಎಳೆಯುವವರ ಸಂಖ್ಯೆ ದುಪ್ಪಟ್ಟು

ಬೆಂಗಳೂರು, ಏ.9: ರೈಲಿನಲ್ಲಿ ವಿನಾಕಾರಣ ಚೈನ್ ಎಳೆಯುವವರ ಸಂಖ್ಯೆ ವಿಪರೀತವಾಗಿದ್ದು ರೈಲ್ವೆ ಇಲಾಖೆಗೆ ತಲೆನೋವಾಗಿದೆ. ಕೇವಲ 2 ತಿಂಗಳಲ್ಲಿ 144 ಪ್ರಕರಣಗಳು ದಾಖಲಾಗಿವೆ.

ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ತುರ್ತು ಚೈನ್ ವ್ಯವಸ್ಥೆ ರೈಲ್ವೆ ಇಲಾಖೆ ಮಾಡಿದ್ದರೂ ಅದನ್ನು ತುರ್ತು ಸಂದರ್ಭಗಳಷ್ಟೇ ಅಲ್ಲದೆ ಮನಸ್ಸಿಗೆ ಬಂದಂತೆ, ಎಲ್ಲೆಲ್ಲೋ ರೈಲು ಗಂಟೆಗಟ್ಟಲೆ ನಿಲ್ಲುವಂತೆ ಮಾಡುತ್ತಿದ್ದು ಇದರಿಂದ ಪ್ರಯಾಣಿಕರಿಗೂ ಕೂಡ ತೊಂದರೆ ಉಂಟಾಗುತ್ತಿದೆ.

2018ರಲ್ಲಿ ಒಟ್ಟು 405 ಪ್ರಕರಣಗಳು ದಾಖಲಾಗಿತ್ತು ಆದರೆ 2019 ಆರಂಭವಾಗಿ 2 ತಿಂಗಳಲ್ಲೇ 144 ಪ್ರಕರಣಗಳು ದಾಖಲಾಗಿವೆ. ಆದರೆ 2018ರಲ್ಲಿ ಈ ಅವಧಿಯಲ್ಲಿ ಕೇವಲ 75 ಪ್ರಕರಣಗಳು ಮಾತ್ರ ಇದ್ದವು.

train chain pulling cases see high

ಒಮ್ಮೆ ರೈಲು ನಿಂತರೆ ಸಮಸ್ಯೆ ಏನೆಂಬುದನ್ನು ಅರಿತು ಬಳಿಕ ಮತ್ತೆ ಸಂಚಾರ ಆರಂಭವಾಗಲು 15 ನಿಮಿಷವಾದರೂ ತಗುಲುತ್ತದೆ. ತುರ್ತು ಸಂದರ್ಭಕ್ಕಿಂತ ಉಳಿದ ಸಮಯದಲ್ಲಿ ಚೈನ್ ಎಳೆದಿರುವ ಪ್ರಕರಣವೇ ಶೇ.95 ರಷ್ಟಿದೆ.

ಹೆಚ್ಚು ರಷ್ ಇರುವಾಗ ಚೈನ್ ಎಳೆದು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟೊತ್ತಿಗೆ ಅಲ್ಲಿಂದ ಕಾಲ್ಕೀಳುತ್ತಾರೆ. ಕೆಲವರ ಮೇಲೆ 500 ರೂ ದಂಡ ವಿಧಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+