Get Updates
Get notified of breaking news, exclusive insights, and must-see stories!

WFH: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ: ಟೈಮ್ & ಎನರ್ಜಿ ವೇಸ್ಟ್‌, ವರ್ಕ್ ಫ್ರಮ್ ಹೋಮ್ ಕೊಡಿ ಪೋಸ್ಟ್‌ ವೈರಲ್...

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ನೀವೆಲ್ಲಾ ಕೇಳಿಯೇ ಇರುತ್ತೀರಿ. ಅದರಲ್ಲೂ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವವರಿಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯು ವಿಪರೀತ ಸಂಕಷ್ಟವನ್ನು ತಂದೊಡ್ಡಿದೆ. ಮೊದಲೆಲ್ಲವೂ ಕೇವಲ ಪೀಕ್ ಅವರ್‌ಗಳಲ್ಲಿ ಮಾತ್ರ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿತ್ತು. ಆದರೆ ಇದೀಗ ಮಧ್ಯಾಹ್ನದ ಸಮಯದಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ.

ಇದೀಗ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬದಲು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇದ್ದರೆ ಒಳ್ಳೆಯದು ಎನ್ನುವ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ.

Traffic jams are annoying in Bengaluru Waste of time and energy work from home post goes viral

ಬೆಂಗಳೂರು ಹಾಗೂ ಮುಂಬೈನಂತಹ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ. ಕಚೇರಿಗಳಿಗೆ ಹೋಗುವುದರಲ್ಲೇ ನಾವು ಅರ್ಧ ಸುಸ್ತಾಗಿರುತ್ತೇವೆ ಇದರ ಬದಲಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇರಬೇಕು. ಮನೆಯಿಂದ ಕೆಲಸ ಮಾಡುವುದಕ್ಕೆ ಅವಕಾಶ ನೀಡುವಂತೆ ಕಂಪನಿಗಳಿಗೆ ಒತ್ತಾಯಿಸಬೇಕು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ನಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಹಲವರು ಧ್ವನಿ ಗೂಡಿಸಿದ್ದಾರೆ.

ಬೆಂಗಳೂರು ಹಾಗೂ ಮುಂಬೈನಂತಹ ನಗರಗಳಲ್ಲಿ ಕಂಪನಿಗಳು WFH (ಮನೆಯಿಂದಲೇ ಕೆಲಸ ಮಾಡುವುದಕ್ಕೆ) ಅವಕಾಶ ನೀಡಬೇಕು. ಕಂಪನಿಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಇಲ್ಲದ ಅಥವಾ ಮನೆಯಿಂದಲೇ ಕೆಲಸ ಮಾಡಬಹುದಾದ ಕೆಲಸಗಳಿಗೆ ಅವಕಾಶ ಕೊಡಬೇಕು. ಟ್ರಾಫಿಕ್ ಜಾಮ್‌ ಸಮಸ್ಯೆ ಹಾಗೂ ಕಳಪೆ ಮೂಲಸೌಕರ್ಯದೊಂದಿಗೆ ಕಚೇರಿ ಹೋಗುವುದು ತುಂಬಾ ಕಷ್ಟ. ಇದರಿಂದ ಸಮಯ, ಶಕ್ತಿ ಹಾಗೂ ಹಣವನ್ನು ಸುಮ್ಮನೆ ವೇಸ್ಟ್‌ ಮಾಡುವುದರಲ್ಲಿ ಅರ್ಥವಿಲ್ಲ. ಕಚೇರಿಗೆ ಹೋಗುವುದರಲ್ಲಿಯೇ ನಿಮ್ಮ ಶಕ್ತಿಯ ಅರ್ಧದಷ್ಟು ವೇಸ್ಟ್‌ ಆಗುತ್ತದೆ ಎಂದು ಆಕಾಂಕ್ಷಾ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಆನ್‌ಲೈನ್‌ನಲ್ಲಿ ಹಲವರು ನಿಜ ಎಂದಿದ್ದಾರೆ.

ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಇತ್ತು. ಅದೇ ಮಾದರಿಯನ್ನು ಅನುಸರಿಸಬೇಕು. ಈಗ ಎಲ್ಲರೂ ಆಫೀಸ್‌ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ವಿಶೇಷವಾಗಿ ಹೆಚ್ಚಿನ ಕಾರ್ಪೊರೇಟ್ ಕೆಲಸಗಳಲ್ಲಿ ದಿನವೂ ಆಫೀಸ್‌ಗೆ ಹೋಗುವ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ತಿಂಗಳಿಗೊಮ್ಮೆ ಅಥವಾ ವಾರಕ್ಕೆ ಕೆಲವು ದಿನಗಳಲ್ಲಿ ಮಾತ್ರ ಆಫೀಸ್‌ಗೆ ಹೋಗುವಂತಹ ಆಯ್ಕೆಗಳನ್ನು ನೀಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸಮಯ & ಶಕ್ತಿ ಕಳೆದು ಹೋಗುತ್ತಿದೆ: ಇನ್ನು ಬೆಂಗಳೂರು ಹಾಗೂ ಮುಂಬೈನಂತಹ ನಗರಗಳಲ್ಲಿ ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಯ ಹಾಗೂ ಶಕ್ತಿ ಎರಡೂ ವ್ಯರ್ಥವಾಗುತ್ತದೆ ಎಂದಿದ್ದಾರೆ. ಇದಕ್ಕೆ ನಿಜ ಬೆಂಗಳೂರಿನ ಟ್ರಾಫಿಕ್‌ ಜಾಮ್‌ನಲ್ಲಿ ಕಚೇರಿಗೆ ಹೋಗುವುದಕ್ಕೆ 2 ಗಂಟೆ, ಬರುವುದಕ್ಕೆ 2 ಗಂಟೆಗಳ ಕಾಲ ಕಳೆದು ಹೋಗುತ್ತದೆ ಎಂದು ಜನ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+