ಟೋಯಿಂಗ್ ಅಕ್ರಮ ವಸೂಲಿಗೆ ಬ್ರೇಕ್ ಹಾಕಿದ 800 ರೂ. ಲಂಚ ಪ್ರಕರಣ

ಬೆಂಗಳೂರು, ಅ. 08: ಕೇವಲ 800 ರೂಪಾಯಿ ಪ್ರಕರಣ ಸಂಚಾರ ನಿಯಮ ಉಲ್ಲಂಘನೆ ಹೆಸರಿಲ್ಲಿ ಮಾಡುತ್ತಿದ್ದ ಟೋಯಿಂಗ್ ವಸೂಲಿ ಬಾಜಿಗೆ ಬ್ರೇಕ್ ಹಾಕಿದೆ !

ಟೋಯಿಂಗ್ ವಾಹನದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದ ಸಂಚಾರ ಎಎಸ್ಐಗಳು ತಮ್ಮ ಕಾರ್ಯ ಶೈಲಿಯನ್ನೇ ಬದಲಿಸಿಕೊಂಡಿದ್ದಾರೆ. ಕೇವಲ ಎಂಟು ನೂರು ರೂಪಾಯಿ ಕೇಸು ಟೋಯಿಂಗ್ ನಲ್ಲಿ ಮಾಡಿರುವ ಬಹುದೊಡ್ಡ ಬದಲಾವಣೆ ವಿವರ ಇಲ್ಲಿದೆ.

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನ ಸವಾರನಿಂದ ಎಂಟು ನೂರು ರೂ. ಲಂಚ ಪಡೆಯುತ್ತಿದ್ದ ಟೋಯಿಂಗ್ ವಾಹನದ ಏಜೆಂಟ್ ನನ್ನು ಎಸಿಬಿ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಕೇವಲ ಎಂಟು ನೂರು ರೂಪಾಯಿ ಲಂಚ ತಾನೇ ? ದೊಡ್ಡ ದೊಡ್ಡ ಮಿಕಗಳ ಮುಂದೆ ಈತ ಭ್ರಷ್ಟ ಎಂಬ ಲೆಕ್ಕಾಚಾರದ ಮಾತುಗಳು ಹರಿದಾಡಿದ್ದವು. ಎಂಟು ನೂರು ರೂಪಾಯಿ ಲಂಚ ಪಡೆಯುತ್ತಿದ್ದ ಟೋಯಿಂಗ್ ಏಜೆಂಟನನ್ನು ಎಸಿಬಿ ಪೊಲೀಸರು ಬಂಧಿಸಿದ ಪ್ರಕರಣ ಬೆಂಗಳೂರಿನ ಟೋಯಿಂಗ್ ಅಕ್ರಮ ದಂಧೆಗೆ ದೊಡ್ಡ ಪೆಟ್ಟು ನೀಡಿದೆ. ಟೋಯಿಂಗ್ ಅಕ್ರಮ ವಹಿವಾಟಿಗೆ ಪೆಟ್ಟು ನೀಡಿದೆ. ಅಕ್ರಮಕ್ಕೆ ಕಡಿವಾಣ ಬಿದ್ದು ಕಾನೂನು ಬದ್ಧ ದಂಡ ವಸೂಲಿ ಪದ್ಧತಿಗೆ ನಾಂದಿ ಹಾಡಿದೆ.

ಕಾನೂನು ಬದ್ಧ ದಂಡ ವಸೂಲಿ: ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಂದ ದಂಡದ ಮೊತ್ತದಲ್ಲಿ ಅರ್ಧ ಹಣ ವಸೂಲಿ ಮಾಡಿ ವಾಹನ ಬಿಡುಗಡೆ ಮಾಡುತ್ತಿದ್ದ ದಂಧೆ ಸದ್ದಿಲ್ಲದೇ ನಿಂತು ಹೋಗುತ್ತಿದೆ. 800 ರೂ. ಲಂಚ ಪ್ರಕರಣ ಬೆಳಕಿಗೆ ಬಂದ ನಂತರ ನಿಯಮ ಉಲ್ಲಂಘನೆ ಮಾಡಿದ ವಾಹನಗಳಿಂದ ಪೂರ್ತಿ ದಂಡ ಕಟ್ಟಿಸಿಕೊಂಡು ಸಂಚಾರ ಎಎಸ್ಐಗಳು ರಶೀದಿ ಹರಿಯುತ್ತಿದ್ದಾರೆ. ಅರ್ಧ ದಂಡ ಅಕ್ರಮವಾಗಿ ಪಡೆದು ವಾಹನ ಬಿಡುಗಡೆ ಮಾಡುವ ದಂಧೆಗೆ ಕಡಿವಾಣ ಬೀಳುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಸಂಪೂರ್ಣ ನಿಂತು ಹೋಗುವ ಬೆಳವಣಿಗೆಗಳು ನಡೆಯುತ್ತಿವೆ. ಖಾಸಗಿ ಕೆಲಸಗಾರರ ಮೂಲಕ ವಸೂಲಿ ಮಾಡುವ ಬಹುದೊಡ್ಡ ದಂಧೆಗೆ ಪೂರ್ಣ ಬ್ರೇಕ್ ಬಿದ್ದಲ್ಲಿ, ಸರ್ಕಾರದ ಆದಾಯವೂ ಹೆಚ್ಚಳ ಜತೆಗೆ ಅಕ್ರಮಗಳಿಗೂ ಕಡಿವಾಣ ಬೀಳಲಿದೆ.

Towing: Traffic Police All Set to Bring Transparency in Fine Collection

ಟೋಯಿಂಗ್ ದಂಧೆ: ಬೆಂಗಳೂರಿನಲ್ಲಿ 40 ಸಂಚಾರ ಠಾಣೆಗಳಿವೆ. 120 ಟೋಯೀಂಗ್ ವಾಹನಗಳಿವೆ. ಎಲ್ಲಾ ಟೋಯಿಂಗ್ ವಾಹನಗಳು ಸರದಿ ಪ್ರಕಾರ ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತರು ಮಂಜೂರು ಮಾಡುವ ಠಾಣೆಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಬೇಕು. ಕಾನೂನು ಪ್ರಕಾರ ಒಂದು ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರೆ 325 ರೂ. ಟೋಯಿಂಗ್ ಮಾಡುವ ವಾಹನ ಮಾಲೀಕರಿಗೆ ಸರ್ಕಾರ ಪಾವತಿಸುತ್ತದೆ. ಇದರಲ್ಲೇ ವಾಹನ ಡೀಸೆಲ್ ನಿರ್ವಹಣೆ, ಕೆಲಸಗಾರರ ನಿರ್ವಹಣೆ ನೋಡಿಕೊಳ್ಳಬೇಕು. ಆದರೆ ರಾಜಧಾನಿಯಲ್ಲಿ ಟೋಯಿಂಗ್ ಕಾರ್ಯಾಚರಣೆ ದಂಧೆ ಸ್ವರೂಪ ಪಡೆದುಕೊಂಡಿದೆ.

ಟೋಯಿಂಗ್ ವಾಹನದಲ್ಲಿ ಕೆಲಸ ನಿರ್ವಹಿಸುವ ಎಎಸ್ಐಗೆ ಸಂಜೆಯಾದರೆ ಒಂದಷ್ಟು ಹಣ ಪಾವತಿಸಬೇಕು. ಸಂಬಂಧಪಟ್ಟ ಠಾಣೆಗೆ ಒಂದಷ್ಟು ಹಣ ಪಾವತಿ ಮಾಡಬೇಕು. ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುವ ಆರು ಕೆಲಸಗಾರರು ತಲಾ ಕನಿಷ್ಠ 1500 ರೂ. ನಿಂದ 2 ಸಾವಿರ ರೂ. ಗಳಿಕೆಗೆ ಅವಕಾಶ ಮಾಡಿಕೊಡಬೇಕು. ಇದರ ಜತೆಗೆ ವಾಹನ ಖರ್ಚುವೆಚ್ಚ ನೋಡಿಕೊಳ್ಳಬೇಕು. ಹೀಗಾಗಿ ಕಾನೂನು ಬದ್ಧವಾಗಿ ವಾಹನ ಟೋಯಿಂಗ್ ಮಾಡಿ ಸರ್ಕಾರ ನೀಡುವ ಹಣದಲ್ಲಿ ಇವನ್ನು ನಿಬಾಯಿಸಲು ಕಷ್ಟಸಾಧ್ಯ. ಹೀಗಾಗಿ ಅವರು ಹುಡುಕಿಕೊಂಡ ದಾರಿ ಟೋಯಿಂಗ್ ಮಾಡಿದ ವಾಹನಗಳಲ್ಲಿ ದಂಡದ ಮೊತ್ತದಲ್ಲಿ ಶೇ. 50 ರಷ್ಟು ಮಾತ್ರ ಅನಧಿಕೃತವಾಗಿ ವಸೂಲಿ ಮಾಡಿ ವಾಹನ ಬಿಟ್ಟುಕಳಿಸುವ ದಂಧೆಯನ್ನು ಹುಟ್ಟು ಹಾಕಿದ್ದರು.

Towing: Traffic Police All Set to Bring Transparency in Fine Collection

ಟೋಯಿಂಗ್ ವಾಹನ ಸಿಬ್ಬಂದಿ ಹೇಳುವ ಪ್ರಕಾರ ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಕ್ಕೆ 80 ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರೆ ರಶೀದಿ ಹರಿಯುವುದು ಕೇವಲ 15 ರಿಂದ 25 ವಾಹನಕ್ಕೆ. ಅದರಲ್ಲೂ ಯಾರು ರಶೀದಿ ಕೇಳುತ್ತಾರೋ ಅವರಿಗೆ 1150 ರಿಂದ 1650 ರೂ. ದಂಡ ವಿಧಿಸಿ ರಶೀದಿ ನೀಡುತ್ತಾರೆ. ಶೇ. 70 ರಷ್ಟು ಮಂದಿಗೆ ಪೂರ್ಣ ದಂಡ ಪಾವತಿಸುವ ಮನಸು ಇರಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅರ್ಧ ದಂಡ 500 ರೂ. ನಿಂದ 700 ರೂ. ವರೆಗೂ ಹಣ ಪಡೆದು ವಾಹನ ಬಿಟ್ಟು ಕಳಿಸುತ್ತಿದ್ದರು. ಇದರಿಂದ ಪ್ರತಿ ದಿನವೂ ಸಂಚಾರ ಮೇಲಾಧಿಕಾರಿಗಳಿಗೆ ಗೊತ್ತಿಲ್ಲದೇ ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ ಎನ್ನುತ್ತಾರೆ.

ದಿನವೂ ಸಾವಿರಾರು ರೂ. ಗಳಿಕೆ :

ಟೋಯಿಂಗ್ ವಾಹನ ಸಿಬ್ಬಂದಿ ಮೂಲಕ ಹುಟ್ಟು ಹಾಕಿದ್ದ ಅರ್ಧ ಹಣ ವಸೂಲಿ ದಂಧೆಗೆ ವಾಹನದಲ್ಲಿ ಕೆಲಸ ನಿರ್ವಹಿಸುವ ಎಎಸ್ಐಗಳು ಚಕಾರ ಎತ್ತುತ್ತಿರಲಿಲ್ಲ. ಹೀಗೆ ಟೋಯಿಂಗ್ ಎಂಬುದು ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಒಂದು ಟೋಯಿಂಗ್ ವಾಹನ ದಿನಕ್ಕೆ ಸರಾಸರಿ 20 ರಿಂದ 30 ಸಾವಿರ ರೂ. ವರೆಗೂ ಅಕ್ರಮ ವಸೂಲಿ ಮಾಡುವುದನ್ನೇ ಕರಗತ ಮಾಡಿಕೊಂಡಿವೆ. ಇನ್ನು 120 ವಾಹನಗಳ ಮಾಸಿಕ ಲೆಕ್ಕಾಚಾರ ನೋಡಿದರೆ ಕೋಟಿಗಳ ಲೆಕ್ಕದಲ್ಲಿರುತ್ತದೆ. ಇದು ಟೋಯಿಂಗ್ ಅಸಲಿ ಚಿತ್ರಣ. ಹೀಗಾಗಿಯೇ ಹೀಗಾಗಿಯೇ ಸಾರ್ವಜನಿಕರಿಗೂ ಹಾಗೂ ಟೋಯಿಂಗ್ ಸಿಬ್ಬಂದಿ ನಡುವಿನ ಸಂಘರ್ಷಗಳು ಬೆಂಗಳೂರಿನಲ್ಲಿ ಹೆಚ್ಚಾಗಿದ್ದವು.

Towing: Traffic Police All Set to Bring Transparency in Fine Collection

ಎಸಿಬಿ ಪ್ರಕರಣದಿಂದ ದಂಧೆಗೆ ಕಡಿವಾಣ:

ಜಯನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಟೋಯಿಂಗ್ ಮಾಡಿದ್ದ ದ್ವಿಚಕ್ರ ವಾಹನ ಬಿಡಲು 800 ರೂ. ಹಣಕ್ಕೆ ಟೋಯಿಂಗ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದ. ವಾಹನ ಮಾಲೀಕ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸರು ಟೋಯಿಂಗ್ ವಾಹನ ಸಿಬ್ಬಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದಾದ ಬಳಿಕ ಬೆಂಗಳೂರಿನ ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುವ ಎಎಸ್ಐಗಳು ಶಿಸ್ತುಬದ್ಧವಾಗಿ ರಶೀದಿ ಹರಿಯಲು ಮುಂದಾಗಿದ್ದಾರೆ. ಹಬ್ಬದ ಊಟಕ್ಕೆ ಆಸೆ ಪಟ್ಟು ದಿನದ ಊಟ ಕಳೆದುಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಬಂದಂತಿದೆ. ಟೋಯಿಂಗ್ ಮಾಡಿದ ಪ್ರತಿ ವಾಹನದಿಂದಲೂ ಕಾನೂನು ಬದ್ಧ ದಂಡ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಟೋಯಿಂಗ್ ವಾಹನ ಕಾರ್ಯಾಚರಣೆ ಮಾಡಲಾಗದೇ ವಾಹನ ನಿಲ್ಲಿಸುವ ಬಗ್ಗೆ ಟೋಯೀಂಗ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಮಾತ್ರವಲ್ಲ ಈ ಹಿಂದೆ ಟೋಯಿಂಗ್ ವಾಹನಕ್ಕೆ ಆರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು. ಈಗ ಕೂಲಿ ನಿರ್ವಹಣೆ ಮಾಡಲು ಕಷ್ಟ ಸಾಧ್ಯ. ಹೀಗಾಗಿ ಸಿಬ್ಬಂದಿ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಗಿದೆ. ಎಲ್ಲಾ ಟೋಯಿಂಗ್ ವಾಹನಗಳಲ್ಲಿ ಇದೀಗ ಕಾನೂನು ಬದ್ಧ ದಂಡ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಕೆಲ ಸಿಬ್ಬಂದಿಗೂ ಕೋಕ್ ನೀಡಲಾಗಿದೆ ಎಂದು ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಅಂತೂ 800 ರೂ. ಪ್ರಕರಣ ಟೋಯಿಂಗ್ ನಲ್ಲಿ ಈ ಪರಿಯ ಬದಲಾವಣೆಗೆ ನಾಂದಿ ಹಾಡಿದ್ದು ಅಚ್ಚರಿ ಮೂಡಿಸಿದೆ. ಇನ್ನು ಟೋಯಿಂಗ್ ವಾಹನಗಳಗೆ ಕ್ಯಾಮರಾ ಅಳವಡಿಸಿ ಪಾದರ್ಶಕತೆ ತರುವ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದೇನಾದರೂ ಜಾರಿಗೆ ಬಂದರೆ ಟೊಯಿಂಗ್ ದಂದೆ ಸಂಪೂರ್ಣ ನಿಂತು ಬೆಂಗಳೂರಿನ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಬಹುದು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+