ಟೊಮೆಟೊ, ಸೊಪ್ಪು ಕೊಳ್ಳಿ: ಕ್ಯಾರೆಟ್, ಈರುಳ್ಳಿ ಸದ್ಯಕ್ಕೆ ಮರೆತುಬಿಡಿ
ಬೆಂಗಳೂರು, ಡಿಸೆಂಬರ್ 14 : ಒಂದು ತಿಂಗಳಿನಿಂದ ಎಲ್ಲಾ ತರಕಾರಿ ಬೆಲೆಗಳು ಗಗನಕ್ಕೇರಿತ್ತು. ಆದರೆ ಇದೀಗ ಟೊಮೆಟೊ, ಸೊಪ್ಪು, ಏಲಕ್ಕಿ ಬಾಳೆಹಣ್ಣಿನ ಬೆಲೆಯಲ್ಲಿ ಇಳಿಕೆಯಾಗಿದೆ.
ಕಳೆದ ಎರಡು ವಾರಗಳ ಹಿಂದೆ ಕೆ.ಜಿ.ಗೆ 60 ರೂ. ಇದ್ದ ಟೊಮೆಟೋ ಇದೀಗ 20 ರೂ.ಗೆ ಇಳಿಕೆ ಕಂಡಿದೆ. ಸೊಪ್ಪುಗಳ ದರವೂ ಗಣನೀಯ ಇಳಿಕೆಯಾಗಿದೆ. ಒಂದು ಕಂತೆಗೆ 30 ರೂ. ಇದ್ದಿದ್ದು ಇದೀಗ 10ರೂ.ಗೆ ಇಳಿಕೆಯಾಗಿದೆ. ದಾಳಿಂಬೆ, ಬಾಳೆಹಣ್ಣು ಮತ್ತಿತರೆ ಹಣ್ಣುಗಳ ಬೆಲೆಯೂ ಕಡಿಮೆಯಾಗಿದೆ.

ಆದರೆ ಬೀನ್ಸ್, ಈರುಳ್ಳಿ, ಕ್ಯಾರೆಟ್ ತರಕಾರಿಗಳ ಬೆಲೆ ಏರುಗತಿಯಲ್ಲೇ ಸಾಗಿದೆ. ಟೊಮೆಟೋ ಮಾತ್ರ ಕೋಲಾರ ಮತ್ತಿತರ ಭಾಗಗಳಿಂದ ಹೊಸ ಬೆಳೆ ಬಂದಿದೆ. ಹೀಗಾಗಿ ಬೆಲೆಗಳು ಕಡಿಮೆಯಾಗಿದೆ. ದಾಳಿಂಬೆ, ಸೇಬು ಮತ್ತು ಬಾಳೆಹಣ್ಣು ಉತ್ತಮ ಬೆಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಕೆಲವು ಬೆಳೆಗಳು ಹಾಳಾಗಿದೆ. ಆಗ ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಯಿತು. ಇದೀಗ ಕೆಲವು ಹೊಸ ಬೆಳೆ ಬಂದಿರುವುದರಿಂದ ಇಳಿಕೆಯಾಗಿದೆ. ಆದರೆ ಈರುಳ್ಳಿ-ಕ್ಯಾರೆಟ್ ದೀರ್ಘಾವಧಿ ಬೆಳೆಯಾಗಿರುವುದರಿಂದ ಇನ್ನೂ ಹೊಸದಾಗಿ ಬೆಳೆಗಳು ಬಂದಿಲ್ಲ. ಹೀಗಾಗಿ ಇವುಗಳ ಬೆಲೆ ಏರಿಕೆ ಮುಂದುವರೆದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
| ಹಣ್ಣು-ತರಕಾರಿ | ದರ. ರೂ.ಗಳಲ್ಲಿ |
| ಏಲಕ್ಕಿ ಬಾಳೆ | 59.00 |
| ಎಲೆಕೋಸು | 32.00 |
| ಟೊಮೆಟೊ | 20.00 |
| ಬೀಟ್ ರೂಟ್ | 47.00 |
| ಹಾಗಲಕಾಯಿ | 28.00 |
| ಕ್ಯಾರೆಟ್ ನಾಟಿ | 66.00 |
| ಕ್ಯಾರೆಟ್ ಊಟಿ | 73.00 |
| ಬೀನ್ಸ್ | 50.00 |
| ಬೆಂಡೆಕಾಯಿ | 49.00 |
| ಪಚ್ಚಬಾಳೆ | 29.00 |












Click it and Unblock the Notifications