Tomato Price Hike: ಕೇಂದ್ರದ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ ಯಾವಾಗ?
ಬೆಂಗಳೂರು, ಜೂನ್ 28: ತರಕಾರಿ, ದಿನಸಿ ಬೆಲೆ ದೇಶೀಯಮಟ್ಟದಲ್ಲಿ ಏರಿಕೆ ಆಗಿದ್ದು, ಜನಪರ ಕನಿಷ್ಠ ಕಾಳಜಿ ಇರದ ಕರ್ನಾಟಕ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಯಾವಾಗ ಪ್ರತಿಭಟನೆ ಮಾಡುತ್ತೀರಿ ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.
ರಾಜ್ಯದಲ್ಲಿ ಒಂದಲ್ಲಾ ಒಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿಲೇ ಇದೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಇದರ ಬೆನ್ನಲ್ಲೆ ಇದೀಗ ತೊಗರಿ ಮತ್ತು ಟೊಮೆಟೋ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಬುಧವಾರ ಟ್ವೀಟ್ ಮಾಡಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಟ್ವೀಟ್‌ನಲ್ಲಿ ತೊಗರಿ, ಟೊಮೆಟೋ ಸೇರಿದಂತೆ ಮುಂತಾದ ವಸ್ತುಗಳ ಬೆಲೆ ದೇಶೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ "ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದರು. ಇದೀಗ ಆ ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ? ಎಂದು ಪ್ರಶ್ನಿಸಿದೆ.
ಎಲ್ಲವುಗಳ ಬೆಲೆ ಹೆಚ್ಚಾಗುತ್ತಲೆ ಇದೆ. ಇದು ಜನರಿಗೆ ಹೊರೆಯಾಗಿದೆ. ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆ ಯಾವಾಗ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ.
— Karnataka Congress (@INCKarnataka) June 28, 2023
ಹಿಂದೆ ತಾವು ಅಧಿಕಾರದಲ್ಲಿದ್ದಾಗ "ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದ @BJP4Karnataka ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ?
ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ… pic.twitter.com/S2j2ZC3q2j
ಕೆಲವೇ ವಾರಗಳ ಹಿಂದೆ 20 ರಿಂದ 30 ರೂಪಾಯಿ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ ದೇಶದ ಬಹುತೇಕ ಭಾಗಗಳಲ್ಲಿ ಪ್ರತಿ ಕೇಜಿಗೆ 100 ರೂಪಾಯಿ ತಲುಪಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 110 ರೂಪಾಯಿಯ ಗಡಿ ದಾಟಿದೆ. ಬೆಂಗಳೂರಿನಲ್ಲಿ ಕೇಜಿ ಟೊಮೆಟೋ ದರ 125 ರೂಪಾಯಿ ವರೆಗೆ ಹೆಚ್ಚಾಗಿದೆ. ಒಂದು ವೇಳೆ ನಗರದ ಮಾರುಕಟ್ಟೆಗಳಿಗೆ ಟೊಮೆಟೋ ಬಾರದೇ ಹೋದರೆ ಇದರೆ ಬೆಲೆ ಇನ್ನೂ 150 ರೂ.ವರೆಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಈ ಬೆಲೆ ಏರಿಕೆ ಕುರಿತ ಫೋಟೊ ಹಂಚಿಕೊಂಡ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಟುವಾಗಿ ಟೀಕಿಸಿದೆ.
ಎಲ್ಲೆಲ್ಲಿ ಎಷ್ಟು ದರವಿದೆ
ತೊಗರಿ, ಕಾಪಿ ಪುಡಿ ಸೇರಿದಂತೆ ದಿನಸಿ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಹಿಂದೆಯೇ ಅಡುಗೆ- ವಾಣಿಜ್ಯ ಬಳಕೆ ಅನಿಲ ದರ ಏರಿಕೆ ಆಗಿತ್ತು. ಇನ್ನೂ ಬೀನ್ಸ್, ಮೆಣಸಿನಕಾಯಿ, ಟೊಮೆಟೋ ಇನ್ನಿತರ ಬೆಲೆ ಏರುಗತಿಯಲ್ಲಿವೆ.
ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಕೋಲಾರ ಎಪಿಎಂಸಿಯಲ್ಲಿ 15 ಕೆಜಿ ತೂಕದ ಒಂದು ಟೊಮೆಟೋ ಬಾಕ್ಸ್ 1,100 ರೂ. ನಿಗದಿಯಾಗಿದೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ 20 ಕೆಜಿ ತೂಕದ ಟೊಮೆಟೋ ಒಂದು ಚೀಲದ ಬೆಲೆ 2400 ರೂಪಾಯಿ ಇದೆ. ಇದೇ ರೀತಿ ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬೆಲೆ ಏರಿಕೆಯು ಗ್ರಾಹಕ ಜೇಬಿಗೆ ಕತ್ತರಿ ಹಾಕುತ್ತಿವೆ.












Click it and Unblock the Notifications