ನಮ್ಮ ಮೆಟ್ರೋದಲ್ಲಿ ಮಿತಿಮೀರಿದೆ ಕುಡುಕರ ಹಾವಳಿ
ಬೆಂಗಳೂರು, ಏಪ್ರಿಲ್ 03: ನಮ್ಮ ಮೆಟ್ರೋ ಅವಧಿ ರಾತ್ರಿ 11ಗಂಟೆಯವೆರೆಗೆ ವಿಸ್ತರಣೆಯಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಕುಡುಕರ ಸಂಖ್ಯೆಯೂ ಮಿತಿ ಮೀರಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ನಮ್ಮ ಮೆಟ್ರೋದಲ್ಲಿ ಕುಡುಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮದ್ಯ ಸೇವಿಸಿ ಪ್ರಯಾಣ ಮಾಡಬಾರದು ಎನ್ನುವ ನಿಯಮವೇನೋ ಇದೆ ಆದರೆ ಪ್ರಯಾಣಿಕರಿಗೆ ನಿಯಮ ಪಾಲಿಸುವ ಮನಸಿರಬೇಕಲ್ಲವೇ. ಸಂಜೆಯಾಗುತ್ತಿದ್ದಂತೆಯೇ ಕುಡಿದು ಬರುವ ಪ್ರಯಾಣಿಕರ ಸಂಖ್ಯೆ ಏರುತ್ತಿದೆ.
ಇದು ಇತರೆ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಸಹಿಸಿಕೊಳ್ಳಲಾಗದ ದುರ್ವಾಸನೆ ಕುರಿತು ಪದೇ ಪದೇ ದೂರುಗಳು ಬಿಎಂಆರ್ ಸಿಎಲ್ ಗೆ ಸಲ್ಲಿಕೆಯಾಗುತ್ತಿದೆ. ಆದರೆ ಮದ್ಯ ಸೇವನೆ ಮಾಡಿದ್ದಾರೆಯೇ ಎಂದು ಪರೀಕ್ಷಿಸಲು ಯಾವುದೇ ಮಾನದಂಡ ಅಧಿಕಾರಿಗಳ ಬಳಿ ಇಲ್ಲದಾಗಿದೆ.

ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಎಂಜಿ ರಸ್ತೆ ನಿಲ್ದಾಣಗಳಲ್ಲಿ ಪ್ರತಿ ದಿನ ಸಂಜೆ ಹಲವರು ಮದ್ಯಪಾನ ಮಾಡಿಕೊಂಡು ರೈಲು ಹತ್ತುತ್ತಿದ್ದಾರೆ. ಸೇವಿಸಿದ ಮದ್ಯ ಪ್ರಮಾಣವನ್ನು ತಿಳಿಯಲು ನಿಲ್ದಾಣದಲ್ಲಿ ಆಲ್ಕೋಮೀಟರ್ ಇಲ್ಲ. ಮದ್ಯಪಾನ ಮಾಡಿದ ವ್ಯಕ್ತಿಯ ಬಾಯಿಯ ದುರ್ವಾಸನೆ ಹಾಗೂ ನಡೆಯುವ ವಿಧಾನ ನೋಡಿಯೇ ಪತ್ತೆ ಮಾಡಬೇಕಾದ ಅನಿವಾರ್ಯತೆ ಇದೆ.
ಹೊಸ ದಿಲ್ಲಿ ಮೆಟ್ರೋದಲ್ಲಿ ಆಲ್ಕೋಮೀಟರ್: ಹೊಸದಿಲ್ಲಿ ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿಗೆ ಆಲ್ಕೋಮೀಟರ್ ನೀಡಲಾಗಿದೆ.ಮದ್ಯಪಾನ ಮಾಡಿರುವ ಸಂಶಯ ಬಂದರೆ, ಪ್ರಯಾಣಿಕರನ್ನು ಕಡೆಸಿ ಆಲ್ಕೋಮೀಟರ್ ಬಾಯಿಗಿಟ್ಟು ಪತ್ತೆ ಮಾಡಲಾಗುತ್ತದೆ. ತಪ್ಪು ಸಾಬೀತಾದರೆ ದಂಡ ವಿಧಿಸಲಾಗುತ್ತದೆ.











Click it and Unblock the Notifications