ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸಂಚಾರ: ಸಮಯ, ಮಾರ್ಗ ವಿವರ ತಿಳಿಯಿರಿ

ಬೆಂಗಳೂರು, ಜನವರಿ 08: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇಂದು (ಜನವರಿ 08) ಸೋಮವಾರದಿಂದ ಮೂರು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳು ಈ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭಿಸಿದ್ದು, ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ.

ಬಿಎಂಟಿಸಿ ಬಸ್‌ ನಂಬರ್‌ 410- ನಾಗರಭಾವಿ ಸರ್ಕಲ್, ಕತ್ರಿಗುಪ್ಪೆ, ಬನಶಂಕರಿ ಮತ್ತು ರಾಗಿಗುಡ್ಡ ಮೂಲಕ ಬಂಡೆ ಮಾರಮ್ಮ ದೇವಸ್ಥಾನದಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಸಂಚರಿಸಲಿದೆ. ಈ ಮಾರ್ಗಗಳಲ್ಲಿ ಒಂದು ಟ್ರಿಪ್ ಇರಲಿದ್ದು, ಬೆಳಗ್ಗೆ 8.30ಕ್ಕೆ ಬಂಡೆ ಮಾರಮ್ಮ ಬಸ್ ನಿಲ್ದಾಣದಿಂದ ಹಾಗೂ ಸಂಜೆ 4.15ಕ್ಕೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಸ್‌ ಹೊರಡಲಿದೆ.

Three New BMTC Bus Routes Starts From January 8

ಬಿಎಂಟಿಸಿ ಬಸ್‌ ನಂಬರ್‌ 215- ಕಾರ್ಪೊರೇಷನ್ ಸರ್ಕಲ್, ವಿಜಯಾ ಕಾಲೇಜು, ಜಯನಗರ 5ನೇ ಬ್ಲಾಕ್ ಮತ್ತು ಡೆಲ್ಮಿಯಾ ಸರ್ಕಲ್‌ ಮಾರ್ಗದ ಮೂಲಕವಾಗಿ ವಿನಾಯಕ ನಗರ ಬಸ್‌ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ 12 ಟ್ರಿಪ್‌ಗಳಿರಲಿದ್ದು, ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬೆಳಗ್ಗೆ 6.30, 8.35, 11.10, ಸಂಜೆ 4.35, 6.45 ಮತ್ತು ರಾತ್ರಿ 9.20ಕ್ಕೆ ಈ ಬಸ್‌ ಹೊರಡಲಿದೆ. ಹಾಗೂ ವಿನಾಯಕ ನಗರ ಬಸ್‌ ನಿಲ್ದಾಣದಿಂದ 7.30, 9.40, ಮಧ್ಯಾಹ್ನ 3.10, 5.40 ಮತ್ತು 7.50ಕ್ಕೆ ಹೊರಡಲಿದೆ.

ಮೆಟ್ರೋ ಫೀಡರ್ ಬಸ್

ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ನಂಬರ್‌ 20/1- ಕೋಣನಕುಂಟೆ ಕ್ರಾಸ್‌ ಬಸ್‌ ನಿಲ್ದಾಣದಿಂದ ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ಮೂಲಕ ಬ್ರಿಗೇಡ್ ಬಸ್‌ನಿಲ್ದಾಣಕ್ಕೆ ತೆರಳಲಿದೆ. ಈ ಮಾರ್ಗಗಳಲ್ಲಿ ದಿನಕ್ಕೆ 15 ಟ್ರಿಪ್‌ಗಳು ಇರಲಿದ್ದು, ಕೋಣನಕುಂಟೆ ಕ್ರಾಸ್‌ ಬಸ್‌ ನಿಲ್ದಾಣದಿಂದ ಬೆಳಗ್ಗೆ 8.30, 10.25, ಮಧ್ಯಾಹ್ನ 12.30, 2.00, 3.30, ಸಂಜೆ 5.50 ಮತ್ತು ರಾತ್ರಿ 7.45 ಕ್ಕೆ ಹೊರಡಲಿದೆ. ಹಾಗೂ ಬ್ರಿಗೇಡ್ ಬಸ್‌ನಿಲ್ದಾಣದಿಂದ ಬೆಳಗ್ಗೆ 7.30, 9.25, 11.45, ಮಧ್ಯಾಹ್ನ 1.15, 2.45, ಸಂಜೆ 4.50, 6.45 ಮತ್ತು ರಾತ್ರಿ 8.40ಕ್ಕೆ ಹೊರಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+