ಚೌಡಯ್ಯದಲ್ಲಿ ದಿ ಸ್ಟಾರ್ ಧ್ರುವ ವಿಭಿನ್ನ ನೃತ್ಯರೂಪಕ
ಬೆಂಗಳೂರು, ಏ.15: ವಿಭಿನ್ನವಾದ ನೃತ್ಯ ರೂಪಕ 'ದಿ ಸ್ಟಾರ್ ಧ್ರುವ' ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಏಪ್ರಿಲ್ 19ರಂದು ನಡೆಯಲಿದೆ.ಯುವ ಪ್ರತಿಭೆ ಅಪೂರ್ವ ಧ್ರುವನ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧ್ರುವನ ಕತೆಯನ್ನು ವಿಷಯವಾಗಿಟ್ಟುಕೊಂಡು ರೂಪಕ ರಚಿಸಲಾಗಿದೆ.
ಅಂದು ಸಂಜೆ 6.30ಕ್ಕೆ ನೃತ್ಯ ರೂಪಕ ಆರಂಭವಾಗಲಿದೆ. ಧ್ರುವನ ಜೀವನ ಅದರಲ್ಲಿ ಭಯ, ಭರವಸೆ, ತಮಾಷೆ, ಸಂತೋಷ, ಗೆಲುವು ಇನ್ನಿತರೆ ಅಂಶಗಳಿವೆ.

ಈ ನೃತ್ಯರೂಪಕವನ್ನು ಡಾ. ವೀಣಾಮೂರ್ತಿ ನಿರ್ದೇಶಿಸಿದ್ದು, ಶ್ರೀ ರಾಜರಾಜೇಶ್ವರಿ ಕಲಾನಿಕೇತನ, ಆಯಾನ ಸೇರಿದಂತೆ ವಿವಿಧ ನೃತ್ಯ ಸಂಸ್ಥೆಯ ನೃತ್ಯಗಾರರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications